ಓಲಾ, ಉಬರ್ ಆಟೋ ಬಿಕ್ಕಟ್ಟು: ಇಂದು ಆರ್‌ಟಿಒ ಅಧಿಕಾರಿಗಳಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
ಓಲಾ, ಊಬರ್ ಆಟೋ ರಿಕ್ಷಾ ದರ ನಿಗದಿ ವಿಚಾರವಾಗಿ ಇಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಕಮಿಷನರ್ ನೇತೃತ್ವದಲ್ಲಿ ಆರ್.ಟಿ.ಒ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಇಂದೇ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸಲಿದ್ದಾರೆ.
ಬೆಂಗಳೂರು (ನ.15): ಓಲಾ, ಊಬರ್ ಆಟೋ ರಿಕ್ಷಾ ದರ ನಿಗದಿ ವಿಚಾರವಾಗಿ ಇಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಕಮಿಷನರ್ ನೇತೃತ್ವದಲ್ಲಿ ಆರ್.ಟಿ.ಒ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಇಂದೇ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ನಿನ್ನೆ (ಸೋಮವಾರ), ಚಾಲಕರ ಸಂಘ, ಆಟೋ ಯೂನಿಯನ್ ಮುಖಂಡರ ಜೊತೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಓಲಾ, ಊಬರ್ ಆ್ಯಪ್ ಕಂಪನಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ದರ ನಿಗದಿ ಮಾಡಲು ಚಾಲಕರ ಸಂಘ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಸಭೆಯಲ್ಲಿ ದರ ನಿಗದಿ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಇಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಆರ್.ಟಿ.ಒ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಕೆ ಮಾಡಲಿದ್ದಾರೆ.
100 ಕನಿಷ್ಠ ದರಕ್ಕೆ ಆ್ಯಪ್ ಆಟೋ ಬೇಡಿಕೆ: ಆ್ಯಪ್ ಆಧಾರಿತ ಆಟೋ ರಿಕ್ಷಾಗಳ ದರ ನಿಗದಿಗೆ ಸಂಬಂಧಿಸಿದಂತೆ ಶನಿವಾರ ಓಲಾ, ಉಬರ್ ಹಾಗೂ ರಾರಯಪಿಡೋ ಕಂಪನಿಗಳ ಜತೆ ರಾಜ್ಯ ಸರ್ಕಾರ ಸಭೆ ನಡೆಸಿದೆ. ದರ ಹೆಚ್ಚಳ ಕುರಿತಂತೆ ಕಂಪನಿಗಳ ವಿವಿಧ ಬೇಡಿಕೆಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ವಿಶ್ಲೇಷಣೆ ಮಾಡಿ ಅಂತಿಮ ದರ ಪಟ್ಟಿಯನ್ನು ನ.7ರಂದು ಹೈಕೋರ್ಟ್‌ಗೆ ಸಲ್ಲಿಸಲು ತೀರ್ಮಾನಿಸಿದೆ. ಸಭೆಯಲ್ಲಿ ಆ್ಯಪ್ ಆಧಾರಿತ ಕಂಪನಿಯೊಂದು 2 ಕಿ.ಮೀ. ಕನಿಷ್ಠ ದೂರಕ್ಕೆ .100 ಶುಲ್ಕ ನಿಗದಿ ಮಾಡಬೇಕು. ಆನಂತರ ಪ್ರತಿ ಕಿ.ಮೀ .15 ಇದ್ದು, ಶೇ.30ರಷ್ಟುದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದೆ. ಜತೆಗೆ ಹೆಚ್ಚುವರಿ, ಕಾಯುವಿಕೆ, ಬುಕಿಂಗ್ ರದ್ದು ಶುಲ್ಕ ವಿಧಿಸಲು ಕಂಪನಿಗಳು ಮನವಿ ಮಾಡಿವೆ ಎನ್ನಲಾಗಿದೆ.
ಆ್ಯಪ್ ಆಟೋ ದರ ನಿಗದಿಗೆ 4 ವಾರ ಅವಕಾಶ; ಹೈಕೋರ್ಟ್ ಸಮ್ಮತಿ
ಆ್ಯಪ್ ಆಧರಿತ ಆಟೋಗಳ ಅನಧಿಕೃತ ಸೇವೆ, ಹೆಚ್ಚು ದರ ವಸೂಲಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್ ಹೈಕೋರ್ಟ್ ಮೊರೆ ಹೋಗಿದ್ದವು. ‘ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಆ್ಯಪ್‌ಗಳ ಆಟೋ ರಿಕ್ಷಾ ಸೇವೆಗೆ ಅನುಮತಿ ನೀಡುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ಬಹುಮಹಡಿ ಕಟ್ಟಡದ ಸಾರಿಗೆ ಇಲಾಖೆ ಕಚೇರಿಯಲ್ಲಿ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಎಲ್ಲಾ ಆ್ಯಪ್ ಆಧಾರಿತ ಟ್ಯಾಕ್ಸಿ (ಅಗ್ರಿಗೇಟರ್ಸ್) ಕಂಪನಿಗಳು, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಆಟೋರಿಕ್ಷಾ ಯೂನಿಯನ್‌ಗಳು, ಆಟೋರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆಗಳು ಭಾಗಿಯಾಗಿದ್ದವು.
ಓಲಾ, ಉಬರ್‌ಗೆ ಲಗಾಮು ಹಾಕಿದ ಸಾರಿಗೆ ಇಲಾಖೆ ಆಯುಕ್ತ ಎತ್ತಂಗಡಿ!
ಮೀಟರ್ ದರದಲ್ಲಿ ಸೇವೆ ಕಷ್ಟ: ಸದ್ಯ ರಾಜ್ಯ ಸರ್ಕಾರ ಆಟೋರಿಕ್ಷಾಗಳಿಗೆ ನಿಗದಿಪಡಿಸಿರುವ ಕನಿಷ್ಠ ದರ .30, ಅನಂತರ ಪ್ರತಿ ಕಿ.ಮೀ. .15 ಮೊತ್ತಕ್ಕೆ ಸೇವೆ ನೀಡಲು ಕಷ್ಟವಾಗುತ್ತದೆ. ಆ್ಯಪ್‌ಗಳ ನಿರ್ವಹಣೆ ಸೇರಿದಂತೆ ಇತರೆ ವೆಚ್ಚ ತಗಲುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುತ್ತೇವೆ, ಚಾಲಕರ ಕಾಯುವ ಅವಧಿ ಇರುತ್ತದೆ. ಕೇಂದ್ರ ಸರ್ಕಾರದ ನಿಯಮಗಳಲ್ಲಿ ದರ ಹೆಚ್ಚಳಕ್ಕೆ ಅವಕಾಶಗಳಿವೆ. ಬೇಡಿಕೆ ಹೆಚ್ಚು (ಪೀಕ್ ಅವರ್) ಇದ್ದಾಗ ಹೆಚ್ಚುವರಿ ಶುಲ್ಕ (ಸಜ್‌ರ್‍ಚಾಜ್‌ರ್) ವಿಧಿಸಲು ಅವಕಾಶ ನೀಡಬೇಕು. ಕಾಯುವ ಶುಲ್ಕಕ್ಕೆ ಅನುಮತಿ ನೀಡಬೇಕು. ಗ್ರಾಹಕ ಬುಕಿಂಗ್ ರದ್ದುಗೊಳಿಸಿದಾಗ ದಂಡ ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಕಂಪನಿಗಳು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಿದವು.