ಇಂದು ಮುದ್ದೇನಹಳ್ಳಿ ಸತ್ಯಸಾಯಿ ವಿವಿ ಘಟಿಕೋತ್ಸವಕ್ಕೆ ರಾಷ್ಟ್ರಪತಿ ಭೇಟಿ
ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ(ಯೂನಿವರ್ಸಿಟಿ ಫಾರ್ ಹ್ಯೂಮೆನ್ ಎಕ್ಸಲೆನ್ಸಿ)ದ ಎರಡನೇ ಘಟಿಕೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸೋಮವಾರ ಆಗಮಿಸಲಿದ್ದಾರೆ.
ಚಿಕ್ಕಬಳ್ಳಾಪುರ (ಜು.2): ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ(ಯೂನಿವರ್ಸಿಟಿ ಫಾರ್ ಹ್ಯೂಮೆನ್ ಎಕ್ಸಲೆನ್ಸಿ)ದ ಎರಡನೇ ಘಟಿಕೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸೋಮವಾರ ಆಗಮಿಸಲಿದ್ದಾರೆ.
ಸೋಮವಾರ ಮಧ್ಯಾಹ್ನ 3.40ಕ್ಕೆ ಮುದ್ದೇನಹಳ್ಳಿ ಗ್ರಾಮದ ಬಳಿಯ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ನ ಎರಡನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ಹೆಲಿಕ್ಯಾಪ್ಟರ್ ಮೂಲಕ ರಾಷ್ಟ್ರಪತಿ ದ್ರೌಪತಿ ಮುರ್ಮು ಆಗಮಿಸುತಿದ್ದಾರೆ. ಸಂಜೆ 4.40 ನಲವತ್ತಕ್ಕೆ ಪ್ರೇಮಾಮೃತ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಿರುವ ಆರು ಜನರು ಗೌರವ ಡಾಕ್ಟರೇಟ್ ಹಾಗು ಹದಿನೇಳು ಜನರು ಚಿನ್ನದ ಪದಕ ಹಾಗು ನೂರ ಇಪ್ಪತ್ತ ಮೂರು ಜನರು ರಾಷ್ಟ್ರಪತಿಯಿಂದ ಪದವಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ , ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗವಹಿಸಲಿದ್ದಾರೆ ಎಂದು ಸತ್ಯ ಸಾಯಿ ಟ್ರಸ್ಟ್‌ನ ಪ್ರಧಾನ ಸಾರ್ವಜನಕ ಸಂಪರ್ಕಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ರಾಷ್ಟ್ರಪತಿ ಆಗಮನ: ಇಂದು, ನಾಳೆ ನಂದಿಬೆಟ್ಟ ಪ್ರವೇಶ ನಿಷಿದ್ಧ
ಬಿಗಿ ಪೋಲಿಸ್ ಭದ್ರತೆ
ಭದ್ರತೆಗಾಗಿ ಮೂರು ಜನ ಎಸ್ಪಿಗಳು,ಹತ್ತು ಜನ ಡಿವೈಎಸ್ಪಿಗಳು ,ಇಪ್ಪತ್ತೆಂಟು ಜನ ಪೊಲೀಸ್ ಇನ್ಸೆ$್ಪಕ್ಟರ್‌ಗಳು ,ಅರವತ್ತು ಪಿಎಸ್‌ಐಗಳು,ಡಿಎಆರ್‌ನ ಏಳು ತುಕಡಿ ,ಕೆಎಸ್ ಆರ್ ಪಿಯ ಮೂರುತುಕಡಿ ಸೇರಿ ಒಟ್ಟು ಏಳನೂರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.
ರಾಷ್ಟ್ರಪತಿ ಆಗಮನದ ಹಿನ್ನೆಲೆ ಇಂದು ಕೇಂದ್ರಭದ್ರತಾ ತಂಡ ಮತ್ತು ಎಸ್‌ಜಿಪಿ ತಂಡಗಳಿಂದ ಭದ್ರತಾ ಪರಿಶೀಲನೆ ನಡೆಸಲಾಯಿತು. ಸತ್ಯಸಾಯಿ ಗ್ರಾಮದ ಹೆಲಿ ಪ್ಯಾಡ್‌ನಲ್ಲಿ ಹೆಲಿಕ್ಯಾಪ್ಟರ್ ನಿಂದ ತಾಲೀಮು ನಡೆಸಲಾಯಿತು. ಹೆಲಿಪ್ಯಾಡ್ ನಿಂದ ವಾಹನಗಳ ಕಾನ್ವೆಯ ತಾಲೀಮುಸಹಾ ನಡೆಸಿದರು.ಬಾಂಬ್ ಸ್ಕಾ$್ವಡ್, ಡಾಗ್ ಸ್ಕಾ$್ವಡ್ ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜನ್ನೂ ಮಾಡಿಸಿದ್ದು ಸುಧಾಕರ್: ಸಂಸದ ಮುನಿಸ್ವಾಮಿ
ಈ ಮಧ್ಯೆ, ಭಾನುವಾರವೂ ಭೇಟಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದಾಗಿ ವಿಷಯ ಅರಿಯದೆ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಪೇಚಿಗೆ ಸಿಲುಕಿದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನೆಟ್ಟಿಗರ ಆಕ್ರೋಶದಿಂದ ಎಚ್ಚೆತ್ತ ಜಿಲ್ಲಾಡಳಿತ ಭಾನುವಾರ ಸಂಜೆ 6 ಗಂಟೆಯವರೆಗೆ ಭೇಟಿಗೆ ಅವಕಾಶ ಕಲ್ಪಿಸಿತ್ತು..