Asianet Suvarna News Asianet Suvarna News

ಬೆಂಗಳೂರು ಬಾಂಬ್ ಸ್ಫೋಟ, ಪಾಕಿಸ್ತಾನ ಪರ ಘೋಷಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಕಿ ಉಗುಳಿದ ಪ್ರಮೋದ್ ಮುತಾಲಿಕ್!

ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನವರೇ ಭಯೋತ್ಪಾದಕರನ್ನು ಬೆಳೆಸುತ್ತಿದ್ದಾರೆ. ಈ ದೇಶದಲ್ಲಿ ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದರು.

Rameshwaram cafe blast and pro pak raised slogan issue pramod mutalik outraged agains congress govt at karwar rav
Author
First Published Mar 4, 2024, 2:30 PM IST

ಕಾರವಾರ (ಮಾ.4): ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನವರೇ ಭಯೋತ್ಪಾದಕರನ್ನು ಬೆಳೆಸುತ್ತಿದ್ದಾರೆ. ಈ ದೇಶದಲ್ಲಿ ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 2014ರ ಮುಂಚೆ ಎಷ್ಟು ಬಾಂಬ್ ಸ್ಫೋಟ, ಸಾವು ನೋವುಗಳಾಯ್ತು, 2014ರ ನಂತರ ಯಾಕಾಗಿಲ್ಲ? ಅದಕ್ಕೆ ಕಾರಣವೇ ಉಗ್ರರನ್ನು ಬಚಾವು ಮಾಡುವ ಕಾಂಗ್ರೆಸ್‌ನ ತಂತ್ರಗಾರಿಕೆ, ಅದೇ ಇವತ್ತು ಮುಳ್ಳಾಗಿದೆ. ಭಯೋತ್ಪಾದನೆ ಹುಟ್ಟುಹಾಕಿದ್ದು, ಪೋಷಕರು ಅವರೇ ಎಂದು ಕಿಡಿಕಾರಿದರು.

ಭಾನುವಾರದಂದೇ ಮೂರು ವಂದೇ ಭಾರತ್ ರೈಲುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ!

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಅಗಿದ್ದು ಇದೇ ಮೊದಲನೇ ಬಾರಿಯೇನೂ ಅಲ್ಲ, ಕೊನೆಯದೂ ಅಲ್ಲ. ಇದು ನಿರಂತರ ನಡೆಯುವ ಪ್ರಕ್ರಿಯೆ. ಎಲ್ಲಿಯವರೆಗೆ ಪೊಲೀಸರಿಗೆ ಅಥವಾ ತನಿಖಾ ಸಂಸ್ಥೆಗಳಿವೆ ಮುಕ್ತ ಅವಕಾಶ ಕೊಡುವುದಿಲ್ಲವೋ ಅಲ್ಲಿವರೆಗೆ ಇದೆಲ್ಲ ನಡೆಯುತ್ತಲೇ ಇರುತ್ತದೆ. ಪೊಲೀಸ್ ಇಲಾಖೆ ಅಥವಾ ತನಿಖಾ ಸಂಸ್ಥೆಗಳಿಗೆ ಮುಕ್ತ ಅವಕಾಶ ಕೊಟ್ರೆ ದೇವಸ್ಥಾನಗಳ ಮುಂದೆ ಚಪ್ಪಲಿ ಕೂಡಾ ಕಳ್ಳತನವಾಗಲ್ಲ. ಈ ಎಲ್ಲಾ ಘಟನೆಗಳಿಗೆ ಪೂರ್ಣ ವಿರಾಮ ಹಾಕಬಹುದು ಎಂದರು. 

ವಿಧಾನಸೌಧದ ಒಳಗಡೆನೇ ದೇಶದ್ರೋಹದ ಘೋಷಣೆ ಕೂಗ್ತಾರೆ. ಹೊರಗಡೆ ಹೋಗುವಾಗ ಕೂಡಲೇ ಬ್ಲಾಕ್ ಮಾಡಿಸಿದ್ದರೆ ಅವತ್ತೇ ದೇಶದ್ರೋಹಿ ಘೋಷಣೆ ಕೂಗಿದವರನ್ನು ಹಿಡಿಯಬಹುದಿತ್ತು. ಆದರೆ ನಾನು ಮೊದಲೇ ಹೇಳಿದಂತೆ ದೇಶದ್ರೋಹಿಗಳನ್ನು ರಕ್ಷಿಸುವುದೇ  ಕಾಂಗ್ರೆಸ್ ತಂತ್ರಗಾರಿಕೆ. ದೇಶದ್ರೋಹಿಗಳನ್ನ ಬಚಾವ್ ಮಾಡಿ ಈಗ ಎಫ್‌ಎಸ್‌ಎಲ್ ವರದಿ ಬರಬೇಕು ಅಂತಾ ನಾಟಕ ಮಾಡ್ತಿದ್ದಾರೆ. ಮುಸ್ಲಿಂ ದೇಶದ್ರೋಹಿಗಳು ಯಾರೇ ಘೋಷಣೆ ಕೂಗಿದ್ರು ಅವರನ್ನು ಖುರ್ಚಿಯ ಆಸೆಗೋಸ್ಕರ ಬಚಾವ್ ಮಾಡಲಾಗ್ತಿದೆ. ಇದು ನಾಚಿಗೆಗೇಡಿನ ಸಂಗತಿ, ದೇಶವೇ ನಾಚಿಗೆ ಪಡ್ತಿದೆ .

