ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಕರ್ನಾಟಕದ ಇಬ್ಬರು ಯಾತ್ರಿಕರು ಮೃತಪಟ್ಟಿದ್ದಾರೆ. ಶೆಟ್ಟಿಗಲ್ಲಿಯ ಅರುಣ್‌ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಸಾವನ್ನಪ್ಪಿದ ಯಾತ್ರಿಕರು.

ಬೆಳಗಾವಿ (ಜ.29): ಮೌನಿ ಅಮವಾಸ್ಯೆಯಂದು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನಕ್ಕೆ ಇಳಿಯುವ ವೇಳೆ ಭಾರೀ ಕಾಲ್ತುಳಿತವಾಗಿತ್ತು. ಈ ಘಟನೆಯಲ್ಲಿ ಕರ್ನಾಟಕದ ಮತ್ತಿಬ್ಬರು ಯಾತ್ರಾರ್ಥಿಗಳು ಬಲಿಯಾಗಿರುವ ಮಾಹಿತಿ ಸಿಕ್ಕಿದೆ. ಇದಕ್ಕೂ ಮುನ್ನ ಬೆಳಗಾವಿಯ ತಾಯಿ-ಮಗಳಾದ ಜ್ಯೋತಿ ಹಾಗೂ ಮೇಘಾ ಸಾವು ಕಂಡಿದ್ದು ವರದಿಯಾಗಿತ್ತು. ಈಗ ಬೆಳಗಾವಿಯ ಮತ್ತೊಬ್ಬರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶೆಟ್ಟಿಗಲ್ಲಿಯ ಅರುಣ್‌ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಎನ್ನುವ ಯಾತ್ರಾರ್ಥಿ ಸಾವು ಕಂಡಿದ್ದು ಖಚಿತವಾಗಿದೆ.

ಪ್ರಯಾಗ್‌ರಾಜ್‌ ಕುಂಭಮೇಳ ಕಾಲ್ತುಳಿತ: ಬೆಳಗಾವಿಯ ತಾಯಿ-ಮಗಳು ದುರ್ಮರಣ

ಅರುಣ್‌ ತಮ್ಮ ಪತ್ನ ಜೊತೆ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಇಂದು ಬೆಳಗ್ಗೆ ಕಾಲ್ತುಳಿತದಲ್ಲಿ ಅರುಣ್‌ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಸಿಬ್ಬಂದಿಗಳು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅರುಣ್ ಕೊಪಾರ್ಡೆ ಸಾವು ಕಂಡಿದ್ದಾಗಿ ವರದಿಯಾಗಿದೆ. ಅರುಣ್‌ ಕೋಪರ್ಡೆ ಮನೆಗೆ ಬೆಳಗಾವು ತಹಶೀಲ್ದಾರ್‌ ಹಾಗೂ ಸಿಬ್ಬಂದಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಶೆಟ್ಟಿ ಗಲ್ಲಿಯ ಅರುಣ್ ಮನೆಗೆ ಬೆಳಗಾವಿ ಉತ್ತರ ಶಾಸಕ ಆಸೀಫ್‌ ಸೇಠ್‌ ಭೇಟಿ ನೀಡಿದ್ದಾರೆ. ಕುಟುಂಬಸ್ಥರಿಗೆ ಆಸೀಫ್ ಸೇಠ್ ಸಾಂತ್ವನ ಹೇಳಿದ್ದಾರೆ.
ಇನ್ನು ಬೆಳಗಾವಿಯ ಶಿವಾಜಿನಗರದ ಮಹಾದೇವಿ ಕೂಡ ಸಾವು ಕಂಡಿದ್ದಾರೆ. ಅರಣು ಹಾಗೂ ಮಹಾದೇವಿ ಕುಟುಂಬಸ್ಥರಿಗೆ ಶಾಸಕ ಸಾಂತ್ವನ ಹೇಳಿದ್ದಾರೆ. ಶಾಸಕರು, ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಮಾಡಿದ್ದಾರೆ.

ಕಾಲ್ತುಳಿತ ನಂತರ ಮಹಾಕುಂಭ ಮೇಳದಲ್ಲಿ ಬಾಲಿವುಡ್‌ ನಟಿ ಹೇಮಾ ಮಾಲಿನಿ ಸ್ನಾನ

ಇದಕ್ಕೂ ಮುನ್ನ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ್‌ ಮೃತಪಟ್ಟಿದ್ದನ್ನು ಅವರ ಸಹೋದರ ಗುರುರಾಜ್ ಹುದ್ಧಾರ ಖಚಿತಪಡಿಸಿದ್ದರು. ಕಾಲ್ತುಳಿತ ಸಂಭವಿಸಿದ ಬಳಿಕ ಇಬ್ಬರನ್ನೂ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಇವರನ್ನು ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವು ಕಂಡಿದ್ದರು. ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಮಹಾ ಕುಂಭಮೇಳಕ್ಕೆ ಹೋಗಿದ್ದ ತಾಯಿ ಜ್ಯೋತಿ ಮತ್ತು ಮಗಳು ಮೇಘಾ ಒಬ್ಬರೂ ಇಂದು ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಕಾಲ್ತುಳಿತದ ಸುದ್ದಿ ಗೊತ್ತಾಗುತ್ತಿದ್ದಂತೆ ಮನೆಯವರು ಇಬ್ಬರ ಮೊಬೈಲ್‌ಗೂ ಕರೆ ಮಾಡಿದ್ದಾರೆ. ಆದರೆ, ಕರೆ ರಿಸೀಲ್‌ ಮಾಡುತ್ತಿರಲಿಲ್ಲ. ಕೊನೆಗೆ ತಾಯಿ-ಮಗಳು ಸಾವು ಕಂಡಿರುವ ಬಗ್ಗೆ ಟ್ರಾವೆಲ್‌ ಏಜೆನ್ಸಿ ಅವರು ಖಚಿತಪಡಿಸಿದ್ದರು ಎನ್ನಲಾಗಿದೆ.