Asianet Suvarna News Asianet Suvarna News

News Hour: ತನಿಖೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಕಿಲ್ಲರ್ ಸ್ಟಾರ್ ರೌದ್ರಾವತಾರ..!


ನಟ ದರ್ಶನ್‌ ಹಾಗೂ ಅವರ ಗ್ಯಾಂಗ್‌ನಿಂದ ಚಿತ್ರಹಿಂಸೆ ಪಡೆದು ಸಾವು ಕಂಡ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಹಲ್ಲೆ ಮಾಡಿದ್ದ ಕಾರಣಕ್ಕಾಗಿಯೇ ಅವರು ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಬೆಂಗಳೂರು (ಜೂ.13): ಪೊಲೀಸ್‌ ತನಿಖೆಯಲ್ಲಿ ಕಿಲ್ಲರ್ ಸ್ಟಾರ್ ರೌದ್ರಾವತಾರ ಬಗೆದಷ್ಟು ಬಯಲಾಗ್ತಿದೆ. ದರ್ಶನ್ ಗ್ಯಾಂಗ್​ ನಡೆಸಿದ ಕ್ರೌರ್ಯವನ್ನು ಮರಣೋತ್ತರ ವರದಿ ಕೂಡ ಸಾಕ್ಷೀಕರಿಸಿದೆ. 

ಆರೋಪಿಗಳು ಗುಪ್ತಾಂಗಕ್ಕೆ ಒದ್ದಿದ್ದರಿಂದಲೇ ರೇಣುಕಾಸ್ವಾಮಿ ಸಾವು ಕಂಡಿದ್ದಾನೆ ಎಂದು ರಿಪೋರ್ಟ್‌ ಬಂದಿದೆ. ಪೋಸ್ಟ್​ ಮಾರ್ಟ್ಂನಲ್ಲಿ ರೇಣುಕಾಸ್ವಾಮಿ ಸಾವಿನ ಕಾರಣ ಬಹಿರಂಗವಾಗಿದ್ದು, ಚಿತ್ರಹಿಂಸೆ ಕೊಟ್ಟು ಗುಪ್ತಾಂಗಕ್ಕೆ ಹೊಡೆದಿದ್ದಕ್ಕೆ ರೇಣುಕಾಸ್ವಾಮಿ ಸಾವು ಕಂಡಿದ್ದಾನೆ.

'ಕಾನೂನಿಗಿಂತ ಯಾರೂ ದೊಡ್ಡವರಲ್ಲ..' ದರ್ಶನ್‌ ಕೇಸ್‌ ಉಲ್ಲೇಖಿಸಿ ರಮ್ಯಾ ಪೋಸ್ಟ್‌!

ದೇಹದಲ್ಲಿ 15 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಾಯಗಳಾಗಿವೆ. ಗುಪ್ತಾಂಗ ಗುರಿಯಾಗಿಸಿ ಹಲ್ಲೆ ನಡೆದಿದ್ದು ದೃಢವಾಗಿದೆ. ರೇಣುಕಾಸ್ವಾಮಿ ಗುಪ್ತಾಂಗದ ಮೇಲೂ ಗಾಯದ ಗುರುತುಗಳಿವೆ. ಕೊಲೆಯಾದ ರೇಣುಕಾಸ್ವಾಮಿ ಜನನಾಂಗಗಳ ಬಳಿ ರಕ್ತಸ್ರಾವ ಪತ್ತೆಯಾಗಿದೆ. ಹೊಟ್ಟೆಯಲ್ಲಿಯೂ ರಕ್ತಸ್ರಾವ ಆಗಿರುವುದು ದೃಢವಾಗಿದೆ.
 

Video Top Stories