ಕಾಂಗ್ರೆಸ್‌ನ ಈ ಆಡಳಿತದ ಹಿನ್ನೆಲೆಯಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರನ್ನು ಶೂಟ್ ಅಟ್ ಸೈಟ್ ಮಾಡಬೇಕು. ಬಂಧಿಸಿ ಒಳಗಡೆ ಹಾಕಿ, ಆಮೇಲೆ ಜಾಮೀನಿನ‌ ಮೂಲಕ ಹೊರ ಬಂದು ಅದೇ ಕೃತ್ಯ ಮಾಡಲು ಬಿಡಬಾರದು. ಈವರೆಗೆ ದೇಶದ್ರೋಹಿ ಘೋಷಣೆ ಕೂಗಿದವರಿಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ, ಅದಕ್ಕೆ ಶೂಟ್ ಮಾಡಿ, ಕೊಂದು ಹಾಕಿ. ಇಂಥ ದೇಶವಿರೋಧಿಗಳು ಈ ನೆಲದಲ್ಲಿ ಬದುಕುವುದಕ್ಕೆ ಅರ್ಹತೆ ಇಲ್ಲ. ಒಮ್ಮೆ ಶೂಟೌಟ್ ಮಾಡಿದರೆ ಆಗ ಪಾಕಿಸ್ತಾನ ಪರ ಘೋಷಣೆ ಕೂಗಬಾರದು ಕೂಗಿದರೆ ಏನಾಗುತ್ತೆಂದು ಗೊತ್ತಾಗುತ್ತೆ. ಬಂಧನ ಪ್ರಕ್ರಿಯೆ ಸರಿಯಲ್ಲ ದೇಶದ್ರೋಹಿಗಳನ್ನು ಶೂಟ್ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ನಾಸೀರ್ ಹುಸೇನ್ ಗೆದ್ದ ಸಮಯದಲ್ಲಿ ಮಾಧ್ಯಮಗಳ ಜತೆ ನಡೆದುಕೊಂಡ ರೀತಿ ಶೋಭೆ ತರುವಂತದ್ದಲ್ಲ. ಬಾಂಬ್ ಸ್ಫೋಟದ ಲಿಂಕ್ ಬೆಂಗಳೂರು ಸೆಂಟ್ರಲ್ ಪರಪ್ಪನ ಅಗ್ರಹಾರದ ಒಳಗಡೆಯಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಶಾರೀಕ್ ಅಲ್ಲೇ ಇದ್ದಾನೆ. ಅವನಲ್ಲಿ 6 ಮೊಬೈಲ್‌ಗಳಿವೆ, ನಮ್ಮ ಕಾರ್ಯಕರ್ತರ ರಿಪೋರ್ಟ್ ಆಧಾರದಲ್ಲಿ ಜೈಲಿನಲ್ಲಿ ದೇಶದ್ರೋಹಿ ಚಟುವಟಿಕೆ ನಡೀತಿದೆ. ಅಲ್ಲೇ ತರಬೇತಿ ನಡೀತಿದೆ, ಅಲ್ಲಿಂದಲೇ ವ್ಯವಹಾರ ನಡೀತಿದೆ, ಇದಕ್ಕೆಲ್ಲಾ ಭ್ರಷ್ಟ ವ್ಯವಸ್ಥೆಯೇ ಕಾರಣ. ಭ್ರಷ್ಟ ವ್ಯವಸ್ಥೆ ಕಿತ್ತು ಹಾಕೋವರೆಗೆ ಇಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ  ಇವರಿಗೆ ದೇಶ ಧರ್ಮ ಅಂತದ್ದೇನಿಲ್ಲ ಎಂದರು. 


ಹಿಂದಿನ ಸರಕಾರವಿದ್ದಾಗ ಹರ್ಷನ ಕೊಲೆ ಪ್ರಕರಣದ ಆರೋಪಿಗಳು ಆನಂದವಾಗಿ ಹುಟ್ಟು ಹಬ್ಬದ ಕಾರ್ಯಕ್ರಮ ಮಾಡಿ ಕುಟುಂಬಸ್ಥರ ಜತೆ ಮಾತನಾಡ್ತಿದ್ರು. ಇದೇ ರೀತಿ ನಿರ್ಲಕ್ಷ್ಯ ನಡೆಸಿದ್ದರಿಂದ ಸ್ಫೋಟಗಳು, ಘೋಷಣೆಗಳು ಬರುತ್ತಿವೆ. ಅಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಬಾಯಿ ಮುಚ್ಚಿಕೊಂಡು ಇರಬೇಕು. ಹೇಳಿಕೆಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು, ರಾಜಕೀಯ ಬೇಳೆ ಬೇಯಿಸುವ ಪ್ರಕ್ರಿಯೆ ನಡೆಸಬಾರದು. ದೇಶದ್ರೋಹಿಗಳನ್ನು ಹಿಡಿದು ಶಿಕ್ಷೆ ಕೊಡುವ ಸಂದರ್ಭದಲ್ಲಿ ಪರಸ್ಪರ ಮಾತನಾಡೋದು ಸರಿಯಲ್ಲ ಎಂದರು.

