ಯಾದಗಿರಿಯಲ್ಲಿ ನಡೆಯಬೇಕಿದ್ದ ರಿಯಾಲಿಟಿ ಕೊನೆ ಕ್ಷಣದಲ್ಲಿ ರದ್ದು; ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಿಡಿ

ಸ್ಥಳೀಯ ಕಾಂಗ್ರೆಸ್ ನಾಯಕರನ್ನ ರಿಯಾಲಿಟಿ ಶೋಗೆ ಆಹ್ವಾನಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರ್ಯಕ್ರಮವನ್ನೇ ರದ್ದು ಮಾಡಿದ್ದಾರೆ ಎಂದು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟರ್ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Reality show canceled in Yadagiri issue puneeth kerehalli reaction rav

ಯಾದಗಿರಿ (ಮಾ.8): ಸ್ಥಳೀಯ ಕಾಂಗ್ರೆಸ್ ನಾಯಕರನ್ನ ರಿಯಾಲಿಟಿ ಶೋಗೆ ಆಹ್ವಾನಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರ್ಯಕ್ರಮವನ್ನೇ ರದ್ದು ಮಾಡಿದ್ದಾರೆ ಎಂದು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಕಾಂಗ್ರೆಸ್ ನಾಯಕರ ವಿರುದ್ಧ ಟ್ವಿಟರ್ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಹಿನ್ನೆಲೆ ಯಾದಗಿರಿಯಲ್ಲಿ ಖಾಸಗಿ ವಾಹಿನಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ದಿಢೀರ್ ರದ್ದು ಮಾಡಿರುವ ಪೊಲೀಸರ ಜಿಲ್ಲಾಡಳಿತ ಕ್ರಮದ ಬಗ್ಗೆ ಸೋಷಿಯಲ್‌ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಎಫೆಕ್ಟ್: ಯಾದಗಿರಿಯಲ್ಲಿ ನಡೆಯಬೇಕಿದ್ದ ರಿಯಾಲಿಟಿ ಶೋ ರದ್ದು!

ಹೇಳಿದ್ದೇನು?

ಇಂದು ಯಾದಗಿರಿಯಲ್ಲಿ ನೆಡೆಯಬೇಕಿದ್ದ sa re ga ma pa  grand finale ಕಾರ್ಯಕ್ರಮ ರದ್ದಾಗಿದ್ದು ಬಹಳ ಬೇಸರವಾಯಿತು ಎಲ್ಲಾ ತಯಾರಿ ಮಾಡಿಕೊಂಡಿದ್ದ ನನ್ನ ಪ್ರೀತಿಯ season 20 contestant ಗಳಿಗೆ ತುಂಬಾ ನೋವಾಗಿದೆ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಕಾರ್ಯಕ್ರಮ ನೋಡಲು ಬಂದಿದ್ದ ಸಾವಿರಾರು ಜನರಿಗೂ ತುಂಬಾ ಬೇಸರವಾಗಿದೆ ಇರಲಿ, ಮತ್ತೆ ಮುಂದಿನ ದಿನದಲ್ಲಿ ಯಾದಗಿರಿಯಲ್ಲೆ ಕಾರ್ಯಕ್ರಮ ನೆಡೆಯುತ್ತದೆ sa re ga ma pa season 20 ಯ ಎಲ್ಲಾ contestant ಗಳಿಗೂ ಒಳ್ಳೆಯದಾಗಲಿ ಮತ್ತೆ ಸೇರೋಣ 

ಬೆಂಗಳೂರಿನ ಗುಂಡೂರಾವ್ ಅವರನ್ನು ಆಹ್ವಾನಿಸಿ ಸ್ಥಳೀಯ ಕಾಂಗ್ರೆಸ್ ನಾಯಕ ಯಾದಗಿರಿ ಜಿಲ್ಲೆ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ್ ಅವರನ್ನು ಕಡೆಗಣಿಸಿದ ಕಾರಣಕ್ಕೆ ಸಾವಿರಾರು ಜನರು ಸೇರಿದ್ದ sa re ga ma pa ಕಾರ್ಯಕ್ರಮ ರದ್ದಾಯ್ತಾ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪುನೀತ್ ಕೆರೆಹಳ್ಳಿ ಪೋಸ್ಟ್‌ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರುಗೆ ರಿಯಾಲಿಟಿ ಶೋಗೆ ಆಯೋಜಕರು ಆಹ್ವಾನ ನೀಡಿರಲಿಲ್ಲ. ಹೀಗಾಗಿ ಬೆಂಗಳೂರು ಸ್ಫೋಟ, ಭದ್ರತೆ ನೆಪವೊಡ್ಡಿ ರಿಯಾಲಿಟಿ ಶೋ ಗ್ರ್ಯಾಂಡ್ ಫೀನಾಲೆ ರದ್ದು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಯಾದಗಿರಿಗೂ ರಾಮೇಶ್ವರ ಕೆಫೆ ಬಾಂಬರ್ ಗೂ ಲಿಂಕ್?

ಯಾದಗಿರಿ ಜಿಲ್ಲೆಯಲ್ಲಿ ಶಂಕಿತ ಬಾಂಬರ್ ಸಂಚಾರ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಗುಪ್ತಚರ ಇಲಾಖೆ ಮೂಲಕ ಆಡಳಿತಕ್ಕೆ ಮಾಹಿತಿ ರವಾನೆಯಾಗಿದೆ ಇದರಿಂದ ಜಿಲ್ಲೆಯಾದ್ಯಂತ ಹೈ ಅಲರ್ಟ್ ಸೂಚನೆಗಳು ಬಂದಿವೆ ಎಂಬ ಮಾತು ಕೇಳಿ ಬಂದಿವೆ. ಹೀಗಾಗಿ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಗ್ರ್ಯಾಂಡ್ ಫೀನಾಲೆ ರದ್ದು ಮಾಡಿರಬಹುದು. ರಿಯಾಲಿಟಿ ಶೋ ಆರಂಭಕ್ಕೆ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ರದ್ದಾಗಿದೆ. ಹೀಗಾಗಿ ಇದಕ್ಕೆ ಸಾರ್ವಜನಿಕರಲ್ಲಿ ಬಾಂಬರ್ ದಾಳಿ ತುಳುಕು ಹಾಕಿಕೊಂಡಿದೆ. ಆದರೆ ಕಾರ್ಯಕ್ರಮ ರದ್ದು ಮಾಡಿದ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳು. ಡಿಸಿ, ಎಸ್ಪಿ ಈ‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿ.ಕೆ.ಹರಿಪ್ರಸಾದ್ ವಿರುದ್ಧ ದೂರು ಸ್ವೀಕರಿಸಲು ಪೊಲೀಸರ ನಕಾರ: ಠಾಣೆ ಮುಂದೆ ಧರಣಿ ಕುಳಿತ ಪುನೀತ್ ಕೆರೆಹಳ್ಳಿ


 

Latest Videos
Follow Us:
Download App:
  • android
  • ios