Asianet Suvarna News Asianet Suvarna News

ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್‌ ಕಟೀಲ್‌ ಟೀಕೆ

ವಿಪಕ್ಷ ನಾಯಕ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಹಿಂದೂಗಳ ಮಾರಣ ಹೋಮ ನಡೆಯಿತು. ಆದರೂ ಸಿದ್ದರಾಮಯ್ಯ ಒಂದು ತೊಟ್ಟು ಕಣ್ಣೀರು ಹಾಕಲಿಲ್ಲ. ‘ಸಿದ್ದರಾಮಯ್ಯ ನೀವೊಬ್ಬ ಖಳನಾಯಕ ಅಲ್ಲದೆ, ನರಹಂತಕರೂ ಆಗಿದ್ದೀರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತೀವ್ರ ವಾಗ್ದಾಳಿ ನಡೆಸಿದರು. 

bjp state president nalin kumar katil slams on siddaramaiah at mysuru gvd
Author
First Published Oct 30, 2022, 3:40 AM IST

ಮೈಸೂರು (ಅ.30): ವಿಪಕ್ಷ ನಾಯಕ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಹಿಂದೂಗಳ ಮಾರಣ ಹೋಮ ನಡೆಯಿತು. ಆದರೂ ಸಿದ್ದರಾಮಯ್ಯ ಒಂದು ತೊಟ್ಟು ಕಣ್ಣೀರು ಹಾಕಲಿಲ್ಲ. ‘ಸಿದ್ದರಾಮಯ್ಯ ನೀವೊಬ್ಬ ಖಳನಾಯಕ ಅಲ್ಲದೆ, ನರಹಂತಕರೂ ಆಗಿದ್ದೀರಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತೀವ್ರ ವಾಗ್ದಾಳಿ ನಡೆಸಿದರು. 

ವಿದ್ಯಾರಣ್ಯಪುರಂನ ಕೆ.ಆರ್‌. ವಿಧಾನಸಭಾ ಕ್ಷೇತ್ರದ ಬೂತ್‌ ಅಧ್ಯಕ್ಷರ ಮತ್ತು ಬಿಎಲ್‌ಎಗಳ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಲನ್‌ನಂತೆ ಕೆಲಸ ಮಾಡಿದರು. ಇನ್ನು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದೆ ಕುಮಾರಸ್ವಾಮಿ ತಾಜ್‌ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರು. ಇದರ ಫಲವೇ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ವಾಯಿತು ಎಂದರು.

Mysuru: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳೀಪಟ: ನಳಿನ್‌ಕುಮಾರ್‌ ಕಟೀಲ್‌

ಬಿಜೆಪಿ ಪರ ಅಲೆ: ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನಡೆಸಿದ ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಜೆಡಿಎಸ್‌ನ ಪಂಚರತ್ನ ಯಾತ್ರೆಗೂ ಜನರು ಮರುಳಾಗಲ್ಲ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಅಲೆ ಎದ್ದಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌, ಜೆಡಿಎಸ್‌ ಸಮುದ್ರಕ್ಕೆ ಬೀಳಲಿವೆ. ಆಗ ಅವ್ವ-ಮಗ, ಅಪ್ಪ-ಮಗನ ಪಕ್ಷಗಳಿಗೆ ಉಳಿಗಾಲವಿಲ್ಲ ಎಂದು ಭವಿಷ್ಯ ನುಡಿದರು.

ಅಧಿಕಾರಕ್ಕೆ ಬರುವುದು ನಿಶ್ಚಿತ: ಕಾಂಗ್ರೆಸ್‌ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಒಳಜಗಳ ಹೆಚ್ಚಾಗಿದೆ. ಡಿಕೆಶಿಯವರನ್ನು, ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಸಿದ್ದರಾಮಯ್ಯರನ್ನು ಡಿಕೆಶಿ ಸೋಲಿಸುತ್ತಾರೆ, ಕೇವಲ ಕಾಂಗ್ರೇಸ್‌ ಪಕ್ಷದ ಒಳಬೇಗುದಿಯಿಂದ ಅಲ್ಲ ಬಿಜೆಪಿ ಪಕ್ಷದ ಅಭಿವೃದ್ದಿಯ ಮಂತ್ರದಿಂದ 150 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಮಹದೇವನಗರದಲ್ಲಿರುವ ಜಯಲಕ್ಷ್ಮೇ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಖಳನಾಯಕ, ಗೋಮುಖ ರಾಜಕಾರಣಿ ಸಿದ್ದರಾಮಯ್ಯ, ಕಣ್ಣೀರಿನಲ್ಲಿ ನಾಟಕವಾಡುವ ಕುಮಾರಸ್ವಾಮಿ, ಅನೈತಿಕ ಒಪ್ಪದಿಂದ ಮೈತ್ರಿ ಸರ್ಕಾರ ತಂದರು. ಆದರೆ ಶಾಸಕರಿಗೆ ಅನುದಾನ ನೀಡದೆ, ಅಭಿವೃದ್ದಿ ಮಾಡದೆ ಕಾಲ ಕಳೆದರು. ಕರ್ನಾಟಕ ಕಲ್ಯಾಣ ರಾಜ್ಯವಾಗಬೇಕು, ಅಭಿವೃದ್ದಿಯಾಗಬೇಕೆಂಬ ಉದ್ದೇಶದಿಂದ 17 ಜನ ಆಡಳಿತ ಪಕ್ಷದ ಮಂತ್ರಿಗಳು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಆಪರೇಷನ್‌ ಕಮಲ ಆಗಿರುವುದು ಮೈತ್ರಿ ಸರ್ಕಾರದ ದುರಾಡಳಿತ ಆಡಳಿತ ವೈಫಲ್ಯದಿಂದಾಗಿ ಎಂದರು.

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲ್ಲುವ ಅವಕಾಶ: ನಳಿನ್‌ ಕುಮಾರ್‌ ಕಟೀಲ್‌

ಶಾಸಕ ಬಿ. ಹರ್ಷವರ್ಧನ್‌ ಮಾತನಾಡಿ, ನಂಜನಗೂಡನ್ನು ಸ್ಯಾಟಲೈಟ್‌ ಟೌನ್‌ ಆಗಿ ನಿರ್ಮಿಸಲು ಶ್ರಮಿಸಿದ್ದೇನೆ. ಈ ಭಾಗದ ಬಹುದಿನ ಬೇಡಿಕೆಯಾಗಿದ್ದ ನುಗು ಏತ ನೀರಾವರಿ ಯೋಜನೆ, ಮತ್ತು 75 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು. ಬದನವಾಳು ಭಾಗದ ಕೆರೆ ತುಂಬಿಸುವ ಯೋಜನೆಗೆ 70 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಅವರು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಅಭಿವೃದ್ದಿ ಕೆಲಸಗಳೇ ಶ್ರೀರಕ್ಷೆಯಾಗಲಿದೆ ಎಂದರು.

Follow Us:
Download App:
  • android
  • ios