ಸಾಂಸ್ಕೃತಿಕ ನಗರಿಯಲ್ಲಿ ಪ್ರಧಾನಿ ಮೋದಿ ಯೋಗ ಕಾರ್ಯಕ್ರಮಕ್ಕೆ ಭಾರೀ ಸಿದ್ಧತೆ

ಯೋಗ ದಿನಾಚರಣೆ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಇಂದು  ಮೈಸೂರು ಅರಮನೆ ಆವರಣದಲ್ಲಿ ಅಂತಿಮ ಹಂತದ ಯೋಗ ತಾಲೀಮು ನಡೆದಿದೆ.

prime minister narendra modi mysuru visit on june 21st gvd

ಮೈಸೂರು (ಜೂ.19): ಯೋಗ ದಿನಾಚರಣೆ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಇಂದು  ಮೈಸೂರು ಅರಮನೆ ಆವರಣದಲ್ಲಿ ಅಂತಿಮ ಹಂತದ ಯೋಗ ತಾಲೀಮು ನಡೆದಿದೆ. ಸಾವಿರಾರು ಯೋಗಾಸಕ್ತರಿಂದ ಯೋಗ ಪ್ರದರ್ಶನವಾಗುತ್ತಿದ್ದು, ಶಾಸಕ ರಾಮದಾಸ್ ಅಂತಿಮ ಹಂತದ ಯೋಗ ರಿಹರ್ಸಲ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಸಂಸದ ಪ್ರತಾಪ್ ಸಿಂಹ ಅಂತಿಮ ಹಂತದ ಸಿದ್ದತೆಯನ್ನು ವೀಕ್ಷಿಸಿದರು.

ಯೋಗ ಕಾರ್ಯಕ್ರಮಕ್ಕೆ ಸಿದ್ಧತೆ ಫೈನಲ್: ಅರಮನೆಯ ಎದುರಿನ ಮುಖ್ಯದ್ವಾರ ಜಯಮಾರ್ತಂಡ ಗೇಟ್‌ನಿಂದ ಪ್ರಧಾನ ಮಂತ್ರಿ, ಸಿಎಂ, ರಾಜ್ಯಪಾಲರ ಹಾಗೂ ಸಚಿವರ ಆಗಮನವಾದರೆ ಅರಮನೆ ಹಿಂಭಾಗದ ಕರಿಕಲ್ಲು ತೊಟ್ಟಿ ಗೇಟ್‌ನಿಂದ ವಿಐಪಿ ಮಾದರಿಯ ಜನಪ್ರತಿನಿಧಿಗಳ ಆಗಮನ. ಅರಮನೆಯ ಆವರಣದ ಉಳಿದ ಎರೆಡು ದ್ವಾರಗಳಿಂದ ಜನರಿಗೆ ಅವಕಾಶ ಕಲ್ಪಿಸಿಲಾಗಿದೆ. ಮೋದಿ ಅವರ ಜೊತೆ ಏಳು ಸಾವಿರ ಜನ ಯೋಗ ಮಾಡುತ್ತಾರೆ. ಉಳಿದವರು ಅರಮನೆಯ ಎಲ್ಲಾ ಭಾಗದಲ್ಲಿ ಕುಳಿತು ಯೋಗ ಮಾಡುತ್ತಾರೆ. 

ಬೆಂಗಳೂರಿನಲ್ಲಿ ಮೋದಿ ಕಾರ‍್ಯಕ್ರಮ ಯಶಸ್ಸಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ಅರಮನೆ ಮುಂಭಾಗದ ಯೋಗ ವೇದಿಕೆ ಇರಲಿದ್ದಾರೆ ಯದುವಂಶದ ಇಬ್ಬರು. ಪ್ರಧಾನಿ ಜೊತೆ ಪ್ರಮೋದಾ ದೇವಿ ಒಡೆಯರ್ ಮತ್ತು ಯದುವೀರ್ ವೇದಿಕೆ ಹಂಚಿಕೊಳ್ಳಲು ಅವಕಾಶ ಕೊಡಲಾಗಿದೆ. ಮೊದಲು ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಎಂಬ ಚರ್ಚೆ ಇತ್ತು. ಈಗ ಅಂತಿಮವಾಗಿ ಇಬ್ಬರಿಗೂ ವೇದಿಕೆಯಲ್ಲಿ ಅವಕಾಶ ಕೊಡಲಾಗಿದೆ. ವೇದಿಕೆ ಕಾರ್ಯಕ್ರಮದ ನಂತರ ಯದುವಂಶದವರ ಜೊತೆ ಅವರ ಮನೆಯಲ್ಲೇ ಮೋದಿ ಉಪಹಾರ ಸೇವನೆ ಮಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ಕೊಟ್ಟಿದ್ದಾರೆ.

ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮೈಸೂರು ಜಿಲ್ಲೆ ಪೊಲೀಸರು ಮಾತ್ರವಲ್ಲಾ ಹೊರ ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನ ಕರೆಸಲಾಗಿದೆ. ಪೊಲೀಸರ ಭದ್ರತೆ ನಿರ್ದಿಷ್ಟ ಸಂಖ್ಯೆಯನ್ನ ಮಧ್ಯಾಹ್ನದ ನಂತರ ತಿಳಿಸುತ್ತೇನೆ. ಭದ್ರತೆಗೆ ಎಲ್ಲಾ ಸಿದ್ಧತೆಗಳು ಅಂತಿಮವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಜೂ.21ರಂದು ಬೆಳಗ್ಗೆ ಮಳೆ ಬಾರದೆ ಇದ್ದರೆ ಯೋಗ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತದೆ. ನಾವು ಎಲ್ಲಾ ಸಿದ್ಧತೆಗಳನ್ನ ಮುಗಿಸಿದ್ದೇವೆ. ಅರಮನೆ ಕಾರ್ಯಕ್ರಮ, ಯೋಗ ಕಾರ್ಯಕ್ರಮ ಸೇರಿದಂತೆ ಪ್ರಧಾನಿ ಭಾಗವಹಿಸುವ ಎಲ್ಲಾ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿಗೆ ಡಜನ್ ಪ್ರಶ್ನೆಗಳು!

ಇನ್ನು ಸೋಮವಾರ 12 ಗಂಟೆಯಿಂದ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದ್ದು, ಜೂನ್ 20ರ ಮಧ್ಯಾಹ್ನ12 ಗಂಟೆ ನಂತರ ಭಕ್ತರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ. ಜೂನ್ 21ರಂದು ಎಂದಿನಂತೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕೊಡಲಾಗಿದೆ.

Latest Videos
Follow Us:
Download App:
  • android
  • ios