Asianet Suvarna News Asianet Suvarna News

ಧಾರ್ಮಿಕ ಸ್ವಾತಂತ್ರ್ಯ ಅಸಮಾನತೆಯ ಸಂರಕ್ಷಣೆ, ಗಾಂಧಿವಾದ ಕಿತ್ತೊಗೆಯಲು ನಟ ಚೇತನ್ ಆಗ್ರಹ!

ಉದಾರವಾದಿಗಳಿಗೆ ಸಾಂವಿಧಾನಿಕ ತತ್ವ ಅರ್ಥವಾಗುತ್ತಿಲ್ಲ. ಹೀಗಾಗಿ ಗಾಂಧಿವಾದ ಕಿತ್ತೊಗೆಯಬೇಕು ಎಂದು ಹೇಳುವ ಮೂಲಕ ನಟ ಚೇತನ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಅಷ್ಟಕ್ಕು ಚೇತನ್ ಹೇಳಿರುವುದೇನು?
 

Religious harmony preserves inequality Gandhisim must be dismantled says Actor Chetan Ahimsa ckm
Author
First Published Dec 11, 2023, 10:02 PM IST

ಬೆಂಗಳೂರು(ಡಿ.11) ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಈ ಬಾರಿ ಗಾಂಧಿವಾದ ಕುರಿತು ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗಾಂಧಿವಾದ ಕಿತ್ತೊಗೆಯಬೇಕು ಎಂದು ಹೇಳುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೇ ವೇಳೆ ಚೇತನ್ ಈ ಮಾತಿಗೆ ಕೆಲವರು ಸಮ್ಮತಿ ಸೂಚಿಸಿದ್ದಾರೆ. ಧಾರ್ಮಿಕ ಹಕ್ಕು ಹಾಗೂ ಜ್ಯಾತ್ಯಾತೀತ ರಾಷ್ಟ್ರದ ಕುರಿತು ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, ಗಾಂಧಿವಾದವೇ ಈ ಸಮಸ್ಯೆಯ ಮೂಲ ಎಂದಿದ್ದಾರೆ.

ಗಾಂಧಿಯವರ ಧಾರ್ಮಿಕ ಸಮಸ್ಯೆ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ( ಆರ್ಟಿಕಲ್ 25), ಸಾರ್ವಜನಿಕವಾಗಿ ನಾವು ಜ್ಯಾತ್ಯೀತ ರಾಷ್ಟ್ರ ಅಂದರೆ ಧರ್ಮದಿಂದ ದೂರ. ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ. ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಚೇತನ್ ಎಕ್ಸ್ ಖಾತೆ ಮೂಲಕ ಹೇಳಿದ್ದಾರೆ.

 

 

ಗಾಂಧಿವಾದ ವಿರುದ್ದ ಹರಿಹಾಯ್ದಿರುವ ನಟ ಚೇತನ್, ಇತ್ತೀಚೆಗೆ ಸುವರ್ಣ ಸೌಧದಲ್ಲಿರುವ ಮಹಾತ್ಮಾ ಗಾಂಧಿ ಫೋಟೋವನ್ನು ತೆಗೆಯಬೇಕು ಎಂದಿದ್ದರು. ಸುವರ್ಣ ಸೌಧದಲ್ಲಿರುವ ವೀರ್ ಸಾವರ್ಕರ್ ಫೋಟೋವನ್ನು ತೆಗೆಯುವ ಕುರಿತು ಹೇಳಿಕೆ ನೀಡಿದ್ದ ಸಚಿವ ಪ್ರಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದ ನಟ ಚೇತನ್, ಕಾಂಗ್ರೆಸ್ ಹಾಗೂ ಖರ್ಗೆಯವರಿಗೆ ಸಾವರ್ಕರ್ ಸೈದ್ಧಾಂತಿಕ ಶತ್ರುವಾಗಿರಹುದು. ಆದರೆ ನಮ್ಮಂತ ಸಮಾನತವಾದಿಗಳಿಗೆ ಸಾವರ್ಕರ್, ಗಾಂಧಿ ಇಬ್ಬರೂ ನಮ್ಮ ಸೈದ್ಧಾಂತಿಕ ಶತ್ರುಗಳು ಎಂದು ಚೇತನ್ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಪರವಾಗಿ ಬ್ಯಾಟ್‌ ಬೀಸಿದ ನಟ ಅಹಿಂಸಾ ಚೇತನ್‌

ಇತ್ತೀಟೆಗೆ ಮೀಸಲಾತಿ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ವೇಳೆ ನಟ ಚೇತನ್ ಗಾಂಧಿ ಹಾಗೂ ಜವಾಹರ್‌ಲಾಲ್ ನೆಹರೂ ಮೀಸಲಾತಿ ವಿರೋಧಿಗಳು ಎಂದಿದ್ದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಮೀಸಲಾತಿ ವಿರೋಧಿಗಳಾಗಿದ್ದರು. ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕೊಡುಗೆ ಶೂನ್ಯ ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯೋತಿಬಾ ಫುಲೆ, ಡಾ.ಅಂಬೇಡ್ಕರ್‌, ಪೆರಿಯಾರ್‌, ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಅಂಥವರು ಮಾತ್ರ ಮೀಸ ಲಾತಿಗೆ ನ್ಯಾಯ ಒದಗಿಸಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವವರಾಗಿದ್ದರೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರಲಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಿ ಎಂದಿದ್ದರು. 

Follow Us:
Download App:
  • android
  • ios