Asianet Suvarna News Asianet Suvarna News

ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಪಾಟೀಲ್‌ನಿಂದ ಮತ್ತೊಂದು ವಿಡಿಯೋ, ಭಾರೀ ವೈರಲ್‌..!

ಪ್ರಕರಣವನ್ನ ಮುಚ್ಚಿ ಹಾಕಲು ಸಿಐಡಿ ತನಿಖಾಧಿಕಾರಿ ಶಂಕರ್ ಗೌಡ ಪಾಟೀಲ್ ಹಣದ ಬೇಡಿಕೆ ಇಟ್ಟಿದ್ದರು ಅಂತ ಗಂಭೀರವಾಗಿ ಆರೋಪಿಸಿದ ಆರ್.ಡಿ. ಪಾಟೀಲ್‌. 

PSI Recruitment Scam Accused RD Patil Released Another Video grg
Author
First Published Jan 24, 2023, 9:02 AM IST

ಕಲಬುರಗಿ(ಜ.24):  ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಶರಣಾದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ನಿಂದ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಪ್ರಕರಣವನ್ನ ಮುಚ್ಚಿ ಹಾಕಲು ಸಿಐಡಿ ತನಿಖಾಧಿಕಾರಿ ಶಂಕರ್ ಗೌಡ ಪಾಟೀಲ್ ಹಣದ ಬೇಡಿಕೆ ಇಟ್ಟಿದ್ದರು ಅಂತ ಆರ್.ಡಿ. ಪಾಟೀಲ್‌ ಗಂಭೀರವಾಗಿ ಆರೋಪಿಸಿದ್ದಾರೆ. 

ಶಂಕರ್ ಗೌಡ ಪಾಟೀಲ್ ಮೂರು ಕೋಟಿ ಹಣ ಬೇಡಿಕೆ ಇಟ್ಟಿದ್ದರು ಈಗಾಗಲೇ 76 ಲಕ್ಷ ಕೊಟ್ಟಿದ್ದೇನೆ. ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಆರ್.ಡಿ. ಪಾಟೀಲ್‌ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಸಾಕ್ಷಿ ಸಮೇತ ಲೋಕಾಯುಕ್ತ, ಸಿಐಡಿ ವಿಭಾಗದ ಎಡಿಜಿಪಿ, ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಮತ್ತು ಗೃಹ ಸಚಿವರಿಗೆ ರಜಿಸ್ಟರ್ ಪೋಸ್ಟ್ ಮೂಲಕ ದೂರು ಕೊಟ್ಟಿದ್ದೇನೆ ಅಂತ ಹೇಳಿಕೊಂಡಿದ್ದಾನೆ. 

PSI Recruitment Scam: ನಾಪತ್ತೆಯಾದ ಆರ್‌.ಡಿ.ಪಾಟೀಲ್‌ಗೆ ಇಂದು ವಿಚಾರಣೆಗೆ ಸಿಐಡಿ ಬುಲಾವ್‌

ಸಿಐಡಿ ತನಿಖಾಧಿಕಾರಿ ಶಂಕರ್ ಗೌಡ ಪಾಟೀಲ್ ಕೇವಲ ನನ್ನಿಂದ ಮಾತ್ರವಲ್ಲ ಪ್ರಕರಣದ ಎಲ್ಲಾ ಆರೋಪಿಗಳಿಂದ ಹಣ ಪಡೆದಿದ್ದಾರೆ. ತನಿಖೆಗೆ ಒಬ್ಬರೆ ಅಧಿಕಾರಿ ಬಂದಿದ್ದೇಕೆ ಎಂದು ಪ್ರಶ್ನೆ ಮಾಡಿದ ಆರ್‌.ಡಿ. ಪಾಟೀಲ್‌ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗುವುದು ಅಂದರೆ ಏನು ಕಥೆ..?. ಪಿಎಸ್ಐ ಪ್ರಕರಣ ಮಾತ್ರವಲ್ಲ ಬೇರೆ ಬೇರೆ ಪ್ರಕರಣಗಳು ನಿನ್ನ ಮೇಲೆ ಇವೆ ಎಂದಿದ್ದಾರೆ. ಸುಮ್ಮನೆ ಯಾಕೆ ತಿರುಗಾಡುವೆ ನಮ್ಮೊಂದಿಗೆ ರಾಜಿಯಾಗು ಎಂದಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಮಲ್ಲಿಕಾರ್ಜುನ ಅವರಿಂದ ನನ್ನ ಅಳಿಯ ಹಣ ತಂದುಕೊಟ್ಟಿದ್ದಾನೆ. ನನ್ನ ಅಳಿಯ ಶ್ರೀಕಾಂತ್ ಮೂಲಕ ಸಿಐಡಿ ಡಿವೈಎಸ್ಪಿ ಶಂಕರಗೌಡ ಅವರಿಗೆ 76 ಲಕ್ಷ ಹಣ ತಂದುಕೊಟ್ಟಿದ್ದಾನೆ ಅಂತ ಸಿಐಡಿ ಅಧಿಕಾರಿಗಳ ವಿರುದ್ಧ ಪಿಎಸ್ಐ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಗಂಭೀರವಾಗಿ ಆರೋಪ ಮಾಡಿದ್ದಾನೆ. 

ಅಜ್ಞಾತ ಸ್ಥಳದಿಂದ ವಿಡಿಯೋ‌ ಮಾಡಿದ ಬಳಿಕ ಆರ್.ಡಿ ಪಾಟೀಲ್ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ತನಿಖಾಧಿಕಾರಿಗಳೇ ಹಣದ ಬೇಡಿಕೆ ಇಟ್ಟಿರುವ ವಿಡಿಯೋ ಈಗ ಭಾರೀ ವೈರಲ್ ಆಗಿದೆ. 

Follow Us:
Download App:
  • android
  • ios