Asianet Suvarna News Asianet Suvarna News

'ದರ್ಶನ್ ಕೇಸ್ ಆಗಿ 24 ಗಂಟೆ ಆದ್ಮೇಲೆ ನನಗೆ ಗೊತ್ತಾಗಿದ್ದು, ಯಾರೂ ಸಂಪರ್ಕಿಸಿಲ್ಲ': ಡಿಕೆ ಶಿವಕುಮಾರ

ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ದರ್ಶನ್ ಕೇಸ್ ಆಗಿ 24 ಗಂಟೆ ಆದ್ಮೇಲೆನೇ ನನಗೆ ಅವರ ಪ್ರಕರಣ ಗೊತ್ತಾಗಿದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.

Renuka swamy murder by actor darshan and gang case DK Shivakumar reacts at bengaluru rav
Author
First Published Jun 13, 2024, 6:45 PM IST

ಬೆಂಗಳೂರು (ಜೂ.13): ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ದರ್ಶನ್ ಕೇಸ್ ಆಗಿ 24 ಗಂಟೆ ಆದ್ಮೇಲೆನೇ ನನಗೆ ಅವರ ಪ್ರಕರಣ ಗೊತ್ತಾಗಿದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ ತಿಳಿಸಿದರು.

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತಿರುವಳಿ ಮತ್ತು ಭೂಸ್ವಾಧೀನ ಪ್ರಸ್ತಾವನೆ ಕುರಿತು ಸಭೆ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದರ್ಶನ್ ಕೇಸ್ ಮುಚ್ಚಿಹಾಕಲು ತಮ್ಮನ್ನು ಸಂಪರ್ಕಿಸಲಾಗಿದೆ ಎಂಬ ಆರೋಪ ತಳ್ಳಿಹಾಕಿದರು. 

ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?

ಅನ್ನಪೂರ್ಣೇಶ್ವರಿನಗರ ಪೊಲೀಸ್ ಸ್ಟೇಷನ್ ಮುಂಭಾಗ ಶಾಮಿಯಾನ ಹಾಕಿರುವ ವಿಚಾರ ಸಂಬಂಧ 'ವಿಐಪಿಗಳಿಗೆ ಈ ರೀತಿ ಮಾಡುವ ಕಾನೂನು ಇದ್ಯಾ?' ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆನೂ ನನಗೆ ಗೊತ್ತಿಲ್ಲ. ನನ್ನದೇ ಅನುಭವ ಹೇಳಬೇಕೆಂದರೆ, ನನ್ನನ್ನು ಸ್ಟೇಷನ್‌ ಕೋರ್ಟ್‌ಗೆ ಕರೆದುಕೊಂಡು ಹೋಗಬೇಕಾದ್ರೆ ಮರೆಮಾಚಿ, ಕೆಲವು ಸಲ ದಾರಿ ಬದಲಾಯಿಸಿ ಕರೆದುಕೊಂಡು ಹೋಗಿದ್ರು. ಈ ವೇಳೆ ಜೈಕಾರ ಹಾಕೋರು, ಬಾವುಟ ಹಾರಿಸೋದು ಮಾಡ್ತಾರೆ. ಅಭಿಮಾನಿಗಳು ಓಡೋಡಿ ಹಿಂದೆ ಬರ್ತಾರೆ. ಹೀಗಾಗಿ ಠಾಣೆ ಮುಂದೆ ಅಭಿಮಾನಿಗಳು ಹೆಚ್ಚು ಬರಬಹುದು ಎಂತಾ ಪೊಲೀಸರು ಹಾಗೆ ಮಾಡಿರಬಹುದು. ಇದೇ ವೇಳೆ ದರ್ಶನ್ ಕೇಸ್ ಸರಿಯಾಗಿ ವಿಚಾರಣೆಯಾಗದಿದ್ರೆ ಕುಮಾರಸ್ವಾಮಿ ಎಂಟ್ರಿ ಆಗುವ ವಿಚಾರಕ್ಕೆ, 'ಬರ್ಲಿ ಬಿಡು ಯಾರು ಬೇಡ ಅಂದ್ರು? ಅವರು ಬರಲಿ, ನೀವು ಬನ್ನಿ' ಎಂದರು.

Latest Videos
Follow Us:
Download App:
  • android
  • ios