ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಚಿತ; ಮೂವರನ್ನು ಬಂಧಿಸಿದ ಪೊಲೀಸರು!

ರಾಜ್ಯಸಭಾ ಚುನಾವಣೆ ವಿಜಯೋತ್ಸವದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಬಗ್ಗೆ ಎಫ್‌ಎಸ್‌ಎಲ್ ವರದಿ ಆಧರಿಸಿ ಬೆಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Pro Pakistan Slogan confirmed in FSL report and Bengaluru police arrested 3 Accused sat

ಬೆಂಗಳೂರು (ಮಾ.04): ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ಸರ್ಕಾರದಿಂದ ವಿಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಆಧರಿಸಿ ಪೊಲೀಸರಿಂದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಗಲಿಗರು ವಿಜಯೋತ್ಸವದ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಕೆಲವು ನಾಯಕರು ಮಾಧ್ಯಮಗಳ ವರದಿಯನ್ನೇ ಸುಳ್ಳೆಂದು ಜರಿದಿದ್ದರು. ಈ ಹಿನ್ನೆಲೆಯಲ್ಲಿ ಘೋಷಣೆ ಕೂಗಿದ್ದ ವಿಡಿಯೋವನ್ನು ಎಪ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿತ್ತು. ಆದರೆ, ಈಗ ಎಪ್‌ಎಸ್ಎಲ್ ವರದಿಯನ್ನು ಆಧರಿಸಿ ವಿಧಾನಸೌಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾಕಿಸ್ತಾನ್ ಹಾಗೂ ನಾಸಿರ್‌ಸಾಬ್ ಜಿಂದಾಬಾದ್ ಕೂಗಿದವನು ಒಬ್ಬನೇ ವ್ಯಕ್ತಿ: ಎಫ್‌ಎಸ್‌ಎಲ್ ತಜ್ಞ ಫಣೀಂದ್ರ ಮಾಹಿತಿ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಗ್ಗೆ ಸ್ವಯಂ ಪ್ರೇರಿತವಾಗಿ ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ಈಗ ದೆಹಲಿ ಮೂಲದ ಇಲ್ತಾಜ್, ಆರ್‌.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಈ ಮೂವರು ಆರೋಪಿಗಳನ್ನು ಅಶೋಕ್ ಪುರಂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಪೊಲೀಸರು: ನಂತರ ಬಂಧಿಸಲಾದ ಎಲ್ಲ ಆರೋಪಿಗಳನ್ನು ಕೂಡ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂದರೆ, ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಸತ್ಯ ಎಂದು ತಿಳಿದುಬರುತ್ತಿದೆ. ಎಲ್ಲ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲಾಗುತ್ತದೆ. ನಂತರ, ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು. ಆದರೆ, ನ್ಯಾಯಾಲಯದ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮನೆಗೆ ತೆರಳಿ ಆರೋಪಿಗಳನ್ನು ಹಾಜರುಪಡಿಸುವ ಸಾಧ್ಯತೆಯಿದೆ.

ಸರ್ಕಾರಕ್ಕೂ ಮೊದಲೇ ಬಿಜೆಪಿಯ ಎಫ್‌ಎಸ್‌ಎಲ್ ವರದಿ ಬಹಿರಂಗ:
ವಿಧಾನಸೌಧದಲ್ಲಿ ಪಾಕಿಸ್ತಾನ ಪೊರ ಘೋಷಣೆ ಕೂಗಿದ ಬಗ್ಗೆ ಬಿಜೆಪಿ ಕೂಡ ಖಾಸಗಿಯಾಗಿ ಎಫ್‌ಎಸ್‌ಎಲ್ ವರದಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಪಡೆದಿದ್ದ ಬಿಜೆಪಿ ನಾಯಕರು ಎಪ್ಎಸ್ಎಲ್ ವರದಿ ಬಿಡುಗಡೆಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಎಫ್‌ಎಸ್‌ಎಲ್ ವರದಿ ಬಗ್ಗೆ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಎಫ್‌ಎಸ್ಎಲ್ ತಜ್ಞರಾದ ಫಣೀಂದ್ರ ಅವರು, ರಿಪೋರ್ಟ್ ನಲ್ಲಿ ಫೈಂಡಿಂಗ್ ಪ್ರಕಾರ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದರು.

ಅವ್ನಲ್ಲಾ.. ಅವ್ನಲ್ಲಾ.. ಇಲ್ಲಿದ್ದಾನೆ ನೋಡಿ, ಪಾಕ್ ಪರ ಘೋಷಣೆ ಕೂಗಿದ ಆರೋಪಿ; ಬಿಜೆಪಿ ಆರೋಪ

ಮುಂದುವರೆದು, ಅನೆಕ್ಷರ್ ಹಾಗೂ ಪೆನ್ಡ್ರೈವ್ ಕವರಿಂಗ್ ಲೆಟರ್ ಇದೆ. ಇದರಲ್ಲಿ ಕೇವಲ ರಿಪೋರ್ಟ್ ಮಾತ್ರ ರಿಲೀಸ್ ಆಗಿದೆ. ಒಟ್ಟು 9 ಸೆಂಕೆಡ್ ಇದೆ. ಅದರಲ್ಲಿ 7 ಸೆಂಕೆಂಡ್ ಕಂಟೆಂಟ್ ಇದೆ. ಅದರಲ್ಲಿ 7 ಸೆಂಕೆಂಡ್‌ನಲ್ಲಿ ಪಾಕಿಸ್ತಾನ್ ಅಂತ ಕೂಗಿರುವುದು ಇದೆ. ಇನ್ನು ಎಕ್ಸಾಮಿನೇಷನ್ ಮಾಡುವಾಗ ಎಷ್ಟು ಧ್ವನಿಯನ್ನ ಎಳೆಯಲಾಗಿದೆ ಎಂದು ಅದರಲ್ಲಿ ತಿಳಿದು ಬರತ್ತದೆ. ಕೆಲವು ಅಕ್ಷರಗಳಿಗೆ ಇಂಥದ್ದೇ ಫ್ರೀಕ್ವೆವ್ಸಿ ಇರಬೇಕು ಅಂತ ಇದೆ.  ಅದರಂತೆ ನಾವು ಎಕ್ಸಾಮಿನೇಷನ್‌ಗೆ ಒಳಪಡಿಸಿದ್ದೆವು. ಮೊದಲು ಏನು ಹೇಳಿದ್ದಾರೆ, ಎರಡನೇ ಬಾರಿಗೆ ಏನು ಹೇಳ್ತಾರೆ ಅನ್ನೊದು ಅದರಲ್ಲಿ ಇದೆ. ಆ ವ್ಯಕ್ತಿ ಹೇಳಿರುವುದು ಓವರ್ ಲ್ಯಾಪ್ ಆಗಿದೆ. ಪಾಕಿಸ್ತಾನ್ ಮತ್ತು ನಾಸೀರ್ ಸಾಬ್ ಎರಡೂ ಒಬ್ಬರೇ ಹೇಳಿರೋದು. ಫೋರೆನ್ಸಿಕ್ ಸೈನ್ಸ್ ಅಂದ್ರೆ ಅದರಲ್ಲಿ ಏನು ಇದೆಯೋ ಅದೆ ಬರಬೇಕಿದೆ ಎಂದು ಫಣೀಂದ್ರ ಅವರು ಹೇಳಿದ್ದರು.

Latest Videos
Follow Us:
Download App:
  • android
  • ios