ವಂದೇ ಭಾರತ್‌ ರೈಲಿಗೆ ಮತ್ತೆ ಕಲ್ಲೆಸೆತ! ಮೂರ್ನಾಲ್ಕು ಕಿಟಕಿಗಳ ಗಾಜು ಪೀಸ್‌ಪೀಸ್‌

ರಾಮನಗರ ಪಟ್ಟಣದ ಹೊರ ವಲಯದಲ್ಲಿ ವಂದೇ ಭಾರತ್‌ ರೈಲಿಗೆ ಮೂರನೇ ಬಾರಿ ಕಲ್ಲೆಸೆದ ಘಟನೆ ನಡೆದಿದ್ದು, ಮೂರ್ನಾಲ್ಕು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.

Ramanagara again Stone pelting at Vande Bharat train Three window glass piece sat

ರಾಮನಗರ (ಜು.28): ಇಡೀ ದೇಶದಲ್ಲಿ ವೇಗದ ಸಂಚಾರಕ್ಕೆ ಪ್ರಸಿದ್ಧಿಯಾಗಿರುವ ವಂದೇ ಭಾರತ್‌ ರೈಲಿಗೆ ಕಲ್ಲೆಸತದ ಪ್ರಕರಣ ಮತ್ತೆ ಮರುಕಳಿಸಿದೆ. ಈ ಬಾರಿ ರಾಮನಗರ ಪಟ್ಟಣದ ಹೊರ ವಲಯದಲ್ಲಿ ಮೂರ್ನಾಲ್ಕು ಕಿಡಿಗೇಡಿಗಳು ಸೇರಿಕೊಂಡು ಕಿಟಕಿ ಗಾಜುಗಳಿಗೆ ಕಲ್ಲೆಸೆದಿದ್ದಾರೆ.

ವಂದೇ ಭಾರತ್ ಮತ್ತೆ ಮತ್ತೆ ಕಲ್ಲೆಸೆತ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಈ ಹಿಂದೆ ಬೆಂಗಳೂರು, ಹಾಗೂ ರಾಮನಗರ ಜಿಲ್ಲೆಗಳಲ್ಲಿ ಎರಡು ಬಾರಿ ವಂದೇ ಭಾರತ್‌ ರೈಲಿಗೆ ಕಲ್ಲೆಸದ ಘಟನೆಗಳು ನಡೆದಿದ್ದರು. ಈ ಘಟನೆ ಮಾಸುತ್ತಿದೆ ಎನ್ನುವಾಗಲೇ ಈಗ ಮತ್ತೊಮ್ಮೆ ರಾಮನಗರ ಪಟ್ಟಣದ ಹೊರ ವಲಯದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹಾಗೂ ಲಾಲ್‌ಬಾಗ್‌ ಎಕ್ಸ್‌ಪ್ರೆಸ್‌ ಎರಡೂ ರೈಲುಗಳಿಗೆ ಕಲ್ಲೆಸೆದ ಘಟನೆ ನಡೆಸಿದೆ. ಇನ್ನು ಕಿಡಗೇಡಿಗಳು ಕಲ್ಲು ಎಸೆದಿದ್ದರಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೂರ್ನಾಲ್ಕು ಕಿಟಕಿ ಗಾಜುಗಳು ಪುಡಿ, ಪುಡಿ ಆಗಿವೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಮತ್ತದೇ ಎಡವಟ್ಟು, ಪ್ರಯಾಣಿಕರು ಸಿಡಿಮಿಡಿ

ಕಳೆದ 15ದಿನಗಳ ಹಿಂದೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲೆಸೆತ ನಡೆಸಲಾಗಿತ್ತು. ಇದಾದ ನಂತರ ಮೊನ್ನೆ ಲಾಲ್ ಬಾಗ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲೆಸೆದಿದ್ದರು. ಕಿಡಿಗೇಡಿಗಳು ಬೀಸಿದ ಕಲ್ಲು ರೈಲಿನ ಕಿಟಕಿ ಗಾಜು ಪುಡಿ ಪುಡಿಯಾಗಿ ಸೀಟಿನ ಮೇಲೆ ಬಿದ್ದಿದೆ. ರೈಲ್ವೆ ಪ್ರಯಾಣಿಕರು ಸ್ವಲ್ಪದರಲ್ಲೇ ಕಲ್ಲಿನಿಂದ ಅಪಾಯ ಆಗುವುದು ತಪ್ಪಿದೆ. ಕಲ್ಲು ಗಾಜಿನ ಮೇಲೆ ಬಿದ್ದಾಕ್ಷಣ ಅಲ್ಲಿಂದ ಎದ್ದಿದ್ದಾರೆ. ಇನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.  ಘಟನೆಯ ಬೆನ್ನಲ್ಲೇ ರೈಲ್ವೆ ಪೊಲೀಸರು ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. 

