Asianet Suvarna News Asianet Suvarna News

Davanagere News: ಅಡ್ಡದಾರಿ ಹಿಡಿದು ಹೀರೋ ಆಗೋಕೆ ಪ್ರಯತ್ನಿಸ್ಬೇಡಿ: ರೌಡಿ ಶೀಟರ್‌ಗಳಿಗೆ ಎಸ್ಪಿ ರಿಷ್ಯಂತ್ ಖಡಕ್‌ ವಾರ್ನಿಂಗ್

ದಾವಣಗೆರೆ ಎಸ್ಪಿ ಸಿ.ಬಿ ರಿಷ್ಯಂತ್‌ರವರು (C.B. Ryshyanth) ನಗರದ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿ ಮೊದಲಿಗೆ ಸಕ್ರಿಯವಾಗಿರುವ ರೌಡಿ ಶೀಟರ್‌ಗಳು ಮಾಡಿರುವ ಕೊಲೆ, ಸುಲಿಗೆಗಳ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.

parade for rowdysheeters in davanagere by sp ryshyanth ash
Author
First Published Jan 4, 2023, 9:30 PM IST

(ವರದಿ : ವರದರಾಜ್) 

ದಾವಣಗೆರೆ (ಜನವರಿ 4): ದಾವಣಗೆರೆ (Davangere) ಹೈಸ್ಕೂಲ್ ಮೈದಾನದಲ್ಲಿ ಇಂದು ರೌಡಿ ಶೀಟರ್‌ಗಳ (Rowdy Sheeter) ಪರೇಡ್ (Parade) ನಡೆದಿದೆ. ಬೆಳಗ್ಗೆ 8 ಗಂಟೆಗೆ ಹೈಸ್ಕೂಲ್ ಮೈದಾನದಲ್ಲಿ (High School Ground) ಆಯೋಜನೆಯಾಗಿದ್ದ ಪರೇಡ್ ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಿರುಬಿಸಿಲಿನಲ್ಲಿ ರೌಡಿಗಳು ಕಾದು ಬಸವಳಿದಿದ್ದಾರೆ .ಆಯಾ  ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಎಲ್ಲಾ ರೌಡಿಶೀಟರ್‌ಗಳು ಆಯಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (Police  Sub INspector) ಕರೆ‌ ನೀಡಿದಂತೆ ಹೈಸ್ಕೂಲ್ ಮೈದಾನಕ್ಕೆ ಬೆಳಗ್ಗೆಯೇ ಆಗಮಿಸಿದ್ದರು. ಖುದ್ದು ದಾವಣಗೆರೆ ಎಸ್ಪಿ ಸಿ.ಬಿ ರಿಷ್ಯಂತ್‌ರವರು (C.B. Ryshyanth) ನಗರದ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿ ಮೊದಲಿಗೆ ಸಕ್ರಿಯವಾಗಿರುವ ರೌಡಿ ಶೀಟರ್‌ಗಳು ಮಾಡಿರುವ ಕೊಲೆ, ಸುಲಿಗೆಗಳ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಳಿಕ ಪ್ರತಿಯೊಂದು ಪೋಲಿಸ್ ಠಾಣೆಯಡಿಯಲ್ಲಿ ಬರುವ ರೌಡಿ ಶೀಟರ್‌ಗಳು ಹೇಗೆ  ಸಕ್ರಿಯವಾಗಿದ್ದಾರೆ ಎಂದು ರೌಡಿಗಳಿಂದಲೇ ಮಾಹಿತಿ ಪಡೆದರು. 

ಎಷ್ಟು ಮರ್ಡರ್ ಮಾಡಿದ್ದೀಯಾ, ಸುಲಿಗೆ ಎಷ್ಟು, ಯಾವ ಕಾರಣಕ್ಕೆ ಮಾಡಿದ್ದೀಯಾ ಎಂದು ಗದರಿಸಿದರು. ಅಲ್ಲದೆ,  ಬದಲಾಗಲು ಅವಕಾಶ ಇದೆ ಬದಲಾಗಿ, ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಿ ಸಂಪಾದಿಸಿ ಹೀರೋ ಆಗೋಣ ಎಂದುಕೊಂಡಿದ್ರೆ ಬಿಟ್ಬುಡಿ, ಇಲ್ಲ ಅಂದ್ರೆ ನಿಮ್ಮನ್ನು ಸರಿ ದಾರಿಗೆ ತರಲು ನಮಗೆ ಗೊತ್ತಿದೆ ಎಂದು ಎಸ್ಪಿ ರಿಷ್ಯಂತ್ ರೌಡಿ ಶೀಟರ್‌ಗಳಿಗೆ ವಾರ್ನ್ ಮಾಡಿದರು. 

ಇದನ್ನು ಓದಿ: ಹೆದ್ದಾರಿಯುದ್ದಕ್ಕೂ ಆಟೋ ನಂಬರ್ ಪ್ಲೇಟ್ ರಿಕಗ್ನೇಶನ್ ಕ್ಯಾಮೆರಾ: ಎಸ್ಪಿ ರಿಷ್ಯಂತ್‌

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಪಾಲಿಕೆ ಬಿಜೆಪಿ ಸದಸ್ಯ ಶ್ರೀನಿವಾಸ್ ಹಾಗೂ ಸಂತೋಷ್ ಆಲಿಯಾಸ್ ಕಣುಮ ಎಂಬ ರೌಡಿ ಶೀಟರ್‌ಗಳನ್ನು ವಿಚಾರಿಸಿ ಸರಿ ದಾರಿಗೆ ಬರುವಂತೆ ಖಡಕ್ ಸೂಚನೆ ನೀಡಿದರು‌. ಈ ರೌಡಿ ಶೀಟರ್‌ಗಳ ಪೈಕಿ ಹಾಲಿ ಗ್ರಾಮ ಪಂಚಾಯತ್ ಅದ್ಯಕ್ಷರು ಒಬ್ಬರು ಬಂದಿದ್ದರು.15 ವರ್ಷಗಳ ಹಿಂದೆ ರೌಡಿಶೀಟರ್ ಸ್ಥಾನ ಪಡೆದು ಇಂದಿಗೂ ಆದೇ ಪಟ್ಟಿಯಲ್ಲಿ ಇದ್ದು ಸರತಿ ಸಾಲಿನಲ್ಲಿ ನಿಂತಿದ್ದರು‌.

