Asianet Suvarna News Asianet Suvarna News

ಪುನೀತ್‌ಗೆ ನಮನ ಸಲ್ಲಿಸಿದ ಬಳಿಕ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡ ರೇಣುಕಾಚಾರ್ಯ

* ಪುನೀತ್ ರಾಜ್ ಕುಮಾರ್ ಸಮಾಧಿಗೆ ರೇಣುಕಾಚಾರ್ಯ ನಮನ
* ಬಳಿಕ ನೇತ್ರದಾನ ಮಾಡುವುದಾಗಿ ಘೋಷಿಸಿದ ರೇಣುಕಾರ್ಚ
* ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ 

puneet rajkumar inspire mp renukacharya family decided to donate eyes rbj
Author
Bengaluru, First Published Nov 7, 2021, 10:45 PM IST

ಬೆಂಗಳೂರು, (ನ.07): ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಕುಟುಂಬ ಸಮೇತರಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಅಪ್ಪುರಂತೆ ರೇಣುಕಾಚಾರ್ಯ ಅವರು ನೇತ್ರಾದಾನಕ್ಕೆ (Eye Donate) ಮುಂದಾಗಿದ್ದಾರೆ.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್ ಕುಮಾರ್ ಅವರಿಂದ ಪಡೆದ ಪ್ರೇರಣೆಯಿಂದ ತಮ್ಮ ಕುಟುಂಬದ ಸದಸ್ಯರೆಲ್ಲರ ನೇತ್ರವನ್ನು ಮರಣಾನಂತರ ದಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ನೇತ್ರದಾನಕ್ಕೆ ಅಪ್ಪು ಸ್ಪೂರ್ತಿ: ಕಣ್ಣುದಾನಕ್ಕೆ ಸಾಲುಗಟ್ಟಿ ನಿಂತ ಜನ..!

ಪುನೀತ್ ಅವರ ಅಭಿನಯ, ನೃತ್ಯ, ಗಾಯನ ಎಲ್ಲವೂ ತಮಗೆ ಇಷ್ಟ, ಎಲ್ಲಕ್ಕಿಂತ ಹೆಚ್ಚಾಗಿ ಅವರ ನೇತ್ರದಾನ ಮತ್ತಿತರ ಸಮಾಜಮುಖಿ ಕಾರ್ಯಗಳಿಂದ ಪ್ರೇರಿತರಾಗಿದ್ದು, ನಾನು ಸಹ ಮರಣಾನಂತರ ನೇತ್ರದಾನ ಮಾಡಿ ಅಂಧರ ಬಾಳು ಬೆಳಗಿಸುವ ದೃಢ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

ಪುನೀತ್ ರಾಜ್‌ಕುಮಾರ್ ನಿಧನದ ನಂತರ ಅವರ ಕಣ್ಣುಗಳನ್ನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದು, ಇದರಿಂದ ನಾಲ್ವರು ಬೆಳುಕಂಡಿದ್ದಾರೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪುನೀತ್ ನೇತ್ರಗಳಿಂದ ನಾಲ್ವರಿಗೆ ದೃಷ್ಟಿ ಒದಗಿಸಲಾಗಿತ್ತು. ಇದು ಅಭಿಮಾನಿಗಳಿಗೆ ಹಾಗೂ ಜನರಿಗೆ ಬಹುದೊಡ್ಡ ಮಟ್ಟದಲ್ಲಿ ಪ್ರೇರಣೆ ನೀಡಿದ್ದು, ಸ್ವಯಂಪ್ರೇರಿತವಾಗಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ.

ರಾಜ್ಯದಲ್ಲಿ ಪುನೀತ್ ರಾಜಕುಮಾರ್ ಹಾಗೂ ಸಂಚಾರಿ ವಿಜಯ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ

ದಾವಣಗೆರೆ: ನೇತ್ರದಾನಕ್ಕೆ ವಾಗ್ದಾನ ಮಾಡಿದ ಪುನೀತ್ ಅಭಿಮಾನಿಗಳು
ದಾವಣಗೆರೆ: ನಟ ಪುನೀತ್ ರಾಜ್‍ಕುಮಾರ್​​ಗೆ ವಿಶಿಷ್ಟ ರೀತಿಯ ಗೌರವ ಅರ್ಪಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿ ತಾಂಡದಲ್ಲಿ‌ ನಾಳೆ ಪುನೀತ್ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಅಭಿಮಾನಿಗಳಿಂದ ನೇತ್ರದಾನಕ್ಕೆ ವಾಗ್ದಾನ ಮಾಡಲಾಗುತ್ತದೆ. ಚಟ್ಟೋಬನಹಳ್ಳಿ‌ ತಾಂಡಾದ ಸೇವಾಲಾಲ್ ಸಂಘದಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ 30 ಜನ ಪುನೀತ್ ಅಭಿಮಾನಿಗಳು ನೇತ್ರದಾನಕ್ಕೆ ವಾಗ್ದಾನ ಮಾಡಲಿದ್ದಾರೆ.
 

Follow Us:
Download App:
  • android
  • ios