Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜ ಮರ್ಯಾದೆ ನೀಡಬಾರದು: ಇಂದ್ರಜಿತ್ ಲಂಕೇಶ್

ಪತ್ರಕರ್ತರು ಅವರ ಕರ್ತವ್ಯ ಅವರು ನಿರ್ವಹಿಸುತ್ತಿದ್ದಾರೆ. ಪತ್ರಕರ್ತರು ಇಲ್ಲದೇ ಹೋಗಿದ್ರೆ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು. ಹಾಗೆ ನೋಡಿದರೆ ಪತ್ರಕರ್ತರೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತಿರೋದು. ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

Renuka swamy murder by darshan and gangs case director Indrajit Lankesh reacts at hubballi rav
Author
First Published Jun 13, 2024, 8:10 PM IST

ಹುಬ್ಬಳ್ಳಿ (ಜೂ.13): ನಮ್ಮ ಗೌರಿಯನ್ನು ನಾನು ಕಳೆದುಕೊಂಡಿದ್ದೇನೆ. ಇದುವರೆಗೆ ನ್ಯಾಯ ಸಿಕ್ಕಿಲ್ಲ. ಅವಳ ಸಾವಿಗೆ ನ್ಯಾಯ ಒದಗಿಸಿಕೊಡೋಕೆ ಆಗಲಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನುಡಿದರು.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ನಟ ಆಗಿರಲಿ ರಾಜ ಮರ್ಯಾದೆ ನೀಡಬಾರದು. ಮೊದಲನೇಯದಾಗಿ ರೇಣುಕಾಸ್ವಾಮಿ ಕೊಲೆ ಖಂಡಿಸುತ್ತೇನೆ. ಅದೇ ರೀತಿ ಚಿತ್ರರಂಗದವರೂ ಈ ಕೊಲೆಯನ್ನು ಖಂಡಿಸಬೇಕು. ಮೃತ ರೇಣುಕಾಸ್ವಾಮಿ ಪತ್ನಿ 3 ತಿಂಗಳ ಗರ್ಭಿಣಿ. ಅವರ ನೋವನ್ನು ನೋಡಿಯಾದ್ರೂ ಖಂಡಿಸಬೇಕು. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಇದನ್ನ ನಾನು ಕನ್ನಡ ಚಿತ್ರರಂಗದ ಧ್ವನಿಯಾಗಿ ಹೇಳುತ್ತೇನೆ ಎಂದರು.

'ದರ್ಶನ್ ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಗಿದ್ದು, ಯಾರೂ ಸಂಪರ್ಕಿಸಿಲ್ಲ': ಡಿಕೆ ಶಿವಕುಮಾರ

ಈ ಪ್ರಕರಣ ಇನ್ನೂ ತನಿಖೆ ನಡೆತಿದೆ. ಹೀಗಾಗಿ ಪೊಲೀಸರಿಗೆ ಸಮಯ ಕೊಡಿ ಆಗ ನಾನು ನಿಮ್ಮ ಮುಂದೆ ಬರ್ತೇನೆ. ಈಗಲೂ ಆಗಲೂ ಈ ಪ್ರಕರಣವನ್ನ ಖಂಡಿಸುತ್ತೇನೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು, ರೇಣುಕಾಸ್ವಾಮಿ ಪತ್ನಿ, ತಂದೆ ತಾಯಿಗೆ ನ್ಯಾಯ ಒದಗಿಸಬೇಕು. ಆದರೆ ಸದ್ಯದ ಪರಿಸ್ಥಿತಿ ನೋಡುತ್ತಾ ಇದ್ರೆ ನ್ಯಾಯ ಒದಗಿಸಿಕೊಡೋಕೆ ಆಗೊಲ್ಲ. ನಮ್ಮ ಗೌರಿಯನ್ನು ನಾವು ಹೀಗೆ ಕಳೆದುಕೊಂಡೆವು ಇದುವರೆಗೂ ನ್ಯಾಯ ಸಿಕ್ಕಿಲ್ಲ. ಈಗ ರೇಣುಕಾಸ್ವಾಮಿ ಕೊಲೆಗಾರ ಯಾರು ಎಂಬುದನ್ನ ಪೊಲೀಸ್ ಆಯುಕ್ತರು ತಿಳಿಸಬೇಕು. ನರಳುತ್ತಿರುವ ಮಹಿಳೆಗೆ ಸರ್ಕಾರ, ಪೊಲೀಸ್ ಇಲಾಖೆ ನ್ಯಾಯ ಒದಗಿಸಬೇಕು ಎಂದರು. ಒಂದು ವೇಳೆ ಆರೋಪಿಗಳ ರಕ್ಷಣೆ ಮಾಡುವ ಪ್ರಯತ್ನವಾದರೆ ಅವಾಗ ನಾನೇ ಪ್ರತಿಭಟನೆ, ಧರಣಿಗೆ ಇಳಿತೇನೆ ಎಂದು ಎಚ್ಚರಿಸಿದರು.

ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?

ಇನ್ನು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವಿಚಾರವನ್ನು ನಾನು ಕೇಳಿದೆ. ಪತ್ರಕರ್ತರು ಅವರ ಕರ್ತವ್ಯ ಅವರು ನಿರ್ವಹಿಸುತ್ತಿದ್ದಾರೆ. ಪತ್ರಕರ್ತರು ಇಲ್ಲದೇ ಹೋಗಿದ್ರೆ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು. ಹಾಗೆ ನೋಡಿದರೆ ಪತ್ರಕರ್ತರೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತಿರೋದು. ವರದಿ ಮಾಡಿದ್ರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕೀಳುಮಟ್ಟದ ಭಾಷೆ ಉಪಯೋಗಿಸ್ತಾ ಇದ್ದಾರೆ  ಹೀಗಾಗಿ ಪತ್ರಕರ್ತರಿಗೆ ಸರ್ಕಾರ ಭದ್ರತೆ ನೀಡಬೇಕು. ಪತ್ರಕರ್ತರ ವಿರುದ್ಧ ಹಲ್ಲೆ, ನಿಂದನೆ ಮಾಡಿದವರ ಮೇಲೆ ಕೂಡಲೇ ಕ್ರಮಕ ಜರುಗಿಸಬೇಕು ಎಂದು ಆಗ್ರಹಿಸಿದರು.

Latest Videos
Follow Us:
Download App:
  • android
  • ios