ಜಿಲ್ಲೆಯಲ್ಲಿ 1400 ರೌಡಿ ಶೀಟರ್‌ಗಳಿದ್ದು ಐವರಿಗೆ ಗಡೀಪಾರು ಶಿಕ್ಷೆ..??

ದಾವಣಗೆರೆಯಲ್ಲಿ ಪೊಲೀಸರು ರೌಡಿ ಪರೇಡ್ ನಡೆಸಿ ಕೊಲೆ, ದರೋಡೆ, ಗ್ಯಾಂಬ್ಲಿಂಗ್ ಸೇರಿ ಇತರೆ ಪ್ರಕರಣಗಳ ಮಾಹಿತಿ ಸಂಗ್ರಹಿಸಿದರು. ಇನ್ನು ಸೂಕ್ತ ಮಾಹಿತಿ ನೀಡದ ರೌಡಿಶೀಟರ್‌ಗಳಿಗೆ ಎಸ್ಪಿ ತರಾಟೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಒಟ್ಟು 1400  ರೌಡಿಶೀಟರ್‌ಗಳಿದ್ದು, ಇಂದು 206 ರೌಡಿಶೀಟರ್‌ಗಳು ಪರೇಡ್‌ನಲ್ಲಿ ಭಾಗಿಯಾಗಿದ್ದರು. ಗಡೀಪಾರಿಗೆ ಕೆಲವು ರೌಡಿಶೀಟರ್‌ಗಳ ಹೆಸರು ಶಿಫಾರಸು ಮಾಡಿದ್ದು, ರೌಡಿಗಳ ಗಡೀಪಾರು ಮಾಡುವ ಬಗ್ಗೆ ಇನ್ನು ಆದೇಶ ಬಂದಿಲ್ಲ ಎಂದರು. 39 ರೌಡಿಶೀಟರ್‌ಗಳನ್ನ ಕ್ಲೋಸ್ ಮಾಡಲಾಗಿದ್ದು. ಈ ವರ್ಷ ಮತ್ತೆ 40 ಹೊಸ ರೌಡಿಶೀಟರ್ ಓಪನ್ ಮಾಡಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು. 

ಇದನ್ನೂ ಓದಿ: ಶಿಶು ಮಾರಾಟ ಕೇಸ್‌: ಅಜ್ಜ ಸೇರಿ ನಾಲ್ವರ ಬಂಧನ

ಬದಲಾಗಲು ಅವಕಾಶ ನೀಡಿದ ಎಸ್ಪಿ ರಿಷ್ಯಂತ್..!

ಇಂದು ನಡೆದ ರೌಡಿ ಶೀಟರ್‌ಗಳ ಪರೇಡ್ ನಲ್ಲಿ 206 ಜನ ರೌಡಿ ಶೀಟರ್‌ಗಳು ಭಾಗಿಯಾಗಿದ್ದು, ಅದರಲ್ಲಿ ಸಾಕಷ್ಟು ಜನ ಅಮಾಯಕರು ಕಂಡು ಬಂದ್ರು. ಇನ್ನು ಮಾಹಿತಿ ಕಲೆ ಹಾಕಿದ ಎಸ್ಪಿ ಸಿ.ಬಿ ರಿಷ್ಯಂತ್ ಬದಲಾಗಲು ಅವಕಾಶ ಕಲ್ಪಿಸಿದರು. ಪರೇಡ್‌ನಲ್ಲಿ ಭಾಗಿಯಾದ ಪಾಲಿಕೆ ಬಿಜೆಪಿ ಸದಸ್ಯ, ರೌಡಿ ಶೀಟರ್ ಜೆ.ಎನ್. ಶ್ರೀನಿವಾಸ್ ಪರೇಡ್‌ನಲ್ಲಿ ಭಾಗಿಯಾಗಿದ್ದೇನೆ, ಎಸ್ಪಿಯವರು ಬದಲಾಗುವ ಅವಕಾಶ ಕಲ್ಪಿಸಿದ್ದು, ಮನುಷ್ಯರಾಗಿ ಎಂದು ಬುದ್ಧಿವಾದ ಹೇಳಿದ್ದಾರೆ. ನಾನು ಬಿಜೆಪಿ ಪಾಲಿಕೆ ಸದಸ್ಯ ಕೂಡ ಆಗಿದ್ದೇನೆ, ಅದ್ರೇ ನಾವು ತಿಳಿಯದೆ ತಪ್ಪು ಮಾಡಿದ್ದೇವೆ, ಇಂದಿನ ಯುವಕರು ವಿದ್ಯಾರ್ಥಿಗಳು ಈ ರೀತಿ ತಪ್ಪು ಮಾಡಿ ರೌಡಿಶೀಟರ್ ಆಗ್ಬಾರದು ಎಂದು ಯುವ ಜನತೆಗೆ ಪಾಲಿಕೆ ಸದಸ್ಯ ಹಾಗೂ ರೌಡಿಶೀಟರ್ ಜೆ.ಎನ್. ಶ್ರೀನಿವಾಸ್ ಸಂದೇಶ ರವಾನಿಸಿದರು.

Follow Us:
Download App:
  • android
  • ios