'ಗೀತಾ ಚುನಾವಣೆಗೆ ನಿಂತಿದ್ದು ತಪ್ಪಾ? ನನ್ನ ಪತ್ನಿ ಗೆಲ್ಲಲಿ ಅಂತಾ ಆಸೆ ಪಟ್ಟಿದ್ದು ತಪ್ಪಾ?' ಶಿವಣ್ಣ ಭಾವುಕ ಮಾತು
ಸುಮಾರು 50-60 ದಿನಗಳ ಕಾಲ ಕ್ಷೇತ್ರದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿದ್ದೆನೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಮುಖಂಡರು ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಶಿವಮೊಗ್ಗ (ಜೂ.10): ಸುಮಾರು 50-60 ದಿನಗಳ ಕಾಲ ಕ್ಷೇತ್ರದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿದ್ದೆನೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಮುಖಂಡರು ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಇಂದು ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ನಮ್ಮಪ್ಪನ ಮಕ್ಕಳು, ಭಯದಿಂದ ಬದುಕಿದವರು. ನಾನು ನನ್ನ ಆಸ್ತಿಯನ್ನ ಯಾರಿಗಾದರೂ ಬರೆದುಕೊಟ್ಟು ಕೂಲಿ ಕೆಲಸ ಮಾಡಿಯಾದರೂ ನನ್ನ ಹೆಂಡತಿ ಮಕ್ಕಳನ್ನ ಸಾಕುತ್ತೇನೆ. ಗೀತಾ ಚುನಾವಣೆಗೆ ನಿಂತಿದ್ದು ತಪ್ತಾ? ನನ್ನ ಪತ್ನಿ ಚುನಾವಣೆಯಲ್ಲಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ? ನಾನು ಬಣ್ಣದ ಮಾತುಗಳನ್ನಾಡುತ್ತೇನೆ ಎಂದು ಕೆಲವರು ಆಡಿಕೊಂಡರು, ನಾನು ಸಿನಿಮಾಗಳಲ್ಲಷ್ಟೇ ಬಣ್ಣ ಹಚ್ಚುತ್ತೇನೆ, ನಿಜ ಜೀವನದಲ್ಲಿ ಪ್ರಾಮಾಣಿಕವಾಗಿ ಜೀವನ ಮಾಡುತ್ತಿದ್ದೇವೆ ಎಂದರು.
ಸೋತಿದ್ದೇವೆಂದು ಟಾಟಾ ಬೈಬೈ ಹೇಳೊಲ್ಲ, ಇಲ್ಲಿಯೇ ಇರುತ್ತೇವೆ: ಗೀತಾ ಶಿವರಾಜ್ ಕುಮಾರ್
ರಾಜಕಾರಣದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಸ್ಥಾನಕ್ಕೆ ಬರಬೇಕು ಅಂತಾ ಕಷ್ಟಪಡ್ತಾರೆ. ಆ ರೀತಿ ಕಷ್ಟ ಪಡೋದು ತಪ್ಪಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಆಸೆ ಅನ್ನೋದು ಇರುತ್ತೆ. ನಾನು ನನ್ನ ಪತ್ನಿ ಗೆಲ್ಲಬೇಕು ಬೇಕು ಎಂದು ಆಸೆ ಪಟ್ಟಿದ್ದೆ. ಅದಕ್ಕಾಗಿ 50 ದಿನಗಳ ಕಾಲ ಕಾರ್ಯಕರ್ತನಾಗಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಕಾರ್ಯಕರ್ತರೊಂದಿಗಿನ ಆ 50 ದಿನಗಳ ಓಡಾಟ ಸಾಕಷ್ಟು ದೊಡ್ಡ ಅನುಭವ ನೀಡಿದೆ ಎಂದರು..
ಶಿವರಾಜ್ ಕುಮಾರ್ ಬಗ್ಗೆ ಮಾತಾಡಲು ಒಬ್ಬ ಸ್ಯಾಡಿಸ್ಟ್ ಇದ್ದಾನೆ, ಹೆಸರೆತ್ತದೇ ಕುಮಾರ ಬಂಗಾರಪ್ಪ ವಿರುದ್ಧ ಮಧು ಕಿಡಿ
ಸಾವಿರ ಜನರು ಸಾವಿರ ಮಾತಾಡ್ತಾರೆ. ಯಾರು ಏನೇ ಹೇಳಿದರೂ ಬದುಕುವುದು, ನಟನೆ ಮಾಡೋದು ಬಿಡೋಕಾಗುತ್ತಾ? ಈ ಚುನಾವಣೆಯಲ್ಲಿ ಗೀತಾ ಸೋತಿರಬಹುದು ಆದರೆ ಕ್ಷೇತ್ರದ ಮತದಾರರು ನಮ್ಮನ್ನ ಬೆಂಬಲಿಸಿದ್ದಾರೆ, ಹೆಚ್ಚು ಮತಗಳನ್ನ ನೀಡಿದ್ದಾರೆ, ಪ್ರೀತಿ ತೋರಿಸಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಅದೇ ಕ್ಷೇತ್ರದಲ್ಲೇ ಸ್ಪರ್ಧಿಸಿ ಗೆಲ್ಲುವ ಸುಳಿವು ನೀಡಿದರು.