ಹವ್ಯಕರ ಜನಸಂಖ್ಯೆ ಹೆಚ್ಚಳಕ್ಕೆ ರಾಘವೇಶ್ವರ ಶ್ರೀ ಕರೆ: 3ನೇ ಮಗು ಹೆತ್ತ ತಾಯಿಗೆ ವೀರ ಮಾತೆ ಪ್ರಶಸ್ತಿ!
ಹವ್ಯಕ ಸಮುದಾಯದವರು ಜನಸಂಖ್ಯಾ ನಿಯಂತ್ರಣ ನಿಯಮವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗಿ ಕೇವಲ ಒಂದು ಮಗುವಿಗೆ ಸುಮ್ಮನಾಗುತ್ತಿದ್ದಾರೆ. ಮಕ್ಕಳನ್ನು ಭಾರ ಎಂದು ತಿಳಿದ ಪರಿಣಾಮ ಹವ್ಯಕ ಸಮುದಾಯದ ಸಂಖ್ಯೆ ಕುಸಿಯುತ್ತಿದೆ. ಇದು ಮುಂಬರುವ ಸಂಕಷ್ಟ ಮತ್ತು ಯುವಪೀಳಿಗೆಯ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ: ರಾಘವೇಶ್ವರಭಾರತೀ ಸ್ವಾಮೀಜಿ
ಬೆಂಗಳೂರು(ಡಿ.28): ಹವ್ಯಕ ಸಮುದಾಯದವರ ಜನಸಂಖ್ಯೆ ಕುಸಿಯುತ್ತಿರುವುದುದರಿಂದ ಮುಂದಿನ ತಲೆಮಾರಿನ ಬೆಳವಣಿಗೆಗೆ ಸಂಕಷ್ಟ ಎದುರಾಗುವಂತಾಗಿದೆ. ಹೀಗಾಗಿ, ಹವ್ಯಕರು ಮೂರನೇ ಮಗುವನ್ನು ಹೊಂದುವತ್ತ ಗಮನಹರಿಸಬೇಕು' ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.
'ಆ ಮೂರನೇ ಮಗುವಿನ ಪಾಲನೆಯ ಹೊಣೆಯನ್ನು ನಮ್ಮ ರಾಮಚಂದ್ರಾಪುರ ಮಠ ಹೊರಲಿದೆ ಮತ್ತು ಆ ಮಗುವಿಗೆ ನಾವೇ ತಂದೆ-ತಾಯಿಯಾಗಿ ಪೋಷಿಸುತ್ತೇವೆ. ಮೂರಕ್ಕಿಂತ ಹೆಚ್ಚು ಮಗುವಿಗೆ ಜನ್ಮ ನೀಡುವ ತಾಯಿಗೆ ವೀರಮಾತೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ' ಎಂದೂ ಅವರು ಘೋಷಿಸಿದ್ದಾರೆ.
ಹವ್ಯಕರು ಸೌಹಾರ್ದತೆಯ ಸಂಕೇತ: ಗಿರಿಧರ ಕಜೆ
ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ 'ತೃತೀಯ ವಿಶ್ವ ಹವ್ಯಕ ಸಮ್ಮೇಳನ'ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹವ್ಯಕ ಸಮುದಾಯದವರು ಜನಸಂಖ್ಯಾ ನಿಯಂತ್ರಣ ನಿಯಮವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗಿ ಕೇವಲ ಒಂದು ಮಗುವಿಗೆ ಸುಮ್ಮನಾಗುತ್ತಿದ್ದಾರೆ. ಮಕ್ಕಳನ್ನು ಭಾರ ಎಂದು ತಿಳಿದ ಪರಿಣಾಮ ಹವ್ಯಕ ಸಮುದಾಯದ ಸಂಖ್ಯೆ ಕುಸಿಯುತ್ತಿದೆ. ಇದು ಮುಂಬರುವ ಸಂಕಷ್ಟ ಮತ್ತು ಯುವಪೀಳಿಗೆಯ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಹವ್ಯಕರು ಅಪರೂಪದ ತಳಿ. ಇದನ್ನು ಉಳಿಸಬೇಕಿದೆ. ಹೀಗಾಗಿ ಪ್ರತಿ ದಂಪತಿಯೂ ಕನಿಷ್ಠ ಮಕ್ಕಳಿಗೆ ಜನ್ಮನೀಡಬೇಕು. ಒಂದು ವೇಳೆ ಮೂರನೇ ಮಗುವಿನ ಪಾಲನೆ ಸಾಧ್ಯವಾಗದಿದ್ದರೆ ಆ ಮಗುವಿನ ಪಾಲನೆಯನ್ನು ಶ್ರೀ ರಾಮಚಂದ್ರಾಪುರ ಮಠವೇ ಮಾಡಲಿದೆ. ಆ ಮಗುವಿಗೆ ತಂದೆ-ತಾಯಿಯಾಗಿ ಶೈಕ್ಷಣಿಕ ಸೇರಿ ಎಲ್ಲ ವಿಚಾರದಲ್ಲೂ ಪೋಷಣೆ ಮಾಡುತ್ತೇವೆ ಎಂದರು.
