11:32 PM (IST) Mar 13

Karnataka News Live ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ವರದಿ: ಬಸವರಾಜ ಹಿರೇಮಠ

ಮಧ್ಯಪ್ರಾಚ್ಯದಲ್ಲಿನ ಯುದ್ಧವು ಧಾರವಾಡ ಆಪೂಸ್ ಎಂದೇ ಖ್ಯಾತವಾದ ಅಲ್ಫಾನ್ಸೋ ಮಾವಿನ ರಫ್ತಿಗೆ ಅಡ್ಡಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳೆಗಾರರ ಸಂಘವು ಅಮೆರಿಕ, ಯುಕೆ ಮತ್ತು ಸಿಂಗಾಪುರದಂತಹ ಪರ್ಯಾಯ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ.  

Read Full Story
11:17 PM (IST) Mar 13

Karnataka News Live ಕರ್ನಾಟಕದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಳ, ಅರಣ್ಯ ಪ್ರದೇಶ ಕ್ಷೀಣ!

ರಾಜ್ಯದಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಸಂಖ್ಯೆ ಮತ್ತು ಕುಗ್ಗುತ್ತಿರುವ ಅರಣ್ಯ ಪ್ರದೇಶದಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು, ಸರ್ಕಾರವು ರೈಲು ಹಳಿ ತಡೆಗೋಡೆ ನಿರ್ಮಾಣದಂತಹ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಂಘರ್ಷ ತಡೆಗಟ್ಟಲು ಆದ್ಯತೆ ನೀಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Read Full Story
10:59 PM (IST) Mar 13

Karnataka News Live 'ಅರ್ಧಕ್ಕೆ ಕೈಕೊಡುವವಳಲ್ಲ' ಅಂದಿದ್ದ ನಟಿ ಸಂಜನಾ ಬುರ್ಲಿ ಸೀರಿಯಲ್​ ಬಿಟ್ಟಿದ್ಯಾಕೆ? ಕುತೂಹಲದ ಪೋಸ್ಟ್​!

'ಪುಟ್ಟಕ್ಕನ ಮಕ್ಕಳು' ಸೀರಿಯಲ್​ನಿಂದ ಪೂರ್ವಸೂಚನೆ ನೀಡಿ ಹೊರಬಂದಿದ್ದ ನಟಿ ಸಂಜನಾ ಬುರ್ಲಿ, ಇದೀಗ 'ಗಂಧದ ಗುಡಿ' ಧಾರಾವಾಹಿಯಿಂದ ದಿಢೀರ್ ನಿರ್ಗಮಿಸಿದ್ದಾರೆ. ಅವರ ಮದುವೆ ಕಾರಣ ಎನ್ನಲಾಗುತ್ತಿದ್ದರೂ, ಅವರು ಹಂಚಿಕೊಂಡಿರುವ ಒಂದು ನಿಗೂಢ ಪೋಸ್ಟ್​ನಿಂದಾಗಿ ಅವರ ನಿರ್ಧಾರದ ಬಗ್ಗೆ  ಅನುಮಾನಗಳು ಮೂಡಿವೆ.

Read Full Story
10:52 PM (IST) Mar 13

Karnataka News Live ಕೊಡಗಿನ ಆತಂಕಕ್ಕೆ ತೆರೆ - ಹಲವರನ್ನ ಬಲಿ ಪಡೆದ ಕಾಡಿನ ಒಂಟಿ ಸಲಗ ಕೊನೆಗೂ ಸೆರೆ

ಕೊಡಗು ಜಿಲ್ಲೆಯ ಸಿದ್ದಾಪುರ, ಪಾಲಿಬೆಟ್ಟ, ಮತ್ತು ಅಮ್ಮತ್ತಿ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಆತಂಕ ಸೃಷ್ಟಿಸಿ, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆ ಹಿಡಿದಿದೆ. ಸಾಕಾನೆಗಳ ಸಹಾಯದಿಂದ ನಡೆಸಿದ ಈ ಕಾರ್ಯಾಚರಣೆಯು ಸ್ಥಳೀಯ ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.
Read Full Story
10:32 PM (IST) Mar 13

Karnataka News Live ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ, ಸಂಸ್ಥೆ ಮುಚ್ಚಿ - ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

ಎಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದರೂ ಕೆಪಿಎಸ್‌ಸಿಯವರಿಗೆ ಭಯ ಇಲ್ಲದಂತಾಗಿದೆ. ಖಾಲಿ ಪತ್ರಿಕೆ ನೀಡಿದವರೂ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಪಿಎಸ್‌ಸಿ ಸಂಸ್ಥೆಯನ್ನೇ ರದ್ದುಪಡಿಸಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

Read Full Story
10:28 PM (IST) Mar 13

Karnataka News Live ಉಡುಪಿ ಅಬಕಾರಿ ಅಧಿಕಾರಿಗೆ ಲೋಕಾಯುಕ್ತ ಶಾಕ್ - 15 ಕಡೆ ದಾಳಿ, ಕೋಟಿಗಟ್ಟಲೆ ಪತ್ತೆ, ಅಕ್ರಮ ಆಸ್ತಿ ಗುಟ್ಟು ರಟ್ಟು!

ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿ ಶ್ರೀನಿವಾಸ್ ಟಿ. ಎಂ. ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, 15 ಸ್ಥಳಗಳಲ್ಲಿ ಶೋಧ ನಡೆಸಿ, ಸುಮಾರು 8.69 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ.
Read Full Story
10:02 PM (IST) Mar 13

Karnataka News Live ಬಸವನಗುಡಿ ಸುಬ್ರಮಣ್ಯ ಮಠಕ್ಕೆ ಜಾಗದ ಗುತ್ತಿಗೆ ಮುಂದುವರಿಕೆ - ಸಚಿವ ರಾಮಲಿಂಗಾರೆಡ್ಡಿ

ಗುತ್ತಿಗೆ ಆಧಾರದಡಿ ನೀಡಿರುವ ಜಾಗದ ವಿಚಾರದಲ್ಲಿ ಈಗಾಗಲೇ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವೇ ಅಂತಿಮವಾಗಿದ್ದು, ಗುತ್ತಿಗೆ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Read Full Story
09:18 PM (IST) Mar 13

Karnataka News Live ಗರ್ಭಿಣಿಯಾದ್ಮೇಲೆ ಪತಿಯ ಮೊದಲ ಮದುವೆ ವಿಷ್ಯ ಗೊತ್ತಾಯ್ತು - ರೌಡಿ ಗಂಡನನ್ನು ಬದಲಾಯಿಸಿರೋ ರೇಷ್ಮಾ ಆಂಟಿ ಕರಾಳ ಬದುಕು

Reels Reshma: ಒಂದಿನ ಗಂಡ ಹೊಡೆಯುತ್ತಾನೆ, ಬೈತಾನೆ, ಗಂಡ ಪ್ರೀತಿ ಮಾಡ್ತಾನೆ ಎಂದೆಲ್ಲ ಹೇಳಿಕೊಂಡು ವಿಡಿಯೋ ಮಾಡುತ್ತಿದ್ದ ರೇಷ್ಮಾ ಆಂಟಿ ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗಿ ಆಗಿದ್ದರು. ಇವರನ್ನು ಬೈಯ್ಯುವವರೇ ಜಾಸ್ತಿ ಇದ್ದರೂ ಕೂಡ, ವೈಯಕ್ತಿಕ ಬದುಕಿನ ಕರಾಳ ವಿಷಯಗಳು ಅನೇಕರಿಗೆ ಗೊತ್ತಿಲ್ಲ.

 

Read Full Story
09:00 PM (IST) Mar 13

Karnataka News Live ಗೋಕಾಕ- ಧಾರವಾಡ ರಸ್ತೆ ಚತುಷ್ಪಥವಾಗಿಸಿ - ಸಂಸದ ಜಗದೀಶ ಶೆಟ್ಟರ್ ಮನವಿ

ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ನವದೆಹಲಿಯ ಸಂಸತ್ ಭವನದಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾಮಗಾರಿಗಳ ಕುರಿತು ಚರ್ಚಿಸಿದರು.

Read Full Story
08:48 PM (IST) Mar 13

Karnataka News Live ಕೃಷಿ ವಿಶ್ವವಿದ್ಯಾಲಯ ಲಕ್ಷ ಕೋಟಿ ಅನುದಾನಕ್ಕೆ ಸಮ - ಸಚಿವ ಚಲುವರಾಯಸ್ವಾಮಿ

ಕೃಷಿ ವಿಶ್ವವಿದ್ಯಾಲಯ ತಂದು ಜಿಲ್ಲೆಗೆ ಶಾಶ್ವತ ಕೊಡುಗೆ ನೀಡಿದ್ದೇವೆ. ಇನ್ನು ಲಕ್ಷ ಕೋಟಿ ಅನುದಾನ ತಂದರೂ ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಮನಾಗುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Read Full Story
07:48 PM (IST) Mar 13

Karnataka News Live ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ - ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು - Bigg Boss ವಿನಯ್‌ ಗೌಡ ಕಿಡಿ

ಬಿಗ್‌ಬಾಸ್‌ ವಿಜೇತ ವಿನಯ್‌ ಗೌಡ ಅವರು, ಡಾಗ್‌ ಸತೀಶ್‌ರನ್ನು ನಾಯಿಗಳ ಹೆಸರೇ ಗೊತ್ತಿಲ್ಲದ ಬ್ರೀಡರ್‌ ಎಂದು ಕರೆದಿದ್ದಾರೆ. ಗೂಗಲ್‌ನಲ್ಲಿ ನಂಬರ್‌ ಒನ್‌ ಎಂದು ಸ್ವಯಂ ಘೋಷಿಸಿಕೊಂಡಿರುವ ಸತ್ಯ ಬಿಚ್ಚಿಟ್ಟಿರುವ ವಿನಯ್, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿರುವ ವಿರುದ್ಧ ಕೇಸ್​​ ಹಾಕ್ಬೇಕು ಎಂದಿದ್ದಾರೆ. 

Read Full Story
07:34 PM (IST) Mar 13

Karnataka News Live ಐಐಎಸ್‌ಸಿ ಬೆಂಗಳೂರು ಪ್ರಾಜೆಕ್ಟ್ ಎಂಜಿನಿಯರ್ ನೇಮಕಾತಿ 2026, ಈ ತಕ್ಷಣವೇ ಅರ್ಜಿ ಸಲ್ಲಿಸಿ

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ನಿಗದಿತ ದಿನಾಂಕದೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಸಂದರ್ಶನದ ಮೂಲಕ ನಡೆಯಲಿದೆ.
Read Full Story
07:34 PM (IST) Mar 13

Karnataka News Live ಸೆಲ್ಫ್‌ ಗಿಫ್ಟ್ ಪಡೆಯಲು ಹೋಗಿ ಬರಿಗೈಲಿ ವಾಪಸಾದ ಮೇಘನಾ ರಾಜ್‌, ಅಮ್ಮನ ಪ್ಲ್ಯಾನ್‌ ಫೇಲ್‌ ಆದ್ರೂ ಮಗ ರಾಯನ್‌ ಫುಲ್‌ ಖುಷ್!

ನಟಿ ಮೇಘನಾ ರಾಜ್ ತಮ್ಮ 'ಸಂಗೀತಾ ಬಾರ್ & ರೆಸ್ಟೋರೆಂಟ್‌' ಸಿನಿಮಾ ಶೂಟಿಂಗ್ ಮುಗಿದಿದ್ದಕ್ಕೆ ತಮಗೇ ಉಡುಗೊರೆ ಖರೀದಿಸಲು ಮಾಲ್‌ಗೆ ಹೋಗಿದ್ದರು. ಆದರೆ, ಇಷ್ಟದ ಬ್ಯಾಗ್ ಸಿಗದಿದ್ದಾಗ, ಮಗ ರಾಯನ್‌ಗಾಗಿ ಆರ್ಮಿ ಆಫೀಸರ್ ಕಾಸ್ಟ್ಯೂಮ್ ಖರೀದಿಸಿದರು.

Read Full Story
07:16 PM (IST) Mar 13

Karnataka News Live ಇದು ಮುದ್ದೆ ಅಲ್ಲ, ಆನೆ ಲದ್ದಿ; ಈ ಮಹಿಳೆ ತಿನ್ನೋದು ನೋಡಿ, ದೃಷ್ಟಿ ಬಿದ್ದು, ಉಣ್ಣಬಾರದು; ಹಿಡಿ ಶಾಪ ಹಾಕಿದ ಜನರು

Savitha Lokesh Yadav Video: ಆರು ಮೂಟೆ ರಾಗಿಯನ್ನು ಆರು ತಿಂಗಳಿಗೆ ಖಾಲಿ ಮಾಡಿದೆ. 12 ತಿಂಗಳೊಳಗಡೆ ರಾಗಿ ಚೀಲ ಖಾಲಿ ಮಾಡ್ತೀನಿ, ನಿಮ್ಮ ಮನೆಯಲ್ಲಿ ರಾಗಿ ಇದ್ದರೆ ನಾನೇ ಖರೀದಿ ಮಾಡ್ತೀನಿ, ಯಾರಿಗೂ ಕೊಡಬೇಡಿ ಎಂದು ಸವಿತಾ ಲೋಕೇಶ್‌ ಯಾದವ್‌ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ.

 

Read Full Story
07:13 PM (IST) Mar 13

Karnataka News Live ತ್ರಿಷಾ, ನಯನತಾರಾ ಸೇರಿ ಸೌತ್‌ನ ಟಾಪ್ 5 ದುಬಾರಿ ನಟಿಯರಿವರು - ನಂ.1 ನಟಿಯ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಸೌತ್ ಸಿನಿಮಾಗಳ ನಟಿಯರಿಗೆ ಬೇಡಿಕೆ ಮುಗಿಲು ಮುಟ್ಟಿದೆ. ಅಲ್ಲಿನ ನಟಿಯರು ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಾದ್ರೆ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟಿಯರು ಯಾರು? ಅವರ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.

Read Full Story
05:49 PM (IST) Mar 13

Karnataka News Live Sivakarthikeyan - ಅವಳಿಲ್ಲದಿದ್ರೆ ಇದೆಲ್ಲಾ ಆಗ್ತಿರಲಿಲ್ಲ, ಖರ್ಚಿಗೆ ಹೆಂಡ್ತಿ ಹತ್ರ ದುಡ್ಡು ಕೇಳ್ತೀನಿ - ಅಮರನ್ ನಟ!

ಏನಾದ್ರೂ ಖರ್ಚು ಬಂದ್ರೆ, ನಾನು ಅವಳ ಹತ್ರನೇ ದುಡ್ಡು ಕೇಳ್ತೀನಿ ಅಂತ ತಮಿಳು ನಟ ಶಿವಕಾರ್ತಿಕೇಯನ್ ಹೇಳಿದ್ದಾರೆ. ತನ್ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಪತ್ನಿ ಆರತಿಗೆ ನೀಡಿದ್ದಾರೆ.

 

Read Full Story
05:13 PM (IST) Mar 13

Karnataka News Live ಅಫ್ಘಾನಿಸ್ತಾನ–ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರ - ಕಾಬೂಲ್, ಕಂದಹಾರ್ ಮೇಲೆ ದಾಳಿ, 6 ಮಂದಿ ಸಾವು

ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಸೈನಿಕ ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿವೆ. ಈ ದಾಳಿ-ಪ್ರತಿದಾಳಿಗಳಿಂದಾಗಿ ಡುರಾಂಡ್ ಗಡಿ ರೇಖೆಯ ಬಳಿ ಉದ್ವಿಗ್ನತೆ ತೀವ್ರಗೊಂಡಿದ್ದು, ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
Read Full Story
05:13 PM (IST) Mar 13

Karnataka News Live Master Anand Home - ಮಾಸ್ಟರ್‌ ಆನಂದ್‌ ಹೊಸ ಮನೆ ಹೈಟೆಕ್ ಕಿಚನ್‌ ನೋಡಿ ಬೆಕ್ಕಸ ಬೆರಗಾದ 'ಗಿಚ್ಚಿ ಗಿಲಿಗಿಲಿ' ಟೀಂ

Master Anand New Home: ಕನ್ನಡದ ಅನೇಕ ಸಿನಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಮಾಸ್ಟರ್‌ ಆನಂದ್‌ ಅವರು ಸಾಕಷ್ಟು ಧಾರಾವಾಹಿಗಳ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಕಷ್ಟು ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story
05:02 PM (IST) Mar 13

Karnataka News Live ನಟಿಯರ ಅಸಭ್ಯ ಫೋಟೋ, ವೀಡಿಯೋ ತೆಗೆದರೆ ಸೈಬರ್ ಕ್ರೈಮ್ ದೂರು - KFCC ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಅಸಭ್ಯ ಚಿತ್ರ, ವೀಡಿಯೋ ತೆಗೆಯುವ ಪಾಪರಾಜಿಗಳ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕಿಡಿಕಾರಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ.

Read Full Story
04:48 PM (IST) Mar 13

Karnataka News Live Kadal Kote - ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ - ನಟ ವಸಿಷ್ಠ ಸಿಂಹ

ಈ ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ ಎಂದರು ವಸಿಷ್ಠ ಸಿಂಹ.

Read Full Story