ಬೆಂಗ್ಳೂರಲ್ಲಿ ರಾಜಸ್ಥಾನ ಭವನಕ್ಕೆ ಜಾಗ ಕೊಡಿ: ಕರ್ನಾಟಕ ಸಿಎಂಗೆ ಗೆಹ್ಲೋಟ್‌ ಪತ್ರ

ದೇಶದ ಐಟಿ ಹಬ್‌ಆಗಿರುವ ಬೆಂಗಳೂರಿನಲ್ಲಿ ರಾಜಸ್ಥಾನ ಭವನ ನಿರ್ಮಾಣ ನಿರ್ಮಾಣ ಮಾಡಲು ಅವಕಾಶ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದಾಗಿ ಉಭಯ ರಾಜ್ಯಗಳ ಸಂಸ್ಕೃತಿ ಹಂಚಿಕೊಳ್ಳಲು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ ಗೆಹ್ಲೋಟ್‌

Rajasthan CM Letter to Karnataka CM Siddaramaiah for Give Land to Rajasthan Bhavan in Bengaluru grg

ಜೈಪುರ(ಜೂ.15):  ರಾಜಸ್ಥಾನ ಭವನ ನಿರ್ಮಾಣಕ್ಕೆ ಜಾಗ ಕೋರಿ ಕರ್ನಾಟಕ ಮುಖ್ಯಮಂತ್ರಿ ಸೇರಿದಂತೆ 3 ರಾಜ್ಯಗಳ ಮುಖ್ಯಮಂತ್ರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬುಧವಾರ ಪತ್ರ ಬರೆದಿದ್ದಾರೆ. ರಾಜ್ಯದ ರಾಜಧಾನಿಗಳಲ್ಲಿ 32300 ಚದರ ಅಡಿ ಜಾಗ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ದೇಶದ ಐಟಿ ಹಬ್‌ಆಗಿರುವ ಬೆಂಗಳೂರಿನಲ್ಲಿ ರಾಜಸ್ಥಾನ ಭವನ ನಿರ್ಮಾಣ ನಿರ್ಮಾಣ ಮಾಡಲು ಅವಕಾಶ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದಾಗಿ ಉಭಯ ರಾಜ್ಯಗಳ ಸಂಸ್ಕೃತಿ ಹಂಚಿಕೊಳ್ಳಲು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಗೆಹ್ಲೋಟ್‌ ಹೇಳಿದ್ದಾರೆ.

ರಾಜಸ್ಥಾನ ಸಿಎಂ ಹಾಗೂ ಪುತ್ರನಿಗೆ ಸಂಕಷ್ಟ: ಬಿಜೆಪಿ ಸಂಸದರಿಂದ ಇ.ಡಿ.ಗೆ ದೂರು

ಅದೇ ರೀತಿ ಕೋಲ್ಕತಾದಲ್ಲಿ ರಾಜಸ್ಥಾನ ಭವನ ನಿರ್ಮಾಣ ಮಾಡುವುದರಿಂದ ನಮ್ಮ ರಾಜ್ಯದ ಜನರಿಗೆ ತಮ್ಮದೇ ರಾಜ್ಯದಲ್ಲಿರುವ ಭಾವನೆ ಸಿಗಲಿದೆ. ಮುಂದಿನ ದಿನಗಳಲ್ಲಿ ಉಭಯ ರಾಜ್ಯಗಳ ನಡುವೆ ಸಾಂಸ್ಕೃತಿಕ ಸಂವಹನಕ್ಕೆ ಇದು ಸಹಕಾರಿಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಚೆನ್ನೈನಲ್ಲಿ ರಾಜಸ್ಥಾನ ಭವನ ನಿರ್ಮಾಣ ಮಾಡುವುದರಿಂದ ಉಭಯ ರಾಜ್ಯಗಳ ಸಂಸ್ಕೃತಿ ವಿನಿಮಯಕ್ಕೆ ಇದು ನೆರವಾಗಲಿದ್ದು, ರಾಜ್ಯ ಪ್ರವಾಸದಲ್ಲಿರುವ ರಾಜಸ್ಥಾನದ ಪ್ರವಾಸಿಗರಿಗೆ ರಾಜಸ್ಥಾನದ ಊಟ ಸಿಗುವುದರಿಂದ ಅವರಿಗೆ ಮನೆಯ ಅನುಭವವಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios