Asianet Suvarna News Asianet Suvarna News

ಫಸಲ್ ಭಿಮಾ ಯೋಜನೆಯಡಿ ರೈತರ ಬೆಳೆ ವಿಮೆಗೆ ನೋಂದಣಿ ಆರಂಭ

ಕೃಷಿ ಇಲಾಖೆ ವತಿಯಿಂದ 2024ನೇ ಸಾಲಿನ  ಮುಂಗಾರು  ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಬೆಳೆ ವಿಮೆ ಮಾಡಿಸಲು ನೋಂದಣಿ ಆರಂಭಿಸಲಾಗಿದೆ. 

Registration for Crop Insurance under Phasal Bheema Scheme has started sat
Author
First Published Jul 4, 2024, 6:44 PM IST

ಬೆಂಗಳೂರು (ಜು.04): ಕೃಷಿ ಇಲಾಖೆ ವತಿಯಿಂದ 2024ನೇ ಸಾಲಿನ  ಮುಂಗಾರು  ಹಂಗಾಮಿನ 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಬೆಳೆ ವಿಮೆ ಮಾಡಿಸಲು ನೋಂದಣಿ ಆರಂಭಿಸಲಾಗಿದೆ. 

ರಾಜ್ಯದಲ್ಲಿ ಕೃಷಿ ಇಲಾಖೆ ವತಿಯಿಂದ 2024ನೇ ಸಾಲಿನ  ಮುಂಗಾರು  ಹಂಗಾಮಿನ 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆಯನ್ನು' ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರು ನಗರ ಜಿಲ್ಲೆಗೆ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ) ಹಾಗೂ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ), ಮತ್ತು ಟೊಮ್ಯಾಟೋ ಬೆಳೆಗಳನ್ನು ಇತರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ. ಟೊಮ್ಯಾಟೋ ಬೆಳೆಗೆ ಜುಲೈ 15, ರಾಗಿ , ಭತ್ತ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ಆಗಸ್ಟ್ 16 ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ. ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ (Common Service Centre), ಕರ್ನಾಟಕ ಒನ್ ಅಥವಾ ಬ್ಯಾಂಕ್ ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಬಹುದು.

ನೇರಳೆ ಬೆಳೆಯಿಂದ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವ ರೈತ: ಕೃಷಿಯಲ್ಲಿ BMTC ನಿರ್ವಾಹಕ ವೇಣುಗೋಪಾಲ ಬಂಗಾರದ ಬದುಕು

ಬೆಂಗಳೂರು ನಗರ ಜಿಲ್ಲೆಯ ರೈತರು ಹೆಚ್ಚಿನ ವಿವರಗಳಿಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ವಿಮಾ ಸಂಸ್ಥೆಯ ಪ್ರತಿ ನಿಧಿಯನ್ನು ಸಂಪರ್ಕಿಸಬಹುದಾಗಿದೆ. ಆಯ್ಕೆಯಾಗಿರುವ ವಿಮಾ ಸಂಸ್ಥೆ: ಅಗ್ರಿಕಲ್ಚರ್  ಇನ್ಯೂರನ್ಸ್ ಕಂಪೆನಿ ಲಿ. (ಟೋಲ್ ಪ್ರೀ ನಂ: 1800-4250 505) ಸಂರ್ಕಿಸಬಹುದು.

ವಿಶೇಷ ಸೂಚನೆ : ಬೆಳೆ ವಿಮೆ ನೋಂದಣಿಗೆ  ಫ್ರೂಟ್ಸ್  (FRUITS ID)  ಗುರುತಿನ ಸಂಖ್ಯೆ  ಕಡ್ಡಾಯವಿರುತ್ತದೆ. ರೈತರು ಅಂದಾಜು  / ಅಪೇಕ್ಷಿತ ಬೆಳೆ ಬಿತ್ತನೆ  ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೆ  ವಿಮೆಗೆ ನೋಂದಾಯಿಸಿಕೊಳ್ಳಬಹುದು  ಹಾಗೂ ಬಿತ್ತನೆ ದೃಢೀಕರಣದ ಅವಶ್ಯಕತೆ  ಇರುವುದಿಲ್ಲ.  ಬೆಳೆ  ವಿಮೆಗೆ  ನೋಂದಾಯಿಸಿದ  ನಂತರ ಬೇರೆ ಬೆಳೆ ಬಿತ್ತನೆ  ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗಧಿಪಡಿಸಿದ  ಅವಧಿಯೊಳಗಾಗಿ  ತಾವು ನೋಂದಾಯಿಸಿದ ಕೇಂದ್ರಗಳಿಗೆ ತೆರಳಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು ಎಂದು ಬೆಂಗಳೂರು ನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಅಧಿಕ ಮುಂಗಾರು ಮಳೆ: ದೇಶದಲ್ಲಿ ಶೇ.11ರಷ್ಟು ಕೊರತೆ

Latest Videos
Follow Us:
Download App:
  • android
  • ios