ರೇಣುಕಾಸ್ವಾಮಿ ಕೊಲೆ ಪ್ರಕರಣ; ಎ7 ಆರೋಪಿ ಅನುಕುಮಾರ ಬಂಧನ ಸುದ್ದಿ ಕೇಳಿ ತಂದೆ ಸಾವು!
ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿದ್ದ ಪ್ರಕರಣದಲ್ಲಿ ಬಂಧಿತನಾದ ಎ7 ಆರೋಪಿಯ ತಂದೆ ಮಗನ ಬಂಧನದ ಸುದ್ದಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಂದ್ರಣ್ಣ(60) ಮೃತ ದುರ್ದೈವಿ.
ಚಿತ್ರದುರ್ಗ (ಜೂ.14): ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿದ್ದ ಪ್ರಕರಣದಲ್ಲಿ ಬಂಧಿತನಾದ ಎ7 ಆರೋಪಿಯ ತಂದೆ ಮಗನ ಬಂಧನದ ಸುದ್ದಿ ಹೃದಯಾಘಾತದಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಂದ್ರಣ್ಣ(60) ಮೃತ ದುರ್ದೈವಿ. ಕೊಲೆ ಪ್ರಕರಣದಲ್ಲಿ ಮಗನ ಬಂಧನದಿಂದ ತೀವ್ರ ಆಘಾತಕ್ಕೊಳಗಾಗಿದ್ದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ರಾ ದರ್ಶನ್? ಸಿಪಿವೈ ಸ್ಫೋಟಕ ಹೇಳಿಕೆ
ಮೃತ ಚಂದ್ರಣ್ಣನ ಸಂಬಂಧಿ ರೇಣುಕಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ನನ್ನ ಮಗ ಇನ್ನೂ ಮನೆಗೆ ಬಂದಿಲ್ಲ ಎಂದು ನನಗೆ ಕೇಳಿದ್ರು. ಅದಕ್ಕೆ ನಾನು ಬರ್ತಾನೆ ಎಂದು ಅವರಿಗೆ ಧೈರ್ಯ ಹೇಳಿದ್ದೆ. ಧೈರ್ಯ ತುಂಬಿದ ಮೇಲೆ ಎಲ್ಲರೂ ಒಟ್ಟಿಗೆ ಕುಳಿತಿದ್ವಿ. ಮಧ್ಯಾಹ್ನಕ್ಕೆ ರೊಟ್ಟಿ ಊಟ ಮಾಡಿದ್ವಿ. ನಾನು ಮನೆಗೆ ಹೋಗ್ತಿನಿ ಅಂದಾಗ ಇರಮ್ಮ ಚಹಕ್ಕೆ ಇಟ್ಟಿದ್ದಾರೆ ಕುಡಿದು ಹೋಗು ಅಂದಿದ್ರು. ಎಲ್ಲರೂ ಒಟ್ಟಿಗೆ ಟೀ ಕುಡಿದು ರೆಡಿ ಆಗಿ ಬರಲು ಮನೆಗೆ ಹೋಗಿದ್ದೆ. ಅಷ್ಟರಲ್ಲೇ ಅದೇ ಮನೆಯಿಂದ ಹಿರಿಯ ಮಗ ಕಾಲ್ ಮಾಡಿ ಎಲ್ಲಿದ್ದಿಯಾ ಅಂತಾ ಕೇಳಿದ. 'ಆಂಟಿ, ಅಪ್ಪಾಜಿ ಹೋಗಿಬಿಡ್ತು' ಅಂತಾ ಅಳತೊಡಗಿದ. ನಾನು ಕೂಡಲೇ ಮನೆಯಿಂದ ಇಲ್ಲಿಗೆ ಬಂದೆ ಎಂದು ತಿಳಿಸಿ ಕಣ್ಣೀರಾದ ರೇಣುಕಾ.
News Hour: ತನಿಖೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್ ಸ್ಟಾರ್ ರೌದ್ರಾವತಾರ..!
ಮೃತ ಚಂದ್ರಣ್ಣ, ಬೆಳಗ್ಗೆಯಿಂದ ನನಗೆ ಟೆನ್ಷನ್ ಆಗ್ತಿದೆ ಅಂತಾ ಹೇಳ್ತಿತ್ತು. ಅನು ಬೇಕು ಎಲ್ಲಿದ್ದಾನೆ ನೊಡ್ಕೊಂಡು ಬರೋಣ ಬಾರಮ್ಮ. ಇಲ್ಲೆ ದುರ್ಗದಲ್ಲೇ ಇದಾನಂತೆ ಹುಡುಕಿಕೊಂಡು ಬರೋಣ ಬಾ ಅಂತ ಹೇಳಿತ್ತು. ಸಂಜೆಯೊಳಗೆ ಎಲ್ಲಿದ್ರು ಬರ್ತಾನೆ ಸುಮ್ಮನೆ ಇರು ಅಂತ ಸಮಾಧಾನ ಮಾಡಿದ್ದೆ. ಆದರೆ ಮಗನ ಬಂಧನ ಸುದ್ದಿ ಕೇಳಿಯೇ ತಂದೆ ಆಘಾತಗೊಂಡು ಸಾವಾಗಿದೆ. ಚಂದ್ರಣ್ಣ ತುಂಬಾ ಒಳ್ಳೆಯವರು, ಮಕ್ಕಳು ಕೂಡ ಪೋಲಿ ಹುಡುಗರಲ್ಲ. ಆದರೆ ಇದೀಗ ಕೊಲೆ ಪ್ರಕರಣದಲ್ಲಿ ಬಂಧಿಸಿರೋದು ಕುಟುಂಬಕ್ಕೆ ತುಂಬಾ ಆಘಾತ ತಂದಿದೆ ಎಂದರು.