ಪ್ರಧಾನಿ ನರೇಂದ್ರ ಮೋದಿ ಪರವಾಗಿ ಬ್ಯಾಟ್‌ ಬೀಸಿದ ನಟ ಅಹಿಂಸಾ ಚೇತನ್‌

ಭಾರತದ ಗೋಮಾಂಸ ರಪ್ತು ಮಾಡುವ ಬಗ್ಗೆ ಮೊಟ್ಟ ಮೊದಲ ಬಾರಿಗೆ ನಟ ಅಹಿಂಸಾ ಚೇತನ್‌ ಅವರು ಬಿಜೆಪಿ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ.

Actor Ahimsa Chetan batting favor of Narendra Modi BJP government about India beef Export sat

ಬೆಂಗಳೂರು (ನ.07): ದೇಶದಲ್ಲಿ ಗೋಮಾಂಸ ರಫ್ತು ವಿಚಾರದಲ್ಲಿ ನಟ ಅಹಿಂಸಾ ಚೇತನ್‌ ಅವರು ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಈ ಮೂಲಕ ಸಚಿವ ಸಂತೋಷ್‌ಲಾಡ್‌ಗೆ ಅಜ್ಞಾನಿ ನಾಯಕರೇ ಸುಳ್ಳು ಹೇಳಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, ಭಾರತ ದೇಶ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ ಹಾಗೂ ಕರ್ನಾಟಕ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿವೆ.  ಇದರ ಶ್ರೇಯಸ್ಸು/ ಕ್ರೆಡಿಟ್‌ 'ಮೋದಿ ಅವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್‌ನ ಸಂತೋಷ್ ಲಾಡ್ ಟೀಕಿಸಿದ್ದರು. ಆದರೆ, ಇದು ಸುಳ್ಳು ಮಾಹಿತಿ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್‌ ಪ್ರಧಾನಿ ಮೋದಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಜೊತೆಗೆ, ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಗ್ಗೆ ಟೀಕೆ ಮಾಡಿದ್ದಾರೆ.

ಇಂಡಿ ಕ್ಷೇತ್ರದ ಹಳ್ಳಿಗಳ ಕಾಲುವೆಗೆ ನೀರು ಬರದಿದ್ದರೆ ರಾಜಿನಾಮೆ ನೀಡ್ತೇನೆ: ಕೈ ಶಾಸಕ ಯಶವಂತರಾಯಗೌಡ ಎಚ್ಚರಿಕೆ

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿರುವ ನಟ ಅಹಿಂಸಾ ಚೇತನ್‌ ಅವರು 'ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದ 2 ನೇ ಅತಿದೊಡ್ಡ ಸ್ಥಾನ ಪಡೆದಿದೆ ಇದರ ಶ್ರೇಯಸ್ಸು/ ಕ್ರೆಡಿಟ್‌ 'ಮೋದಿ ಅವರಿಗೆ ಸಲ್ಲಬೇಕು' ಎಂದು ಕಾಂಗ್ರೆಸ್‌ನ ಸಂತೋಷ್ ಲಾಡ್ ಹೇಳಿದ್ದಾರೆ. ಇದೊಂದು ಸುಳ್ಳು ಆರೋಪ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಗ್ರಾಫ್ ಯುಪಿಎ 2ನೇ ಅವಧಿಯ ಆಡಳಿತದಲ್ಲಿ 2009 ರಿಂದ 2014 ರ ವರೆಗೆ ವಾರ್ಷಿಕವಾಗಿ ಶೇ.30ರಷ್ಟು ಗೋಮಾಂಸದ ರಫ್ತು ಹೇಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ.

ಇನ್ನು 2014 ರಿಂದ 2019 ರವರೆಗೆ ಬಿಜೆಪಿ ಆಡಳಿತದ ಮೊದಲ 5 ವರ್ಷಗಳಲ್ಲಿ, ಗೋಮಾಂಸ ರಫ್ತು ಸ್ಥಿರವಾಗಿದೆ ಮತ್ತು ಕಡಿಮೆಯಾಗಿದೆ. ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನ ಪಡೆದಿರುವುದು ಇದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಹೊರತು ನರೇಂದ್ರ ಮೋದಿಯವರಿಗೆ ಅಲ್ಲ. ಸಂತೋಷ್ ಲಾಡ್ ಅವರಂತಹ ಕಾಂಗ್ರೆಸ್ ನಾಯಕರು ಅಜ್ಞಾನಿಗಳಾಗಿದ್ದು, ಮೋದಿಯವರ ತಪ್ಪು ಹುಡುಕಲು ಅವರುಗಳು ಹೆಚ್ಚಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.

ಭಾರತರತ್ನ ವಿಶ್ವೇಶ್ವರಯ್ಯ ನಿರ್ಮಿಸಿದ್ದ ಏಷ್ಯಾದ ಮೊಟ್ಟ ಮೊದಲ ನೀರಾವರಿ ಸುರಂಗ ಕಾಲುವೆಯ ಮೇಲ್ಭಾಗದ ಮಣ್ಣು ಕುಸಿತ

Latest Videos
Follow Us:
Download App:
  • android
  • ios