'ರಾಮೇಶ್ವರ ಕೆಫೆಯಲ್ಲಿ ಈ ಹಿಂದೆ 2 ಅನಾಥ ಬ್ಯಾಗ್‌ ಸಿಕ್ಕಿತ್ತು..: ಕೆಫೆ ಒಡತಿ ದಿವ್ಯಾ ರಾವ್‌ ಹೇಳಿದ್ದೇನು?

ಇನ್ನು ಬಾಂಬ್ ಸ್ಫೋಟ ಸಿಲ್ಲಿ, ಪಾಕಿಸ್ತಾನ ಶತ್ರು ರಾಷ್ಟ್ರವಲ್ಲ, ಬ್ರದರ್ಸ್ ಅನ್ನೋ ಹೇಳಿಕೆ ಇವೆಲ್ಲ ಮುಸ್ಲಿಂ ತುಷ್ಟೀಕರಣ. ಮುಸ್ಲಿಮರಿಂದ ಗೆದ್ದಿದ್ದೇವೆ ಎಂಬ ಸೊಕ್ಕಿನಿಂದ ಕಾಂಗ್ರೆಸ್ ನಡೆದುಕೊಳ್ತಿದೆ ಅನ್ನೋದು ಸ್ಪಷ್ಟವಾಗಿ ಕಾಣ್ತಿದೆ. ದೇಶದ್ರೋಹಿ ಚಟುವಟಿಕೆ ಮಾಡಿದವರ ಪರವಾಗಿ ಮಾತನಾಡಿದ, ಮಾತನಾಡುವವರ ಮುಖಂಡರ ಮೇಲೆಯೇ ಎಫ್‌ಐಆರ್ ಹಾಕಬೇಕು. ಉತ್ತರಕನ್ನಡ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ರಾಮೇಶ್ವರಂ ಕೆಫೆ ಸ್ಫೋಟ ಬಿಜೆಪಿಯವರು ನಡೆಸಿದ್ರು ಅಂತಿದ್ದಾರೆ. ಹಾಗಾದರೆ ಕಾರಣರಾದವರ ಮೇಲೆ ಕೇಸ್ ಹಾಕಿ, ಒದ್ದು ಒಳಗಡೆ ಹಾಕಿ, ನಿಮ್ಮ ಕಡೆ ಅಧಿಕಾರವಿದೆ. ನೀವು ಕೇವಲ ಹೇಳಿಕೆ ನೀಡಿ ನಾಟಕ ಮಾಡಲು ಹೋಗಬೇಡಿ. ಗೊತ್ತಿದ್ರೆ ಅವರನ್ನು ಒದ್ದು ಒಳಗಡೆ ಹಾಕಿಸಿ, ಬೊಗಳೆ ಮಾತನಾಡೋದು ನಿಲ್ಲಿಸಿ. ಈ ರೀತಿ ಮಾಡಿಯೇ ನೀವು ಭಟ್ಕಳದಲ್ಲಿ ಮುಸ್ಲಿಂ ಭಯೋತ್ಪಾದಕರನ್ನು ಬೆಳೆಸ್ತಿದ್ದೀರಿ. ನಿಮ್ಮಿಂದಲೇ ಇಂದು ಭಟ್ಕಳ ಭಯೋತ್ಪಾದಕರ ಕೇಂದ್ರವಾಗಿದೆ. ಕಾಂಗ್ರೆಸಿನವರೇ ನೇಮಕ ಮಾಡಿದ ಜಗನ್ನಾಥ್ ಶೆಟ್ಟಿ ಆಯೋಗ ವರದಿಯನ್ನು ಇವತ್ತಿನವರೆಗೆ ನೀವು ಹೊರಗೆ ತಂದಿಲ್ಲ, ಅದ್ರ ಬಗ್ಗೆ ಮಾತನಾಡಿ. ಕೆಟ್ಟ ಬುದ್ಧಿ ಬಿಟ್ಟು ಶಾಂತಿ, ಸಮಾಧಾನವಾಗಿ ಪೊಲೀಸ್ ಇಲಾಖೆಗೆ ಅವಕಾಶ ಮಾಡಿಕೊಡಿ ಎಂದರು.

Follow Us:
Download App:
  • android
  • ios