ಅವ್ನಲ್ಲಾ.. ಅವ್ನಲ್ಲಾ.. ಇಲ್ಲಿದ್ದಾನೆ ನೋಡಿ, ಪಾಕ್ ಪರ ಘೋಷಣೆ ಕೂಗಿದ ಆರೋಪಿ; ಬಿಜೆಪಿ ಆರೋಪ
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಸಿಪುಡಿ ಎಂದು ಹಾವೇರಿ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಹಾವೇರಿ (ಫೆ.28): ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗ ವಿಧಾನಸೌಧದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಮದು ಘೋಷಣೆ ಕೂಗಿದ್ದಾನೆ. ಈ ಬಗ್ಗೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಹಾವೇರಿ ಬಿಜೆಪಿ ನಾಯಕರು ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಸ್ಥ ಎಂದು ಆರೋಪ ಮಾಡಿದ್ದಾರೆ. ಕೂಡಲೇ ಹಾವೇರಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೌದು, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರು ಬ್ಯಾಡಗಿಯ ಮಹಮದ್ ಶಫಿ ನಾಸೀಪುಡಿ ಎಂದು ಹಾವೇರಿಯ ಬಿಜೆಪಿ ಮುಖಂಡರಿಂದ ಆರೋಪ ಮಾಡಲಾಗಿದೆ. ಕೂಡಲೇ ಬ್ಯಾಡಗಿ ಪೊಲೀಸ್ ಠಾಣೆಯಿಂದ ಆತನನ್ನು ವಶಕ್ಕೆ ಪಡದದು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಬಿಜೆಪಿ ಮುಖಂಡ ಸುರೇಶ್ ಉದ್ಯೋಗಣ್ಣವರ ಎಂಬುವರಿಂದ ಪೊಲೀಸ್ ಠಾಣೆಗೆ ಲಿಖಿತವಾಗಿ ಪತ್ರ ಬರೆದು ಮನವಿ ಮಾಡಿದ್ದಾರೆ. ಬ್ಯಾಡಗಿ ಬಿಜೆಪಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರು ತಾಯಿ ಗಂ**ರು-ಯತ್ನಾಳ್; ಸೂ**ಮಗ, ಬೋ** ಮಗ- ರಾಯರೆಡ್ಡಿ
ಈ ಕುರಿತು ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು, ನಿನ್ನೆ ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿ ಮಹಮದ್ ಶಫಿ ನಾಸೀಪುಡಿ ಎಂಬಾತನಾಗಿದ್ದಾನೆ. ಶಫಿ ನಾಸೀಪುಡಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವ್ಯಾಪಾರಸ್ಥ ಆಗಿದ್ದಾನೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರು ಪಾಕಿಸ್ತಾನಕ್ಕೇ ಹೋಗಿ ಇರಲಿ. ಈ ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಶಫಿ ನಾಸೀಪುಡಿ ಎಂಬ ವ್ಯಕ್ತಿಯನ್ನು ಕೂಡಲೇ ಭಂಧಿಸಿ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹ ಮಾಡಿದ್ದಾರೆ.
ಮೊಹಮ್ಮದ್ ಶಫಿ ನಾಸಿಪುಡಿ ಸ್ಪಷ್ಟನೆ ಏನು?
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಬಗ್ಗೆ ಮೊಹಮ್ಮದ್ ಶಫಿ ನಾಸಿಪುಡಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ 'ನಾನು ಆತರ ಘೋಷಣೆ ಕೂಗಿಲ್ಲ. ಬಿಜೆಪಿಯವರು ಮಾಡಿದ ಆರೋಪ ಸುಳ್ಳು. ನಾವು ನಿನ್ನೆ ನಾಸೀರ್ ಹುಸೇನ್ ಜೊತೆ ಇದ್ದೆವು. ಆತರ ಘೋಷಣೆ ಕೂಗಿಲ್ಲ. ಆತರ ಯಾರು ಘೋಷಣೆ ಕೂಗಿದ್ದಾರೆ ನನಗೆ ಕೇಳಿಲ್ಲ. ನಿನ್ನೆ ಸುಮಾರು 60 ರಿಂದ 100 ಜನ ಇದ್ದರು. ನಾನು ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡ್ತೀನಿ. ನಮ್ಮ ಭಾರತ ಮಾತೆ ಮೇಲೆ ಆಣೆ ಮಾಡ್ತೀನಿ. ಬಿಜೆಪಿಯವರು ಯಾಕೆ ಆತರ ಆರೋಪ ಮಾಡಿದ್ರು ಗೊತ್ತಿಲ್ಲ. ನಾನು ಬಿಜೆಪಿ ವಿರುದ್ದವೂ ಇಲ್ಲ' ಎಂದು ಹೇಳಿದ್ದಾರೆ.
Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!
ಬಿಜೆಪಿ ರಾಜ್ಯಾಧ್ಯಕ್ಷರಿಂದ ವಿಧಾನಸೌಧ ಬಿಟ್ಟು ತೊಲಗಿ ಹೋರಾಟ:
ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನ ಸೌಧದಲ್ಲೇ ಮೊಳಗಿದೆ ಎಂದರೆ ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿ ಕೊಂಡಿರಬಹುದು ಎಂದು ಅಂದಾಜಿಸಲು ಇಂದಿನ ಘಟನೆ ಸಾಕ್ಷಿ ಒದಗಿಸಿದೆ. ರಾಜ್ಯ ಸಭೆಗೆ ಆಯ್ಕೆಮಾಡಿ ಕಳುಹಿಸಿರುವ ಸೈಯದ್ ನಾಸೀರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು. 'ತನ್ನನು ರಕ್ಷಿಸಲು ತಮ್ಮ ಮನಃಸ್ಥಿತಿಯ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು' ಎಂಬ ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಎಲ್ಲ ಸಾಕ್ಷಿಗಳೆಲ್ಲವೂ ಕಣ್ಣೆದುರಿಗೇ ಇರುವಾಗ ದೇಶ ವಿರೋಧಿಗಳನ್ನು ರಕ್ಷಿಸಲು ಯತ್ನಿಸುವ ಪ್ರಯತ್ನ ನಡೆದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ. ನಮ್ಮ ಮುಂದಿನ ಹೋರಾಟ. 'ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನ ಸೌಧ ಬಿಟ್ಟು ತೊಲಗಿ' ಎಂದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.