Asianet Suvarna News Asianet Suvarna News

ನ್ಯೂನತೆ ಇರುವ ರಾಷ್ಟ್ರಧ್ವಜಗಳನ್ನು ಹಿಂದಿರುಗಿಸಿ: ಬಿಬಿಎಂಪಿ ಮನವಿ

  • ನ್ಯೂನತೆ ಇರುವ ರಾಷ್ಟ್ರಧ್ವಜಗಳನ್ನು ಹಿಂದಿರುಗಿಸಿ: ಬಿಬಿಎಂಪಿ ಮನವಿ
  • ಧ್ವಜದ ಅಳತೆ, ಆಕಾರ, ಗಾತ್ರ, ಅಶೋಕ ಚಕ್ರದಲ್ಲಿ ವ್ಯತ್ಯಾಸ
  • *ಪ್ರತಿ ಮನೆಯಲ್ಲಿ ತ್ರಿವರ್ಣ ಅಭಿಯಾನಕ್ಕೆ ಧ್ವಜ ನೀಡಿದ್ದ ಬಿಬಿಎಂಪಿ
  • ಬಿಬಿಎಂಪಿಯ ಯಾವುದೇ ಕಚೇರಿಯಲ್ಲಿ ಬದಲಿ ಧ್ವಜ ಪಡೆಯಿರಿ

 

Return defective national flags BBMP appeals rav
Author
Bengaluru, First Published Aug 6, 2022, 8:49 AM IST

ಬೆಂಗಳೂರು (ಆ.6) : 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ನಡೆಯಲಿರುವ ಪ್ರತಿ ಮನೆಯಲ್ಲಿ ತ್ರಿವರ್ಣ (ಹರ್‌ ಘರ್‌ ತಿರಂಗಾ) ಅಭಿಯಾನಕ್ಕಾಗಿ ಬಿಬಿಎಂಪಿಯಿಂದ ಪಡೆದಿರುವ ಬಾವುಟಗಳಲ್ಲಿ ನ್ಯೂನತೆಗಳಿದ್ದರೆ ಹಿಂದಿರುಗಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ(ಆಡಳಿತ) ರಂಗಪ್ಪ ತಿಳಿಸಿದ್ದಾರೆ.

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

ಭಾರತದ ಧ್ವಜ ಸಂಹಿತೆಯ ಪ್ರಕಾರ, ಧ್ವಜದ(Flag) ಆಕಾರ, ಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಸಮಾನ ಗಾತ್ರ ಹಾಗೂ ಅಶೋಕ ಚಕ್ರವು ಮಧ್ಯಭಾಗದಲ್ಲಿರಬೇಕು. ಆದರೆ, ಅಳತೆ ವ್ಯತ್ಯಾಸಗಳು, ಅಶೋಕ ಚಕ್ರ ಮಧ್ಯಭಾಗದಲ್ಲಿ ಇಲ್ಲದಿರುವುದು, ಹೊಲಿಗೆ ಸರಿಯಾಗಿ ಇಲ್ಲದಿದ್ದರೆ ಅಥವಾ ಅಶೋಕ ಚಕ್ರ ವೃತ್ತಾಕಾರವಾಗಿ ಇಲ್ಲದೆ ಮೊಟ್ಟೆಯಾಕಾರದಲ್ಲಿ ಇದ್ದರೆ ಅಂತಹ ರಾಷ್ಟ್ರಧ್ವಜಗಳನ್ನು ಸಾರ್ವಜನಿಕರಿಗೆ ವಿತರಿಸದಂತೆ ಸ್ಪಷ್ಟಆದೇಶ ನೀಡಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಅಸ್ಪಷ್ಟವಾದ, ಧ್ವಜ ನೀತಿಯಂತೆ ಇಲ್ಲದ ರಾಷ್ಟ್ರ ಧ್ವಜಗಳನ್ನು ನೀಡಿರುವುದು ಕಂಡು ಬಂದಿದೆ. ಅದನ್ನು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ನಾಗರಿಕರು ಸರಿಯಾದ ರೀತಿಯಲ್ಲಿರದ ರಾಷ್ಟ್ರಧ್ವಜಗಳನ್ನು ಈಗಾಗಲೇ ಪಡೆದಿದ್ದರೆ ಅಂತಹವರು ಬಿಬಿಎಂಪಿಯ ಯಾವುದೇ ಕಚೇರಿಗಳಲ್ಲಿ ಅವುಗಳನ್ನು ಹಿಂದಿರುಗಿಸಿ ಸರಿಯಾದ ರಾಷ್ಟ್ರಧ್ವಜ ಪಡೆಯಬಹುದು. ಜೊತೆಗೆ ರಾಷ್ಟ್ರಧ್ವಜಗಳನ್ನು ಪಡೆಯುವಾಗ ನ್ಯೂನತೆಗಳು ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಸ್ವೀಕರಿಸಬೇಕು ಎಂದು ಕೋರಿದ್ದಾರೆ.

