Asianet Suvarna News Asianet Suvarna News

ಕೆಇಎ ಪರೀಕ್ಷಾ ಅಕ್ರಮ: ಅಕ್ರಮಕ್ಕೆಂದೇ ಹೊಸ ಮೊಬೈಲ್‌ ಖರೀದಿ, ಸಿಮ್‌ ಕಾರ್ಡ್‌ ಹಾಕದೆ ವೈಫೈ ಬಳಕೆ

ಪರೀಕ್ಷಾ ಅಕ್ರಮದಲ್ಲಿ ಬಳಸಲೆಂದೇ ಆರ್‌ಡಿಪಿ ಈ ಹೊಸ ಮೊಬೈಲ್‌ ಖರೀದಿಸಿ ಬಳಸುತ್ತಿದ್ದ ಎನ್ನಲಾಗಿದೆ. ತಂತ್ರಜ್ಞಾನ ಬಳಕೆಯಲ್ಲಿ ತುಂಬ ಜಾಣನಾಗಿರುವ ಆರ್‌ ಡಿ ಪಾಟೀಲ್‌ ಹೊಸ ಮೊಬೈಲ್‌ಗೆ ಸಿಮ್ ಕಾರ್ಡ್ ಹಾಕದೆ ವೈ ಫೈ ಬಳಸುತ್ತಿದ್ದ.

RD Patil Used New Mobile Phone and Use it in KEA Exam Irregularities grg
Author
First Published Nov 9, 2023, 9:31 AM IST

ಕಲಬುರಗಿ(ನ.09): ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ಎಸಗಿರುವ ಆರೋಪ ಹೊತ್ತು ಪರಾರಿಯಾಗಿರುವ ಮುಖ್ಯ ಆರೋಪಿ ಆರ್‌ಡಿ ಪಾಟೀಲ್‌ ಗೇಟ್‌ ಹತ್ತಿ ಜಿಗಿಯೋವಾಗ ಕೆಳಗೆ ಬಿದ್ದಿರುವ ಮೊಬೈಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವಸರದಲ್ಲಿ ಬಿದ್ದು ಹೋಗಿರುವ ಆರ್ ಡಿ ಪಾಟೀಲ್ ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು ಅದನ್ನೀಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂಲಗಳ ಪ್ರಕಾರ ಸದರಿ ಮೊಬೈಲ್ ನಲ್ಲಿ ಆರ್ ಡಿ ಪಾಟೀಲ್ ಹಲವು ದಾಖಲೆ ಪತ್ತೆಯಾಗಿವೆ ಎನ್ನಲಾಗಿದೆ.

ಪರೀಕ್ಷಾ ಅಕ್ರಮದಲ್ಲಿ ಬಳಸಲೆಂದೇ ಆರ್‌ಡಿಪಿ ಈ ಹೊಸ ಮೊಬೈಲ್‌ ಖರೀದಿಸಿ ಬಳಸುತ್ತಿದ್ದ ಎನ್ನಲಾಗಿದೆ. ತಂತ್ರಜ್ಞಾನ ಬಳಕೆಯಲ್ಲಿ ತುಂಬ ಜಾಣನಾಗಿರುವ ಆರ್‌ ಡಿ ಪಾಟೀಲ್‌ ಹೊಸ ಮೊಬೈಲ್‌ಗೆ ಸಿಮ್ ಕಾರ್ಡ್ ಹಾಕದೆ ವೈ ಫೈ ಬಳಸುತ್ತಿದ್ದ.

ಕೆಇಎ ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್‌ ಖರ್ಗೆ

ತಾನು ಯಾರಿಗಾದರೂ ಸಂಪರ್ಕ ಮಾಡಬೇಕಾದಲ್ಲಿ ವಾಟ್ಸಅಪ್‌ ಮೂಲಕವೇ ಕರೆ ಮಾಡಿ ಸಂಪರ್ಕಿಸುತ್ತಿದ್ದ ಪಾಟೀಲ್‌ ಎಲ್ಲಿಯೂ ಈ ಗುಟ್ಟು ರಟ್ಟಾಗದಂತೆ ಎಚ್ಚರವಹಿಸುತ್ತಿರೋದು ಸಹ ವಿಚರಣೆಯಿಂದ ಗೊತ್ತಾಗಿದೆ.
ಸಿಮ್‌ ಕಾರ್ಡ್‌ ಬಳಸುತ್ತಿದ್ದರೆ ತಾನಿರುವ ಲೋಕೇಷನ್‌ ಅದೆಲ್ಲಿ ಅನ್ಯರಿಗೆ ಗೊತ್ತಾಗುವುದೋ ಎಂದು ಸದಾಕಾಲ ವೈಫೈ, ವಾಟ್ಸಅಪ್‌ಗಳನ್ನೇ ಮಾದ?್ಮವಾಗಿ ಬಳಸುತ್ತಿದ್ದ. ಮೊಬೈಲ್‌ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ಅದರಲ್ಲಿನ ಮಾಹಿತಿ ಸಾಧ್ಯವಾದಷ್ಟು ಕಲೆ ಹಾಕುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

Follow Us:
Download App:
  • android
  • ios