Asianet Suvarna News Asianet Suvarna News

'ನಾನು ಹಿಂಗೆಲ್ಲ ಬದುಕಿಲ್ಲ ಬೇರೆ ರೂಂ ಕೊಡಿ' ಎಸ್‌ಐಟಿ ಅಧಿಕಾರಿಗಳ ಜೊತೆ ಪ್ರಜ್ವಲ್ ಮತ್ತೆ ಕಿರಿಕ್!

ನಾನು ಹಿಂಗೆಲ್ಲ ಬದುಕಿಲ್ಲ. ನನಗೆ ಸರಿಕೊಯಾದ ಟಾಯ್ಲೆಟ್ ಹಾಗೂ ಮಲಗಲು ರೂಂ ಕೊಡಿ ಎಂದಿದ್ದಾರೆ. ಆದರೆ ಸಂಸದ ಪ್ರಜ್ವಲ್ ರೇವಣ್ಣ ಮನವಿಗೆ ಎಸ್‌ಐಟಿ ಅಧಿಕಾರಿಗಳು ತಲೆಕೆಡಿಸಿ

Room and toilet not clean hassan mp prajwal revanna kirik with SIT officials again tav
Author
First Published Jun 2, 2024, 2:30 PM IST | Last Updated Jun 2, 2024, 2:39 PM IST

ಬೆಂಗಳೂರು (ಜೂ.2): ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣರನ್ನ ನ್ಯಾಯಾಲಯ ಆರು ದಿನಗಳ ಎಸ್‌ಐಟಿ ಕಸ್ಟಡಿಗೆ ನೀಡಿದೆ. ಆದರೆ ಎಸ್‌ಐಟಿ ಕಚೇರಿಯಲ್ಲಿ ಶೌಚಾಲಯ, ಕೊಠಡಿ ಶುಚಿಯಾಗಿಲ್ಲ, ಕೆಟ್ಟ ವಾಸನೆ ಬರುತ್ತಿದೆ. ಎಸ್‌ಐಟಿ ಕಚೇರಿಯಲ್ಲಿ ಉಸಿರಾಡಲು ಕಷ್ಟವಾಗಿದೆ ಎಂದು ನ್ಯಾಯದೀಶರ ಮುಂದೆ ಗೋಳು ತೋಡಿಕೊಂಡಿದ್ದ ಪ್ರಜ್ವಲ್. ಇದೀಗ ಮತ್ತೆ ಎಸ್‌ಐಟಿ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.

ಎಸ್‌ಐಟಿ ಕಚೇರಿಯಲ್ಲಿ ಸಾಮಾನ್ಯರಿಗೆ ನೀಡುವಂತಹ ಕೊಠಡಿ ನೀಡಿರುವ ಹಿನ್ನೆಲೆ ಟಾಯ್ಲೆಟ್ ಹಾಗೂ ರೂಮ್ ವಿಚಾರವಾಗಿ ಮತ್ತೆ ಕಿರಿಕ್ ಮಾಡಿದ್ದಾರೆ. 'ನಾನು ಹಿಂಗೆಲ್ಲ ಬದುಕಿಲ್ಲ. ನನಗೆ ಸರಿಯಾದ ಟಾಯ್ಲೆಟ್ ಹಾಗೂ ಮಲಗಲು ರೂಂ ಕೊಡಿ ಎಂದಿದ್ದಾರೆ. ಆದರೆ ಸಂಸದ ಪ್ರಜ್ವಲ್ ರೇವಣ್ಣ ಮನವಿಗೆ ತಲೆಕೆಡಿಸಿಕೊಳ್ಳದ ಎಸ್‌ಐಟಿ ಅಧಿಕಾರಿಗಳು. ಯಾವುದೇ ಆರೋಪಿಗಳಿಗಾದರೂ ಅದೇ ರೂಂ, ಅದೇ ಟಾಯ್ಲೆಟ್. ನಿಮ್ಮ ತಂದೆಗೆ ಸಹ ಇದೇ ರೂಂ, ಇದೇ ಟಾಯ್ಲೆಟ್ ಕೊಟ್ಟಿರುವುದಾಗಿ ಹೇಳಿರುವ ಎಸ್‌ಐಟಿ ಅಧಿಕಾರಿಗಳು. ಆದರೆ ಕೆಟ್ಟ ವಾಸನೆ ಬರುತ್ತಿದೆ ಉಸಿರಾಡುವುದು ಕಷ್ಟವಾಗ್ತಿದೆ ಅಂತಿರೋ ಪ್ರಜ್ವಲ್ ರೇವಣ್ಣ. 

ಕೆಟ್ಟ ವಾಸನೆ ಬರ್ತಿದೆ, ಎಸ್‌ಐಟಿ ರೂಂನಲ್ಲಿ ಉಸಿರಾಡಲು ಕಷ್ಟ: ಪ್ರಜ್ವಲ್ ರೇವಣ್ಣ

ನ್ಯಾಯಾಲಯದಲ್ಲಿ ವಾದ ನಡೆದ ವೇಳೆ ವಕೀಲ, ಆರೋಪಿಗೆ ಯಾವುದೇ ಐಷಾರಾಮಿ ವ್ಯವಸ್ಥೆ ಬೇಡ, ಸಾಮಾನ್ಯ ಕೈದಿ ಇರುವಂತೆ ಸಾಮಾನ್ಯ ಕೊಠಡಿಯಲ್ಲಿರಲಿ ಎಂದಿದ್ದರು ಇದೀಗ ಅದರಂತೆ ಸಾಮಾನ್ಯ ಕೊಠಡಿ ನೀಡಿರುವ ಎಸ್‌ಐಟಿ ಅಧಿಕಾರಿಗಳು.

ಹುಟ್ಟಿನಿಂದ ಐಷಾರಾಮಿ ಜೀವನಶೈಲಿ ರೂಢಿಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಏಕಾಏಕಿ ಎಸಿ ಇಲ್ಲದ ಸಾಮಾನ್ಯ ಕೊಠಡಿ, ಟಾಯ್ಲೆಟ್ ಬಳಸುವುದು ವಾಕರಿಕೆ ಬಂದಿರಲಿಕ್ಕೂ ಸಾಕು. ಅದರ ಮಾಡುವುದೇನು? ಮಾಡಿದ ಘನಂದಾರಿ ಕೆಲಸಕ್ಕೆ ಅನುಭವಿಸಲೇಬೇಕಿದೆ.
 

Latest Videos
Follow Us:
Download App:
  • android
  • ios