ರಾಜ್ಯದಲ್ಲಿ ವಂದೇ ಭಾರತ್‌ಗೆ 25 ಬಾರಿ ಕಲ್ಲೇಟು: ರಾಜ್ಯದಲ್ಲಿ ಈವರೆಗೆ ಚೆನ್ನೈ-ಮೈಸೂರು ಮತ್ತು ಬೆಂಗಳೂರು-ಧಾರವಾಡ ಸೇರಿ ಎರಡು ‘ವಂದೇ ಭಾರತ್‌’ ರೈಲು(Vande bharat train)ಗಳು 25 ಬಾರಿ ಕಲ್ಲೇಟು ತಿಂದಿವೆ. ಇತರೆ ರೈಲುಗಳು 190ಕ್ಕೂ ಹೆಚ್ಚು ಬಾರಿ ಕಲ್ಲೆಸೆತದ ಪರಿಣಾಮ ಎದುರಿಸಿವೆ. ದಕ್ಷಿಣ ರೈಲ್ವೆಯ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್‌’ (ಚೆನ್ನೈ-ಮೈಸೂರು )ಗೆ ಬೆಂಗಳೂರು ವಲಯ ವ್ಯಾಪ್ತಿಯಲ್ಲೇ 22 ಬಾರಿ ಕಲ್ಲೇಟು ಬಿದ್ದಿದ್ದು, 27 ಗಾಜುಗಳು ಒಡೆದಿವೆ. ಅದೃಷ್ಟವಶಾತ್‌ ಹೊರಗಿನ ಗಾಜು ಮಾತ್ರ ಒಡೆದ ಕಾರಣ ಪ್ರಯಾಣಿಕರಿಗೆ ಗಾಯವಾಗಿಲ್ಲ. ಕಳೆದ ಏಳು ತಿಂಗಳಲ್ಲಿ ಈವರೆಗೆ ನೈಋುತ್ಯ ರೈಲ್ವೆಯ ಸಾಮಾನ್ಯ ರೈಲುಗಳಿಗೆ 65ಕ್ಕೂ ಹೆಚ್ಚು ಸಲ ಕಲ್ಲೆಸೆಯಲಾಗಿದೆ. ಎರಡು ಬಾರಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿತ್ತು. ಕೇಂದ್ರ ರೈಲ್ವೆಯ ಸೊಲ್ಲಾಪುರ ವಿಭಾಗ ವ್ಯಾಪ್ತಿಯ ಕಲಬುರಗಿಯಲ್ಲಿ ಪ್ಯಾಸೆಂಜರ್‌ ರೈಲೊಂದಕ್ಕೆ ಕಲ್ಲೆಸೆತ ಪ್ರಕರಣದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಗಾಯಗೊಂಡಿದ್ದರು.

Vande bharat: ವರ್ಷದಲ್ಲಿ 200+ ರೈಲಿಗೆ ಕಲ್ಲೆಸೆತ, ವಂದೇ ಭಾರತ್‌ ರೈಲಿಗೆ 24 ಬಾರಿ ಕಲ್ಲಿನ ದಾಳಿ!

ವಂದೇ ಭಾರತ್‌ನ ಒಂದು ಕಿಟಕಿ ಗಾಜು ಒಡೆದರೆ ಅದರ ಬದಲಾವಣೆಗೆ ಸುಮಾರು .15-.18 ಸಾವಿರ ಖರ್ಚಾಗುತ್ತದೆ. ಬಾಣಸವಾಡಿಯ ಲೋಕೋಶೆಡ್‌ನಲ್ಲಿ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಹೆಚ್ಚು ಹಾನಿಯಾದರೆ ದುರಸ್ತಿಗಾಗಿ ರೈಲಿನ ಸಂಚಾರವನ್ನೇ ಸ್ಥಗಿತಗೊಳಿಸಬೇಕಾದ ಸ್ಥಿತಿ ಬರಬಹುದು ಎನ್ನುತ್ತಾರೆ ಅಧಿಕಾರಿಗಳು. ರೈಲು ಪ್ರಯಾಣಿಕರಿಗೆ ಕಂಟಕ ಎನಿಸಿರುವ ಕಲ್ಲೆಸೆತ ಪ್ರಕರಣಗಳು ರೈಲ್ವೆ ವಲಯಗಳಿಗೆ ತಲೆನೋವು ತಂದಿವೆ. ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 200ಕ್ಕೂ ಹೆಚ್ಚು ಇಂತಹ ಪ್ರಕರಣಗಳು ನಡೆದಿದ್ದು, 49 ದುಷ್ಕರ್ಮಿಗಳ ಬಂಧನವಾಗಿದೆ.

Latest Videos
Follow Us:
Download App:
  • android
  • ios