ಕಾಲು ಜಾರಿ ಬಿದ್ದಿದ್ದರಿಂದ ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಸದ್ಯ ತಿಮ್ಮಕ್ಕ ಅವರಿಗೆ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಅಪೋಲೊ ಆಸ್ಪತ್ರೆಯ ವೈದ್ಯರು. 

ಬೆಂಗಳೂರು(ಆ.06):  ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು(ಭಾನುವಾರ) ಸಂಜೆ ಬೆಂಗಳೂರಿನ ಜಯನಗರದ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಅವರು ಕಾಲು ಜಾರಿ ಬಿದ್ದಿದ್ದರು. ಹೀಗಾಗಿ ಅವರನ್ನ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಕಾಲು ಜಾರಿ ಬಿದ್ದಿದ್ದರಿಂದ ಬೆನ್ನು ಮೂಳೆಗೆ ಪೆಟ್ಟಾಗಿದ್ದು, ಸದ್ಯ ತಿಮ್ಮಕ್ಕ ಅವರಿಗೆ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೊ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 

ಸಾಲು ಮರದ ತಿಮ್ಮಕ್ಕನ ಎದುರು ಕಣ್ಣೀರು ಹಾಕಿದ ದೇವೇಗೌಡರು: ಕಾರಣ ಏನು?

ಸದ್ಯ ಸಾಲು ಮರದ ತಿಮ್ಮಕ್ಕರವರಿಗೆ MRI ಸ್ಕ್ಯಾನಿಂಗ್ ನಡೀತಿದೆ. ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬೆನ್ನು ಮೂಳೆಯಲ್ಲಿ ನೋವು ಕಾಣಿಸಿಕೊಂಡಿದೆ. ವಯೋಸಹಜವಾಗಿ ಕೆಲ ನೋವುಗಳು ಇರೋದ್ರಿಂದ ಈ ನೋವು ಹೆಚ್ಚು ಕಾಣಿಸಿಕೊಂಡಿದೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ನಿನ್ನೆಯಿಂದ ತಾಯಿಯ ಆರೋಗ್ಯ ಸ್ವಲ್ಪ ಏರುಪೇರಾಗಿತ್ತು. ಹಾಸನದಿಂದ ಇಂದು ಬೆಂಗಳೂರಿಗೆ ಬಂದಿದ್ದರು. ಗೃಹ ಸಚಿವ ಪರಮೇಶ್ವರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬಂದಿದ್ರು, ಮನೆಯಲ್ಲಿ ಇದ್ದಕ್ಕಿದ್ದಂತೆ ಕಾಲುಜಾರಿ ಬಿದ್ದುಬಿಟ್ರು. ಸದ್ಯ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಕೊಡ್ತಿದ್ದಾರೆ. ಹೋಂ ಮಿನಿಸ್ಟರ್ ಪರಮೇಶ್ವರ್ ಅವರು ಫೋನ್ ತಾಯಿಯ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸರ್ಕಾರದಿಂದ ಚಿಕಿತ್ಸೆಗೆ ಬೇಕಾದ ಸಹಾಯ ಮಾಡಲಾಗುವುದು ಎಂದಿದ್ದಾರೆ ಎಂದು ಅಂತ ಸಾಲು ಮರದ ತಿಮ್ಮಕ್ಕನವರ ಪುತ್ರ ಉಮೇಶ್ ತಿಳಿಸಿದ್ದಾರೆ.