ಟಫ್‌ರ್‍ ಕ್ಲಬ್‌ ಹುದ್ದೆ ನೇಮಕಕ್ಕೆ ಸಿದ್ದರಾಮಯ್ಯ 1.3 ಕೋಟಿ ಸ್ವೀಕಾರ: ಎನ್‌.ಆರ್‌.ರಮೇಶ್‌ ವಿವೇಕಾನಂದರಿಂದ ಹಣ ಪಡೆದು ನೇಮಕ ಇದು ಅಪರಾಧ, ಲೋಕಾಕ್ಕೆ ದೂರು: ಬಿಜೆಪಿ ಮುಖಂಡ

ಬೆಂಗಳೂರು (ಅ.31) : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರು ಟಫ್‌ರ್‍ ಕ್ಲಬ್‌ ಹುದ್ದೆಗೆ ಪ್ರಭಾವಿ ವ್ಯಕ್ತಿಯೊಬ್ಬರ ನೇಮಕಕ್ಕೆ .1.3 ಕೋಟಿಯನ್ನು ಪಡೆದಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಭ್ರಷ್ಟ, ಗೂಂಡಾ ಪಕ್ಷ: ಅಶೋಕ್‌, ಸುಧಾಕರ್‌

ಭಾನುವಾರ ಬಿಬಿಎಂಪಿ ಕಚೇರಿ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2014ರಲ್ಲಿ ಬೆಂಗಳೂರು ಟಫ್‌ರ್‍ ಕ್ಲಬ್‌ ಉಸ್ತುವಾರಿ ಹುದ್ದೆಗೆ ಎಲ….ವಿವೇಕಾನಂದ ಎಂಬುವವರಿಂದ .1.3 ಕೋಟಿ ಪಡೆದು ನೇಮಕ ಮಾಡಿದ್ದಾರೆ. ಹಣವನ್ನು ಚೆಕ್‌ ಮೂಲಕ ಸ್ವೀಕರಿಸಿದ್ದು, ಈ ಬಗ್ಗೆ ದಾಖಲೆ ಇದೆ. ಲೋಕಾಯುಕ್ತಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ 2018 ರ ಏಪ್ರಿಲ… 21ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಲ್‌.ವಿವೇಕಾನಂದ ಅವರಿಂದ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿರುತ್ತಾರೆ ಎಂದು ದೂರಿದರು.

ಕೇಂದ್ರ ಸರ್ಕಾರದ ಗೃಹ ಇಲಾಖೆಯ ನಿಯಮದಂತೆ ಮುಖ್ಯಮಂತ್ರಿಗಳಾಗಲಿ ಅಥವಾ ಯಾವುದೇ ಸಚಿವರಾಗಲಿ ಯಾವುದೇ ವ್ಯಕ್ತಿಗೆ ಪ್ರಭಾವಿ ಹುದ್ದೆಯನ್ನು ನೀಡಿ, ಫಲಾನುಭವಿಯಿಂದ ಯಾವುದೇ ರೀತಿಯ ಉಡುಗೊರೆಗಳನ್ನಾಗಲಿ, ನಗದನ್ನಾಗಲಿ ಅಥವಾ ಯಾವುದೇ ರೂಪದಲ್ಲಿ ಹಣವನ್ನು ಸ್ವೀಕರಿಸುವುದು ಅಪರಾಧವಾಗಿರುತ್ತದೆ. ಈ ಬಗ್ಗೆ ರಾಜ್ಯ ಲೋಕಾಯುಕ್ತಕ್ಕೆ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಂಚನೆ ದೂರು ಸಲ್ಲಿಸಲಾಗುವುದು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ/ಸಿಐಡಿ ತನಿಖೆಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ವಿವೇಕ್‌ ಬಳಿಕ ಪಡೆದಿದ್ದು ಸಾಲ. ತನಿಖೆ ಮಾಡಿಸಿ: ಸಿದ್ದು ಸ್ಪಷ್ಟನೆ

ನಾನು ಕಿಂಗ್ಸ್ ಕೋರ್ಟ್ ಮಾಲಿಕ ವಿವೇಕ್‌ ಅವರಿಂದ ಒಂದೂವರೆ ಕೋಟಿ ರುಪಾಯಿ ಸಾಲ ಪಡೆದಿದ್ದು ನಿಜ. ಆದರೆ, ಆ ಸಾಲಕ್ಕೂ ವಿವೇಕ್‌ ಅವರನ್ನು ಬೆಂಗಳೂರು ಟಫ್‌ರ್‍ ಕಲ್‌್ಬ ಸದಸ್ಯರನ್ನಾಗಿ ನೇಮಿಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಬೇಕಿದ್ದರೆ ಈ ಬಗ್ಗೆ ಯಾವುದೇ ತನಿಖೆ ಮಾಡಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್‌ ಕಟೀಲ್‌ ಟೀಕೆ

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ವೇಳೆ, ವಿವೇಕ್‌ ಅವರನ್ನು ಟಫ್‌ರ್‍ ಕ್ಲಬ್‌ ಸದಸ್ಯರನ್ನಾಗಿ ನೇಮಿಸಲು ತಾವು ಮುಖ್ಯಮಂತ್ರಿಯಾಗಿದ್ದಾಗ .1.30 ಕೋಟಿ ಲಂಚ ಪಡೆದಿರುವುದಾಗಿ ಆರೋಪಿಸಿ ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಲೋಕಾಯುಕ್ತ ತನಿಖೆಗೆ ದೂರು ನೀಡಿದ್ದಾರಲ್ಲಾ ಎಂಬ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ನಾನು ವಿವೇಕ ಅವರ ಬಳಿ ಒಂದೂವರೆ ಕೋಟಿ ಸಾಲ ಪಡೆದಿದ್ದು ನಿಜ. ಅದನ್ನು ಇನ್ನೂ ತೀರಿಸಿಲ್ಲ. ಅವರು ನನ್ನ 40 ವರ್ಷಗಳ ಗೆಳೆಯ. ನಿವೇಶನ ಖರೀದಿಗೆ ಸಾಲ ಮಾಡುವುದು ತಪ್ಪಾ? ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಆದರೆ, ಸಾಲ ಪಡೆದಿದ್ದಕ್ಕೂ ನೇಮಕ ಮಾಡಿದ್ದಕ್ಕೂ ಸಂಬಂಧವಿಲ್ಲ ಎಂದರು.