ಬೆಂಗಳೂರು (ಸೆ.27): ಕೊರೋನಾ ಅನ್ನು ಜಗತ್ತಿಗೆ ಕೊಡುಗೆ ನೀಡಿದ ಚೀನಾದ ವಿರುದ್ಧ ನಟ ಅನಂತ್‌ನಾಗ್‌ ಕಿಡಿಕಾರಿದ್ದಾರೆ. ‘2020 ಅತ್ಯಂತ ಕೆಟ್ಟ ವರ್ಷ.

 ಕೊರೋನಾದಿಂದಾಗಿ ಎಂತೆಂಥವರು ಹೋಗಿಬಿಟ್ಟರು. ದೇಹ ಕೂಡ ನೋಡಲಾಗದಂತಹ ಕೊರೋನಾ ನಮ್ಮೆಲ್ಲರ ದುರಂತ. ಎಸ್‌ಪಿಬಿ ಸಾವಿನಿಂದ ಆ ದುರಂತ ಆಳವಾಗಿಬಿಟ್ಟಿದೆ. ಕೊರೋನಾ ಕೊಟ್ಟ ಚೀನಾದ ವಿರುದ್ಧ ಏನೂ ಮಾಡದೆ ಇಡೀ ಜಗತ್ತು ಸುಮ್ಮನಿದೆ’ ಎಂದಿದ್ದಾರೆ. 

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್ ..

‘ಎಸ್‌ಪಿಬಿ 50 ದಿನ ಕೊರೋನಾ ಜತೆ ಹೋರಾಟ ಮಾಡಿ ನಮ್ಮಿಂದ ದೂರಾದರು. ಸಿಲ್ಕ್ ರೋಡ್ಸ್‌ ಎಂಬ ಪುಸ್ತಕದಲ್ಲಿ ಪೀಟರ್‌ ಫ್ರಾಂಕೋಪನ್‌ ಕ್ರಿಸ್ತಪೂರ್ವ ಮತ್ತು ಕ್ರಿಸ್ತ ಶಕದ ಸುಮಾರು 5000 ವರ್ಷಗಳ ಇತಿಹಾಸ ಬರೆಯುತ್ತಾ ಈ ಹಿಂದೆ ಸುಮಾರು ಮಹಾಮಾರಿಗಳು ಸಾವು, ನೋವು ಉಂಟು ಮಾಡಿದ್ದವು ಎಂದಿದ್ದಾನೆ. 

ಆದರೆ ಈ ಮಟ್ಟದ ಸಾವು, ನೋವು ಯಾವತ್ತೂ ಆಗಿರಲಿಲ್ಲ ಅಂತ ಕಾಣುತ್ತದೆ. ಇದಕ್ಕೆಲ್ಲಾ ಕಾರಣ ಚೀನಾ’ ಎಂದು ಅವರು ದೂರಿದ್ದಾರೆ.