'ನಾನೂ ರೌಡಿ, ನನಗೂ ಎಂಎಲ್‌ಎ ಟಿಕೆಟ್‌ ಕೊಡಿ' ಎಂದಿದ್ದ ರೌಡಿ ಶೀಟರ್‌ಗೆ ಕಮೀಷನರ್‌ ಎಚ್ಚರಿಕೆ!

ನಾನು ರೌಡಿ, ನಾನೂ ರಾಜಕೀಯಕ್ಕೆ ಬರ್ತೀನಿ, ಬಿಜೆಪಿಯಿಂದ ನನಗೂ ಟಿಕೆಟ್‌ ನೀಡಿ ಎಂದಿದ್ದ ರೌಡಿ ಶೀಟರ್‌ ಪಾನಿಪುರಿ ಮಂಜನಿಗೆ ಮೈಸೂರು ಪೊಲೀಸರು ಚಳಿ ಬಿಡಿಸಿದ್ದಾರೆ. ಪೊಲೀಸ್‌ ಕಮೀಷನರ್‌ ರಮೇಶ್‌ ಬಾನೋತ್‌,, ಮಂಜನಿಗೆ ಖಡಕ್ ವಾರ್ನಿಂಗ್‌ ಕೊಟ್ಟಿದ್ದಾರೆ.

Rowdy Sheeter Panipuri Manja seeks entry into Politics Police Commissioner Warning san

ಮೈಸೂರು (ಫೆ.14): ರಾಜಕಾರಣಿಗಳನ್ನು ಹಾಗೂ ರಾಜಕೀಯ ಪಕ್ಷಗಳನ್ನು ಲೇವಡಿ ಮಾಡಿದ್ದ ರೌಡಿ ಶೀಟರ್‌ ಪಾನಿಪುರಿ ಮಂಜನಿಗೆ ಪೊಲೀಸ್‌ ಕಮೀಷನರ್‌ ಚಳಿ ಬಿಡಿಸಿದ್ದಾರೆ. 'ನಾನೂ ಕೂಡ ರೌಡಿ, ಬಿಜೆಪಿಯಿಂದ ಚುನಾವಣೆಗೆ ನಿಲ್ತೇನೆ. ನನಗೂ ಟಿಕೆಟ್‌ ನೀಡಿ' ಎಂದು ವ್ಯಂಗ್ಯ ಮಾಡುವ ಮೂಲಕ ಪೊಲೀಸರ ಕೆಂಗಣ್ಣಿಗೆ ತುತ್ತಾಗಿದ್ದ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ, ಪೊಲೀಸರು ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಬಾಗಿಲನ್ನು ಪೊಲೀಸರು ಬಡಿದಿದ್ದರು. ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಶೀಟರ್ ಗಳ ಪೆರೇಡ್ ನಡೆಸಲಾಗಿದೆ. ಈ ವೇಳೆ ಹಾಜರಿದ್ದ ಪಾನಿಪುರಿ ಮಂಜನಿಗೆ ಪೊಲೀಸರು ವಾರ್ನಿಂಗ್‌ ನೀಡಿದ್ದು,  ಬಾಲ ಬಿಚ್ಚಿದ್ರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೌಡಿ ಪೆರೇಡ್‌ನಲ್ಲಿ ಪಾನಿಪುರಿ ಮಂಜನಿಗೆ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಖಡಕ್ ವಾರ್ನಿಂಗ್ ನೀಡಿದರು. ಬೀದರ್‌, ಬಳ್ಳಾರಿನೋ, ರಾಯಚೂರಿಗೊ ಗಡಿಪಾರು ಮಾಡಿ. ಅಲ್ಲಿ ಹೋಗಿ ಚುನಾವಣೆಯಲ್ಲಿ ನಿಂತುಕೊಳ್ಳಲಿ. ನಾಲ್ಕು ನಾಲ್ಕು ಕೇಸ್ ಮಾಡ್ಕೊಂಡು ಎಂಎಲ್‌ಎ ಟಿಕೆಟ್‌ ಕೇಳ್ತಾನೆ. ಜಾಸ್ತಿ ಬಾಲ ಬಿಚ್ಚಿದ್ರೆ ಏನ್‌ ಮಾಡ್ಬೇಕು ಅಂತಾ ಗೊತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.

