ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಣೆ ಜ್ಞಾನ, ತಾಂತ್ರಿಕವಾಗಿ ನೈಪುಣ್ಯತೆ ಹಾಗೂ ಭೌತಿಕ ಮತ್ತು ಮಾನಸಿಕ ಸದೃಢವಾಗಿ ಪರಿಣತಿ ಹೊಂದಿರಬೇಕಾಗುತ್ತದೆ. ಆದ್ದರಿಂದ ಬಡ್ತಿ ವೇಳೆ ಅರ್ಹತಾ ಸೇವೆಯ ಅವಧಿಯನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ಪಟ್ಟಿದೆ ಎಂದು ವಿವರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ 

ವಿಧಾನ ಪರಿಷತ್‌(ಜು.14):  ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಮುಂಬಡ್ತಿಗೆ ನಿಗದಿಪಡಿಸಿರುವ ಅರ್ಹತಾ ಸೇವೆಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಲು ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಅಸಾಧ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು. 

ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಣೆ ಜ್ಞಾನ, ತಾಂತ್ರಿಕವಾಗಿ ನೈಪುಣ್ಯತೆ ಹಾಗೂ ಭೌತಿಕ ಮತ್ತು ಮಾನಸಿಕ ಸದೃಢವಾಗಿ ಪರಿಣತಿ ಹೊಂದಿರಬೇಕಾಗುತ್ತದೆ. ಆದ್ದರಿಂದ ಬಡ್ತಿ ವೇಳೆ ಅರ್ಹತಾ ಸೇವೆಯ ಅವಧಿಯನ್ನು ಕಡಿಮೆ ಮಾಡಲು ಆಗುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಭಿಪ್ರಾಯ ಪಟ್ಟಿದೆ ಎಂದು ವಿವರಿಸಿದರು.

ಪೂಜೆ ಮಾಡಲು ಪೊಲೀಸ್‌ ಅನುಮತಿ ಬೇಕಿಲ್ಲ: ಸಚಿವ ಪರಮೇಶ್ವರ್‌

ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಇಲಾಖೆಯು ತಾಂತ್ರಿಕ ಇಲಾಖೆಯಾಗಿದೆ. ಪ್ರವಾಹ, ಭೂಕಂಪ, ಜ್ವಾಲಾಮುಖ ಮುಂತಾದ ಪ್ರಕೃತಿ ವಿಕೋಪಗಳು ಮಾನವ ಸೃಷ್ಟಿಸಿದ ಕೈಗಾರಿಕಾ ಮತ್ತು ರಾಸಾಯನಿಕ ವಿಪತ್ತುಗಳು, ಕಟ್ಟಡ ಕುಸಿತ, ರಸ್ತೆ ಅಪಘಾತಗಳು, ರೈಲು ದುರಂತಗಳು, ಅಗ್ನಿ ಅನಾಹುತಗಳ ಸಂದರ್ಭದಲ್ಲಿ ಆಸ್ತಿಪಾಸ್ತಿ ರಕ್ಷಿಸಲು ಜೀವ ಹಾನಿ ತಪ್ಪಿಸುವಂತಹ ಮಹತ್ವವಾದ ಇಲಾಖೆ ಇದಾಗಿದೆ.

ಒಂದು ವೇಳೆ ಐದು ವರ್ಷದ ಅವಧಿಯಲ್ಲಿ ಪಡೆಯುವ ನೈಪುಣ್ಯತೆ ಇತ್ಯಾದಿಗಳನ್ನು ಮೂರು ವರ್ಷದಲ್ಲಿ ಪಡೆಯುವಂತಹ ಅವಕಾಶವಿದ್ದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.