Asianet Suvarna News Asianet Suvarna News

ಚುನಾ​ವಣೆಯಲ್ಲಿ ಸ್ಪರ್ಧೆಸಲು ಜಡ್ಜ್‌ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್‌

ವಿಜಯಪುರ ಜಿಲ್ಲೆಯ ಬಸವನಭಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದವರಾದ ಸುಭಾಶ್ಚಂದ್ರ ರಾಠೋಡ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಸರಳ ವ್ಯಕ್ತಿತ್ವದವರು.

Resigned from the post of judge to contest the election gvd
Author
First Published Feb 13, 2023, 4:35 AM IST

ಚಿತ್ತಾಪುರ (ಫೆ.13): ವಿದ್ಯಾವಂತರು ಹಾಗೂ ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯ ಎಂದರೆ ನಮಗೇಕೆ ಇದರ ಉಸಾಬರಿ ಎಂದು ಹೇಳುವ ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಕ್ಷೇತ್ರವನ್ನು ಪವಿತ್ರಗೊಳಿಸುವ ಬಹು ದೊಡ್ಡ ಕನಸಿನೊಂದಿಗೆ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಜಡ್ಜ್‌ ಹುದ್ದೆಗೆ ರಾಜಿನಾಮೆ ನೀಡಿ ಜ್ಯಾತ್ಯಾತೀತ ಜನತಾ ದಳಕ್ಕೆ ಸೇರ್ಪಡೆಗೊಂಡು ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದು, ಎಲ್ಲರಲ್ಲೂ ಆಶ್ಚರ್ಯವನ್ನು ಉಂಟು ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಭಾಗೇವಾಡಿ ತಾಲೂಕಿನ ಸಂಕದಾಳ ಗ್ರಾಮದವರಾದ ಸುಭಾಶ್ಚಂದ್ರ ರಾಠೋಡ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿರುವ ಸರಳ ವ್ಯಕ್ತಿತ್ವದವರು. ಕಾರ್ಮಿಕರ ಕಾನೂನು ವಿಷಯದಲ್ಲಿ ಪಿಎಚ್‌ಡಿ ಪಡೆದಿರುವ ಇವರು 2016ರಲ್ಲಿ ನ್ಯಾಯಧೀಶರಾಗಿ ಸೇವೆ ಆರಂಭಿಸಿದರು. ಚಿತ್ತಾಪುರ ಕಿರಿಯ ಸಿವಿಲ್‌ ನ್ಯಾಯಲಯದಲ್ಲಿ ಸೇವೆ ಸಲ್ಲಿಸಿ ನ್ಯಾಯಾಂಗ ಇಲಾಖೆಯಲ್ಲಿ ಹೆಸರು ಮಾಡಿದ್ದ ರಾಠೋಡರವರು ನ್ಯಾಯಧೀಶರ ಸೇವೆಗೆ ರಾಜಿನಾಮೆ ನೀಡಿ ರಾಜಕೀಯ ಕ್ಷೇತ್ರದತ್ತ ಮುಖಮಾಡಿ ಜೆಡಿಎಸ್‌ಗೆ ಸೇರ್ಪಡೆಗೊಂಡು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 

ಜೆಡಿಎಸ್‌ ಮುಖಂಡರ ಸೂಚನೆ ಮೇರೆಗೆ ಪಕ್ಷ ಸಂಘಟನೆ ಮಾಡಲು ಚಿತ್ತಾಪುರ ಪಟ್ಟಣದಲ್ಲಿ ಮನೆ ಹಾಗೂ ಕಚೇರಿಯನ್ನು ತೆರೆದು ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಂಪರ್ಕಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದ್ದು, ಈಗ ಅಲ್ಲಿ ಪ್ರಾಮಾಣಿಕರು ಇಲ್ಲದೇ ಹದಗೆಟ್ಟು ಪ್ರಾಮಾಣಿಕರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಇಂತಹ ಪ್ರಜಾಪ್ರಭುತ್ವದ ರಕ್ಷಣೆಯನ್ನು ಉಳಿಸಿ ಸಮಾಜ ಸೇವೆ ಜೊತೆ ರಾಜಕೀಯ ರಂಗದಲ್ಲಿ ಬದಲಾವಣೆ ತರುವ ಕನಸಿನೊಂದಿಗೆ ನಾನು ಈ ಕ್ಷೇತ್ರಕ್ಕೆ ಬರಬೇಕಾಯಿತು. 

ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

ಚಿತ್ತಾಪುರ ಕ್ಷೇತ್ರದಲ್ಲಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಜೆಡಿಎಸ್‌ ಜನಸಾಮಾನ್ಯರ ಪರವಾಗಿ ಯೋಜನೆಗಳನ್ನು ರೂಪಿಸಿ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಅದಕ್ಕಾಗಿ ನಾನು ಆ ಪಕ್ಷಕ್ಕೆ ಸೇರ್ಪಡೆಯಾಗಿ ಜನಸೇವೆಗೆ ಬಂದಿದ್ದೇನೆ ಎಂದು ತಮ್ಮ ಮನದಾಳದ ಮಾತು ಹೇಳಿದರು. ಪ್ರಜಾಪ್ರಭುತ್ವ ರಕ್ಷಣೆಗಾಗಿ ನಾನು ನ್ಯಾಯಧೀಶರ ಹುದ್ದೆಗೆ ರಾಜಿನಾಮೆ ನೀಡಿ ಸಮಾಜ ಸೇವೆ ಮತ್ತು ವಕೀಲ ವೃತ್ತಿ ಜತೆಗೆ ರಾಜಕೀಯ ರಂಗದಲ್ಲಿ ಬದಲಾವಣೆ ತರಲು ರಾಜಕೀಯಕ್ಕೆ ಕಾಲಿಟ್ಟಿರುವುದಾಗಿ ಸುಭಾಶ್ಚಂದ್ರ ರಾಠೋಡ ಹೇಳುತ್ತಾರೆ.

Follow Us:
Download App:
  • android
  • ios