ಬರಪೀಡಿತ ಘೋಷಣೆಗೆ ನಿಯಮ ಸಡಿಲಿಸಿ: ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ಹೀಗಾಗಿ, ಬರಪೀಡಿತ ಜಿಲ್ಲೆ ತಾಲೂಕು ಘೋಷಣೆ ಮಾಡಲು ಕೇಂದ್ರದ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದದಾರೆ.
ಬೆಂಗಳೂರು (ಆ.13): ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಬರಗಾಲದ ಪರಿಸ್ಥಿತಿ ಆವರಸಿದೆ.ಕೆಲವು ಜಿಲ್ಲೆಗಳಲ್ಲಿ ಇನ್ನೂ ಬಿತ್ತನೆ ಪ್ರಮಾಣ ಶೇ.50 ಕೂಡ ದಾಟಿಲ್ಲ. ಹೀಗಿದ್ದರೂ, ಕರ್ನಾಟಕದಲ್ಲಿ ಕೆಲವು ಜಿಲ್ಲೆ ಮತ್ತು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರದ ನಿಯಮಾವಳಿ ಅಡ್ಡಬರುತ್ತಿದೆ. ಬರ ಘೋಷಣೆಗೆ ಇರುವ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ಆದ್ದರಿಂದ ಬರಪೀಡಿತ ಎಂದು ಘೋಷಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳುತ್ತಿದೆ. ಆದರೆ, ಬರಗಾಲ ಘೋಷಣೆಗೆ ಕೇಂದ್ರದ ಷರತ್ತುಗಳು ಅಡ್ಡಿಯಾಗುತ್ತಿವೆ. ಆದ್ದರಿಂದ ಈಗಾಗಲೇ ಕೇಂದ್ರ ಸರ್ಕಾರ ಬರ ಘೋಷಣೆ ಸಂಬಂಧ ಸಿದ್ಧಪಡಿಸಿರುವ ನಿಯಮಾವಳಿಗಳನ್ನು ಸಡಿಲಿಕೆ ಮಾಡುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರವನ್ನು ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಕೇಂದ್ರದ ಕೃಷಿ ಸಚಿವಾಲಯಕ್ಕೆ ಪತ್ರ ರವಾನೆ ಮಾಡಲಾಗಿದೆ.
'ಊರು ಎಂದ್ಮೇಲೆ ಹೊಲೆಗೇರಿ ಇರುತ್ತೆ' ಹೇಳಿಕೆಗೆ ಆಕ್ರೋಶ: ಕ್ಷಮೆ ಕೇಳಿದ ಬುದ್ಧಿವಂತ ಉಪೇಂದ್ರ
ಇನ್ನು ಸದ್ಯದ ಪರಿಸ್ಥಿತಿಯಲ್ಲಿ ಬರಪೀಡಿತ ತಾಲೂಕು, ಜಿಲ್ಲೆ ಎಂದು ಘೋಷಣೆ ಮಾಡಲು ಕೇಂದ್ರದ ನಿಯಾಮಾವಳಿ ಪಾಲನೆ ಕಡ್ಡಾಯವಾಗಿದೆ. ಒಂದು ವೇಳೆ ನಿಯಮಾವಳಿ ಉಲ್ಲಂಘನೆ ಮಾಡಿ ಬರಪೀಡಿತರ ಎಂದು ಘೋಷಣೆ ಮಾಡಿದರೂ ಅದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡುವುದಿಲ್ಲ. ಆದರೆ, ಕೇಂದ್ರದ ಕಡ್ಡಾಯ, ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿದರೆ ಬರ ಘೋಷಣೆ ಮಾಡುವ ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಆದ್ದರಿಂದ ನಿಯಾಮಾವಳಿಗಳ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ.
ಬರಪೀಡಿತ ಎಂದು ಘೋಷಣೆ ಮಾಡಬೇಕಾದರೆ, ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು. ಈ ನಿಯಮಾವಳಿಯೇ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ. ಇನ್ನು ಅಂದರೆ, ಶೇ.60 ಮಳೆ ಆಗದಿದ್ದರೆ ಮಾತ್ರ ಬರ ಎಂದು ಘೋಷಣೆ ಮಾಡಬಹುದು. ಇಲ್ಲವಾದಲ್ಲಿ ಬಿತ್ತನೆ ಮಾಡಿದ ಬೆಳೆಯಲ್ಲಿ ಶೇ.50 ಬೆಳೆಹಾನಿ ಆಗಿರಬೇಕು. ಇಂತಹ ಪರಿಸ್ಥಿತಿ ಸಂಭವಿಸಿ ಬರಪೀಡಿತ ಎಂದು ಘೋಷಣೆ ಮಾಡಸಿದರೂ ಕೇಂದ್ರ ಸರ್ಕಾರ ಶೇ.33% ಬೆಳೆಹಾನಿಗೆ ಮಾತ್ರ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಕೇಂದ್ರದ ನಿಯಮಾವಳಿ ಸಡಿಲಿಸುವ ಅಗತ್ಯವಿದೆ.
ಪತಿ ತೀರಿಕೊಂಡ ದಿನವೇ, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ
ಕೇಂದ್ರ ಸರ್ಕಾರವು ಬರವೆಂದು ಘೋಷಣೆ ಮಾಡಲು ಮಳೆ ಕೊರತೆ ಪ್ರಮಾಣ ಶೇ.60 ರಿಂದ ಶೇ. 30 ಪರ್ಸೆಂಟ್‌ಗೆ ಇಳಿಸಬೇಕು. ಹೀಗಾದಲ್ಲಿ ಕನಿಷ್ಟ ಮಾನದಂಡದ ಅಡಿ ನಿಯಮಾವಳಿಗೆ ತಿದ್ದಪಡಿಗೆ ಅನುಮತಿಸುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆ ಸಾಧ್ಯವಾಗಲಿದೆ. ಇಲ್ಲವಾದರೆ ರಾಜ್ಯದ ಬಹಳಷ್ಟು ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ, ನಿಯಮ ಸಡಿಲಿಕೆ ಮಾಡಿದಲ್ಲಿ ಬರ ಘೋಷಣೆ ಅಡಿ ಪರಿಹಾರ ಮತ್ತು ರಿಯಾಯಿತಿ ಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶ ದೊರೆಯಲಿದೆ.
- ಬರಪೀಡಿತ ಘೋಷಣೆಗೆ ಇರುವ ಮಾನದಂಡಗಳು:
- ರಾಜ್ಯದ ಯಾವುದೇ ತಾಲೂಕು, ಅಥವಾ ಜಿಲ್ಲೆಯಲ್ಲಿ ಶೇ.60 ಮಳೆ ಕೊರತೆ ಆಗಬೇಕು.
- ಕನಿಷ್ಟ ಮೂರು ವಾರಗಳು ಅಂತರ ಕಡಿಮೆ ಇರದಂತೆ ನಿಗದಿತ ಪ್ರದೇಶದಲ್ಲಿ ಮಳೆ ಆಗಿರಬಾರದು.
- ಬರಪೀಡಿತ ಎಂದು ಘೋಷಣೆ ಮಾಡಲು ಬಿತ್ತನೆಯಾದ ಬೆಳೆಯ ಶೇ.50% ಹಾನಿ ಆಗಬೇಕು.