'ಇಷ್ಟೊಂದು ಕಷ್ಟಪಟ್ಟು ರೌಡಿ ಪೆರೇಡ್ ಮಾಡಿದ್ದಾರೆ ಪೊಲೀಸ್ ಸಾಹೇಬರು. ಗೆದ್ದ ಮೇಲೆ ಅವರೇ ಮುಂದೆ ನಿಂತು ಸೆಕ್ಯುರಿಟಿ ಕೊಡೋ ರೀತಿ ಆಗುತ್ತದೆ' ಎಂದು ಪೊಲೀಸರ ಎಚ್ಚರಿಕೆಯ ನಂತರವೂ ಪಾನಿಪುರಿ ಮಂಜ ಗುಡುಗಿದ್ದಾರೆ. ಮೈಸೂರಿನಲ್ಲಿ ನಡೆದ ರೌಡಿ ಪರೇಡ್‌ ಬಳಿಕ ಮಂಜ ಈ ಮಾತು ಹೇಳಿದ್ದಾರೆ. 'ನಾನು ರಾಜಕಾರಣಿಗಳಿಗೆ ವ್ಯಂಗ್ಯ ಮಾಡಿ ಪ್ರತಿಭಟನೆ ಮಾಡಿದ್ದೆ. ಬಿಜೆಪಿ ಪಕ್ಷದ ನಾಯಕರ ಬಗ್ಗೆ ವ್ಯಂಗ್ಯ ಮಾಡಿದ್ದೆ. ಸಂಸದರೇ ಇದನ್ನೆ ಶೇರ್‌ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ನಾನೂ ರೌಡಿ ನನಗೂ ಟಿಕೆಟ್‌ ಕೊಡಿ ಎಂದು ಕೇಳಿದ್ದೆ.ಆದರೆ ನನಗೆ ಯಾಕೆ ರಾಜಕಾರಣ ಎಂದು ಪಾನಿಪುರಿ ಮಂಜ ಹೇಳಿದ್ದಾನೆ.

Mysuru: ನಾನೂ ರೌಡಿ ನನಗೆ ಬಿಜೆಪಿಯಲ್ಲಿ ಸ್ಥಾನ ಕೊಡಿ- ಕೋರ್ಟ್ ಬಳಿ ರೌಡಿಶೀಟರ್ ಪ್ರತಿಭಟನೆ

ರೌಡಿ ಶೀಟರ್‌ ಪರೇಡ್‌ನಲ್ಲಿ ಪೊಲೀಸ್ ಠಾಣೆಗಳ 76 ರೌಡಿಶೀಟರ್‌ಗಳು ಭಾಗಿಯಾಗಿದ್ದರು. ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಮ್ಮುಖದಲ್ಲಿ ರೌಡಿ ಶೀಟರ್ ಗಳಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುವುದಾಗಿ ರೌಡಿಶೀಟರ್‌ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಎಚ್ಚರಿಕೆ ನೀಡಿದ್ದಾರೆ. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿಗಳ ಪರೇಡ್‌ ವೇಳೆ ಉಪಸ್ಥಿತರಿದ್ದರು. 

Davanagere News: ಅಡ್ಡದಾರಿ ಹಿಡಿದು ಹೀರೋ ಆಗೋಕೆ ಪ್ರಯತ್ನಿಸ್ಬೇಡಿ: ರೌಡಿ ಶೀಟರ್‌ಗಳಿಗೆ ಎಸ್ಪಿ ರಿಷ್ಯಂತ್ ಖಡಕ್‌ ವಾರ್ನಿಂಗ್

7 ಜನರ ಗಡಿಪಾರು: ಈ ವರೆಗೆ ಮೈಸೂರಿನಲ್ಲಿ 7 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಇನ್ನೂ 15 ಜನರನ್ನು ಗಡಿಪಾರು ಮಾಡಲು ಸಿದ್ದತೆ ನಡೆದಿದೆ. ತಾನೂ ರೌಡಿ, ತನಗೂ ಎಂಎಲ್‌ಎ ಟಿಕೆಟ್‌ ಕೊಡುವಂತೆ ಕೇಳಿದ್ದ ಪಾನಿಪುರಿ ಮಂಜ‌ನಿಗೆ ವಾರ್ನಿಂಗ್ ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಆದರೆ ಶಾಂತಿ ಕದಡುವಂತ ಕೆಲಸಗಳಿಗೆ ಕೈ ಹಾಕಬಾರದು. ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತ ರಮೇಶ್‌ ಬಾನೋಟ್‌ ಹೇಳಿದ್ದಾರೆ.

Latest Videos
Follow Us:
Download App:
  • android
  • ios