Asianet Suvarna News Asianet Suvarna News

ಸೋಂಕು ಹರಡುವಿಕೆಯನ್ನ ತಡೆಗಟ್ಟಲು ಕರ್ನಾಟಕದಲ್ಲಿ ಮತ್ತೊಂದು ನಿಯಮ ಜಾರಿ

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಕರ್ನಾಟಕ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಇದರ ಮಧ್ಯೆ ಆರೋಗ್ಯ ಇಲಾಖೆ ಮತ್ತೊಂದು ನಿಯಮ ಜಾರಿಗೆ ತಂದಿದೆ.

Quarantine of persons who have provided sample for COVID 19 testing Till report
Author
Bengaluru, First Published Jul 13, 2020, 4:13 PM IST

ಬೆಂಗಳೂರು, (ಜು.13) : ಕೊರೋನಾ ವೈರಸ್ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿರುವ ಜನರಿಗೆ ವರದಿ ಬರುವವರೆಗೂ ಐಸೋಲೇಷನ್‌/ಕ್ವಾರಂಟೈನ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಸೋವಾರ ಈ ಕುರಿತು ಆದೇಶ ಹೊರಡಿಸಿದ್ದು. ಕೊರೋನಾ ವೈರಸ್ ಸೋಂಕಿನ ಪರೀಕ್ಷೆಗೆ ಮಾದರಿ ಕೊಟ್ಟಿದ್ದಲ್ಲಿ ಫಲಿತಾಂಶ ಬರುವವರೆಗೂ ಆ ವ್ಯಕ್ತಿ ಐಸೋಲೇಷನ್‌ನಲ್ಲಿರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದೆ.

ಈ ಬಾರಿ ಲಾಕ್‌ಡೌನ್ ಫುಲ್‌ ಸ್ಟ್ರಿಕ್ಟ್‌; ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕೇಸ್..!

ಸ್ವಾಬ್ ಮಾದರಿ ಕೊಟ್ಟಿರುವ ವ್ಯಕ್ತಿ ವರದಿ ಬರುವುದಕ್ಕೂ ಮೊದಲು ಸಾರ್ವಜನಿಕ ಸ್ಥಳದಲ್ಲಿ ಸಂಚಾರ ನಡೆಸುವುದು, ಕಚೇರಿಗೆ ಹೋಗುವುದು, ಅನಗತ್ಯವಾಗಿ ತಿರುಗಾಡುವುದನ್ನು ಮಾಡುವಂತಿಲ್ಲ.

ಮಾದರಿ ಕೊಟ್ಟು ಫಲಿತಾಂಶ ಬರುವುದಕ್ಕೂ ಮೊದಲು ವ್ಯಕ್ತಿ ಐಸೋಲೇಷನ್ ನಿಮಯಗಳನ್ನು ಮೀರಿ ಸಂಚಾರ ನಡೆಸಿದರೆ ಸಾಂಕ್ರಾಮಿಕ ರೋಗಗಳ ಕಾಯಿದೆ 1897ರ ಅನ್ವಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನಯ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
 
 ಶಂಕಿತರು ಕೊರೋನಾ ಪರೀಕ್ಷೆಗೆ ಮಾಡಿಸಿಕೊಂಡು ಬಳಿಕ ಎಲ್ಲೊಂದರಲ್ಲಿ ಸುತ್ತಾಡುತ್ತಿದ್ದಾರೆ. ಅದರಲ್ಲೂ ವರದಿಗಳು ತಡವಾಗಿ ಬರುತ್ತಿರುತ್ತಿರುವುದರಿಂದ ವ್ಯಕ್ತಯ ಸೋಂಕು ಹರಡುತ್ತಿದೆ. ಇದರಿಂದ ಈ ಆದೇಶವನ್ನು ಜಾರಿಗೆ ತರಲಾಗಿದೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios