ಬೆಂಗಳೂರು(ಜ.29): ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿದ್ದ ರಾಜ್ಯ ರಾಜಧಾನಿ ಬೆಂಗಳೂರು ಇದೀಗ ವಿಶ್ವದ ಅತೀ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. 

ಈ ಕುರಿತು ಖಾಸಗಿ ಸಂಸ್ಥೆ ಟಾಮ್’ಟಾಮ್ ಸಂಶೋಧನಾ ವರದಿ ಮಂಡಿಸಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಎಂದು ಹೇಳಿದೆ.

ಒಟ್ಟು 57 ರಾಷ್ಟ್ರಗಳ 415 ನಗರಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಲಾಗಿದ್ದು, ಬೆಂಗಳೂರಿಗರ ಶೇ.71ರಷ್ಟು ಸಮಯ  ಟ್ರಾಫಿಕ್’ನಲ್ಲೇ ವ್ಯಯವಾಗುತ್ತಿದೆ ಎಂದು ತಿಳಿಸಿದೆ.

ಜಯದೇವ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿಷೇಧ

ಬೆಂಗಳೂರಿನಲ್ಲಿ ನಿತ್ಯವೂ ಸರಿಸುಮಾರು 291 ಕಡೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಸುಮಾರು 145.7ಕಿ.ಮೀ ಉದ್ದದ ಜಾಮ್ ಕಂಡುಬುತ್ತದೆ ಎಂದು ಟಾಮ್’ಟಾಮ್ ತಿಳಿಸಿದೆ.

ಅಲ್ಲದೇ ಬೆಂಗಳೂರಿಗರು ದಿನಕ್ಕೆ ಸುಮಾರು 243 ಅಧಿಕ ಗಂಟೆಗಳನ್ನು ಟ್ರಾಫಿಕ್’ನಲ್ಲೇ ಕಳೆಯುತ್ತಾರೆ ಎಂದು ವರದಿ ಹೇಳಿದ್ದು, ಇಷ್ಟು ಸಮಯದಲ್ಲಿ 244 ಸಸಿಗಳನ್ನು ನೆಡಬಹುದಾಗಿದೆ ಎಂದಿದೆ . ಅಲ್ಲದೇ 139 ಫುಟ್ಬಾಲ್ ಪಂದ್ಯಗಳನ್ನು ವಿಕ್ಷೀಸಬಹುದಾಗಿದೆ ಎಂದೂ ವರದಿ ತಿಳಿಸಿದೆ.

2019ರ ಜುಲೈ ತಿಂಗಳಿನ ಅಂಕಿ ಅಂಶದ ಪ್ರಕಾರ, ಬೆಂಗಳೂರಿನಲ್ಲಿ ಕನಿಷ್ಟ 82 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುತ್ತಿವೆ. 

ಕಳೆದ 40 ವರ್ಷದಲ್ಲಿ ಬೆಂಗಳೂರಿನ ವಾಹನಗಳ ಸಂಖ್ಯೆ ಶೇ. 65 ಪಟ್ಟು ಹೆಚ್ಚಾಗಿದ್ದು, ಪರಿಣಾಮವಾಗಿ ರಾಜಧಾನಿ ರಸ್ತೆಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣ ಶೇ.64 ರಷ್ಟು ಹೆಚ್ಚಾಗಿದೆ.

ಪ್ರತಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಪೊಲೀಸ್, ಬೆಂಗಳೂರಿಗರೇ ಎಚ್ಚರ!

ಬೆಂಗಳೂರಿನ ಬಳಿಕ ಫಿಲಿಪೈನ್ಸ್’ನ ಮನಿಲಾ ನಗರ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಿರುವ ಎರಡನೇ ನಗರವಾಗಿದೆ ಎಂದು ಸಂಶೋಧನಾ ವರದಿ ಸ್ಪಷ್ಟಪಡಿಸಿದೆ.

ಇನ್ನು ವಿಶ್ವದ ಟಾಪ್ 10 ಅತೀ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಮುಂಬೈ, ಪುಣೆ ಹಾಗೂ ನವದೆಹಲಿ ಕೂಡ ಸ್ಥಾನ ಪಡೆದಿವೆ.