ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ…ಗೆ ಬೆಂಗಳೂರಿನ ಸಿಐಡಿ ಫೈನಾನ್ಸಿಯಲ… ಇಂಟೆಲಿಜೆನ್ಸ್‌ ಘಟಕದ ಪೊಲೀಸ್‌ ಉಪಾಧೀಕ್ಷಕ ಪ್ರಕಾಶ್‌ ರಾಠೋಡ್‌ ನೋಟಿಸ್‌ ನೀಡಿದ್ದಾರೆ.

ಕಲಬುರಗಿ (ಜ.23) : ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ…ಗೆ ಬೆಂಗಳೂರಿನ ಸಿಐಡಿ ಫೈನಾನ್ಸಿಯಲ… ಇಂಟೆಲಿಜೆನ್ಸ್‌ ಘಟಕದ ಪೊಲೀಸ್‌ ಉಪಾಧೀಕ್ಷಕ ಪ್ರಕಾಶ್‌ ರಾಠೋಡ್‌ ನೋಟಿಸ್‌ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರದಿಂದ ಹರಿದಾಡುತ್ತಿರುವ ಪಾಟೀಲ್‌ ವಿಡಿಯೋದಲ್ಲಿ ಆತ ನೀಡಿರುವ ಸಂದೇಶ ಕೂಲಂಕಷವಾಗಿ ಪರಿಶೀಲಿಸಿ ಈ ನೋಟಿಸ್‌ ನೀಡಲಾಗಿದೆ. ಎಲ್ಲೂ ಹೋಗಿಲ್ಲ, ಇಲ್ಲೇ ಇರುವೆ. ನೆಲದ ಕಾನೂನು ಗೌರವಿಸುವೆ ಎಂದು ವಿಡಿಯೋದಲ್ಲಿ ಹೇಳಿದವರು ನೀವು ಕಾನೂನು ಪ್ರಕಾರ 4 ನೋಟಿಸ್‌ ನೀಡಿ ವಿಚಾರಣೆಗೆ ಕರೆದರೂ ಬರುತ್ತಿಲ್ಲ ಯಾಕೆ ಎಂದು ಪ್ರಶ್ನಿಸಲಾಗಿದೆ.

ಪಿಎಸ್ಐ ನೇಮಕಾತಿ ಹಗರಣ: ಕಿಂಗ್ ಪಿನ್ ಆರ್‌‌.ಡಿ ಪಾಟೀಲ್‌ಗೆ ಅರೆಸ್ಟ್‌ ವಾರೆಂಟ್

ನಿಮ್ಮ ಮನೆಗೆ ಹೋಗಿ ಜ.21ರಂದು ಇಡೀ ದಿನಕ್ಕಾದರೂ ನಿಮ್ಮ ಪತ್ತೆ ಇಲ್ಲ. ನಿಮ್ಮ ಮನೆಗೆ ಹೋಗಿ ನೋಡಿದಾಗ ಮನೆಗೆ ಬೀಗ ಇತ್ತು. ಸಂಜೆವರೆಗೂ ಕಾದರೂ ನೀವು ಬಂದಿಲ್ಲ. ಈ ಹಿನ್ನೆಲೆಯಲ್ಲಿ 23ರಂದು ಬೆಳೆಗ್ಗೆ 11ಗಂಟೆಗೆ ಕಲಬುರಗಿ ನಗರದಲ್ಲಿರುವ ಐವಾನ್‌ ಎ ಶಾಹಿ ಗೆಸ್ವ್‌ ಹೌಸ್‌ನಲ್ಲಿರುವ ಕ್ಯಾಂಪ್‌ ಆಫೀಸ್‌ಗೆ ವಿಚಾರಣೆಗೆ ಹಾಜರಾಗುವಂತೆ ಆರ್‌.ಡಿ.ಪಾಟೀಲ್‌ಗೆ ಡಿವೈಎಸ್‌ಪಿ ಪ್ರಕಾಶ್‌ ರಾಠೋಡ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಎಸ್ಕೇಪ್‌ ಆಗಿದ್ದ ಪಿಎಸ್‌ಐ ಹಗರಣ ಕಿಂಗ್‌ಪಿನ್‌ ಪಾಟೀಲ್‌ ವಿಡಿಯೋ ಮೂಲಕ ಪ್ರತ್ಯಕ್ಷ

ಕಲಬುರಗಿ ನಗರದ ಚೌಕ್‌ ಠಾಣೆಯಲ್ಲಿ ಪಿಎಸ್‌ಐ ಹಗರಣ ಸಂಬಂಧ 2002ರ ಏಪ್ರಿಲ್‌ನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರ್‌.ಡಿ.ಪಾಟೀಲ… ಆರೋಪಿ. ಪ್ರಕರಣದಲ್ಲಿ ಎಂಟು ತಿಂಗಳು ಜೈಲು ವಾಸ ಎದುರಿಸಿದ್ದ ಪಾಟೀಲ್‌ಗೆ ಕಲಬುರಗಿ ಹೈಕೋರ್ಚ್‌ ಡಿ.22ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆ ಬಳಿಕ ಚೌಕ್‌ ಠಾಣೆ ಪ್ರಕರಣದಲ್ಲಿ ಆರ್‌.ಡಿ. ಪಾಟೀಲ…ಗೆ ವಿಚಾರಣೆಗೆ ಬುಲಾವ್‌ ನೀಡಿ ಸಿಐಡಿ ನೋಟಿಸ್‌ ನೀಡಿತ್ತು. ಕಳೆದ ವರ್ಷ 26ರವರೆಗೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಆರ್‌.ಡಿ.ಪಾಟೀಲ್‌ ವಿಚಾರಣೆಗೆ ಹಾಜರಾಗಿರಲಿಲ್ಲ.