ಸಮಾವೇಶದ ಮೂಲಕ ನಾವು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡುವ ಬದಲು, ಹವ್ಯಕ ಸಮಾಜ ದವರ ಮುಂದೆಯೇ ಬೇಡಿಕೆಯನ್ನಿಡಬೇಕಿದೆ. ಹವ್ಯಕ ಸಮಾಜದ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು. ಎಲ್ಲರೂ ಒಟ್ಟಾಗಿ ಸಮಾಜವನ್ನು ಬೆಳೆಸಬೇಕು. ಹವ್ಯಕರು ಮಲಗಿದರೆ ಕುಂಭಕರ್ಣರ ರೀತಿ, ಎದ್ದರೆ ಹನು ಮಂತರ ರೀತಿ. ಹನುಮಂತ ಏನು ಬೇಕಾದರೂ ಸಾಧನೆ ಮಾಡುತ್ತಾನೆ. ಅದೇ ರೀತಿ ಹವ್ಯಕರು ಕುಂಭ ಕರ್ಣನ ನಿದ್ದೆಯಿಂದ ಎದ್ದು ಹನುಮಂತನ ರೀತಿ ಸಮಾಜದ ಬೆಳವಣಿಗೆಗೆ ಕೆಲಸ ಮಾಡಬೇಕು ಎಂದರು.
ದ.ಕೊರಿಯಾ ರೀತಿ ಕಣ್ಮರೆಯಾಗುತ್ತೇವೆ: ದಕ್ಷಿಣ ಕೊರಿಯಾದಲ್ಲಿ ಈಗ ಜನಸಂಖ್ಯೆ ಕುಸಿಯುತ್ತಿದೆ. ಜನ ಸಂಖ್ಯಾ ನಿಯಂತ್ರಣದ ನೆಪದಲ್ಲಿ ಮಕ್ಕಳನ್ನು ಹೊಂದದಂತೆ ದಕ್ಷಿಣ ಕೊರಿಯಾದಲ್ಲಿ ನಿಯಂತ್ರಣ ಹೇರ ಲಾಗಿತ್ತು. ಹೀಗಾಗಿ ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಅದೇ ಪರಿಸ್ಥಿತಿ ಹವ್ಯಕರಿಗೂ ಎದುರಾಗಿದೆ ಎಂದರು.
ಉತ್ತರ ಪ್ರದೇಶದಿಂದ ಉತ್ತರಕನ್ನಡಕ್ಕೆ ಬಂದ ಹವ್ಯಕ ಕನ್ಯೆಯರು!
ಯಾರೂ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೆ, ಗಂಭೀರ ಚಿಂತನೆ ನಡೆಸಬೇಕು. ಜನಸಂಖ್ಯಾ ನಿಯಂ ತ್ರಣ ನಿಯಮವನ್ನು ಯಾವ ಸಮುದಾಯದವರು ಅಳವಡಿಸಿಕೊಳ್ಳಬೇಕೋ ಅವರು ಅಳವಡಿಸಿಕೊಳ್ಳಲಿಲ್ಲ. ಅದನ್ನು ಹವ್ಯಕ ಸಮಾಜದವರು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಈಗ ಸಮಸ್ಯೆ ಎದುರಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ನಾನು ಬದಲು ನಾವು ಎನ್ನುವಂತಾಗಬೇಕು:
ನಾನು, ನನ್ನದು, ನನಗೆ, ನನ್ನಿಂದ ಎನ್ನುವ ಜಪ ಹೆಚ್ಚಾ ಗುತ್ತಿದೆ. ಕನಸಿನಲ್ಲೂ ನಾನು, ನನ್ನದು ಎಂದು ಹೇಳ ಲಾಗುತ್ತಿದೆ. ನಾನು ಎನ್ನುವುದು ಸತ್ತು ನಾವು ಎಂಬುದು ಬಾರದಿದ್ದರೆ ಯಾರೂ ಉದ್ಧಾರವಾಗುವು ದಿಲ್ಲ.ನಮ್ಮ ಪೂರ್ವಾಶ್ರಮದಲ್ಲಿ ನಮ್ಮ ಅಜ್ಜನೊಂದಿಗೆ 13 ಮೊಮ್ಮಕ್ಕಳು ಆಟವಾಡುತ್ತಿದ್ದೆವು. ಆಗೆಲ್ಲ ಕುಟುಂಬ ಜೀವನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೆವು. ಈಗ ಅದು ಕಡಿಮೆಯಾಗುತ್ತಿದೆ ಎಂದರು.