ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ನಿರೀಕ್ಷಿತ 165.3  ಮಿ.ಮೀ ಬದಲಾಗಿ 147.2  ನಷ್ಟು ಮಾತ್ರವೇ ಮಳೆ ಸುರಿದಿದೆ. ಅಂದರೆ ಒಟ್ಟಾರೆ ಮಳೆ ಕೊರತೆ ಪ್ರಮಾಣ ಶೇ.11ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ನವದೆಹಲಿ(ಜು.02):  ನಿಗದಿತ ಮೇ 30ರಂದೇ ಕೇರಳದ ಕರಾವಳಿ ಮೂಲಕ ದೇಶವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು, ಕಳೆದ ಒಂದು ತಿಂಗಳ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸುವಲ್ಲಿ ವಿಫಲವಾಗಿದೆ.

ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ನಿರೀಕ್ಷಿತ 165.3 ಮಿ.ಮೀ ಬದಲಾಗಿ 147.2 ನಷ್ಟು ಮಾತ್ರವೇ ಮಳೆ ಸುರಿದಿದೆ. ಅಂದರೆ ಒಟ್ಟಾರೆ ಮಳೆ ಕೊರತೆ ಪ್ರಮಾಣ ಶೇ.11ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್‌ ಮಾಹೆಯಲ್ಲಿ ಇಷ್ಟು ಕಡಿಮೆ ಮಳೆ ಆಗಿದ್ದು 5 ವರ್ಷದ ಗರಿಷ್ಠ. ಆದರೆ ಇದ್ದಿದ್ದರಲ್ಲೇ ಖುಷಿಯ ಸಂಗತಿ ಎಂದರೆ ದಕ್ಷಿಣ ಭಾರತದಲ್ಲಿ ಮಾತ್ರ ಶೇ.14ರಷ್ಟು ಹೆಚ್ಚಿನ ಮಳೆ ಸುರಿದಿದೆ. ಉಳಿದೆಡೆ ಮಳೆ ಕೊರತೆ ಉಂಟಾಗಿದೆ. ಆದರೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು (ಶೇ.106ರಷ್ಟು) ಮಳೆ ಸುರಿವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.

ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ ಹಲವೆಡೆ ಬಿರುಗಾಳಿ‌ ಸಹಿತ ಭಾರೀ ಮಳೆ..!

ಭಾರತದಲ್ಲಿ ಭೀಕರ ಉಷ್ಣಮಾರುತ: 14 ವರ್ಷದ ದಾಖಲೆ

ನವದೆಹಲಿ: ಭಾರತವು 536 ಉಷ್ಣಮಾರುತ ದಿನಗಳನ್ನು ಈ ಬೇಸಿಗೆಯಲ್ಲಿ ಅನುಭವಿಸಿದೆ. ಇದು 14 ವರ್ಷಗಳ ಗರಿಷ್ಠ. ಅಲ್ಲದೆ ಜೂನ್‌ನಲ್ಲಿ 181 ಉಷ್ಣಮಾರುತ ದಿನಗಳನ್ನು ಅನುಭವಿಸಿದೆ. ಇದು 15 ವರ್ಷದ ಗರಿಷ್ಠ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?

ಶೇ.33 ಕೊರತೆ- ವಾಯುವ್ಯ ಭಾರತ
ಶೇ.14 ಕೊರತೆ - ಮಧ್ಯ ಭಾರತ
ಶೇ.13 ಕೊರತೆ- ಈಶಾನ್ಯ ಭಾರತ
ಶೇ.14 ಅಧಿಕ- ದಕ್ಷಿಣ ಭಾರತ