Har Ghar Tiranga: ಚಿಕ್ಕಮಗಳೂರಲ್ಲಿ 2 ಲಕ್ಷ ರಾಷ್ಟ್ರಧ್ವಜ ಹಾರಾಟ: ಡಿಸಿ ರಮೇಶ್

 

ಪ್ರತಿ ಮನೆಯಲ್ಲಿ ತ್ರಿವರ್ಣ ಅಭಿಯಾನದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾರಾಟ ಮಾಡಿರುವ ರಾಷ್ಟ್ರಧ್ವಜಗಳಲ್ಲಿ ನ್ಯೂನತೆಗಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಕೆಲವು ಬಾವುಟಗಳಲ್ಲಿ ಅಶೋಕ ಚಕ್ರವು ಮೊಟ್ಟೆಯಾಕಾರದಲ್ಲಿದ್ದರೆ, ಇನ್ನು ಹಲವು ಧ್ವಜಗಳ ವರ್ಣದ ಅಳತೆಯಲ್ಲೂ ಏರುಪೇರಾಗಿರುವುದು ಕಂಡು ಬಂದಿತ್ತು. ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ಮೂಲೆಗೆ ತಳ್ಳಲ್ಪಟ್ಟಿರುವುದು ಜನರ ಕೆಂಗಣ್ಣಿಗೆ ಕಾರಣವಾಗಿತ್ತು.

10 ಲಕ್ಷ ರಾಷ್ಟ್ರಧ್ವಜ:

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15 ರವರೆಗೆ ನಡೆಯಲಿರುವ ಪ್ರತಿ ಮನೆಯಲ್ಲಿ ತ್ರಿವರ್ಣ(ಹರ್‌ ಘರ್‌ ತಿರಂಗಾ) ಅಭಿಯಾನಕ್ಕಾಗಿ ಕೇಂದ್ರ ಸರ್ಕಾರದಿಂದ ಬಿಬಿಎಂಪಿ 10 ಲಕ್ಷ ರಾಷ್ಟ್ರಧ್ವಜಗಳನ್ನು ಪಡೆದಿದ್ದು, ನಾಗರಿಕರಿಗೆ ವಿತರಿಸಲಿದೆ. ಬಿಬಿಎಂಪಿಯು ನಗರದಲ್ಲಿ ಈಗಾಗಲೇ ರಾಷ್ಟ್ರಧ್ವಜ ಹಂಚಿಕೆಯನ್ನು ಬಿಬಿಎಂಪಿಯ ಎಲ್ಲಾ ವಲಯದ ಜಂಟಿ ಆಯುಕ್ತರ ಕಚೇರಿಗಳು, ಬಿಬಿಎಂಪಿಯ ವಾರ್ಡ್‌ ಕಚೇರಿಗಳು, ಪ್ರಮುಖ ಜನ ನಿಬಿಡ ಪ್ರದೇಶಗಳು, ಪ್ರಮುಖ ಮಾಲ್‌ಗಳು, ಕಚೇರಿಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ ರಾಷ್ಟ್ರಧ್ವಜವನ್ನು ವಿತರಿಸುತ್ತಿದೆ. ಪ್ರತಿಯೊಬ್ಬರು ರಾಷ್ಟ್ರಧ್ವಜಗಳನ್ನು ಖರೀದಿಸಿ ಪ್ರತಿ ಮನೆಯಲ್ಲಿ ತ್ರಿವರ್ಣ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios