ಬೆಂಗಳೂರು(ಫೆ.10): ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಈ ಕುರಿತು ಕನ್ನಡ ಸಂಘಟನೆಗಳು ಕರ್ನಾಟಕದ ಪ್ರತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದೀಗ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸರೋಜಿನ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿದ ಕನ್ನಡ ಪರ ಸಂಘಟನೆಗಳು ಫೆ.13ಕ್ಕೆ ಬಂದ್‌ಗೆ ಕರೆ ನೀಡಿವೆ. ಆದರೆ ಈ ಬಂದ್‌ಗೆ ಪ್ರವೀಣ್ ಕುಮಾರ್ ನೆಟ್ಟಿ ನೇತೃತ್ವದ ಕರವೇ ಬಣ ದೂರ ಉಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಫೆ.13ಕ್ಕೆ ಕರ್ನಾಟಕ ಬಂದ್; ಸರ್ಕಾರ & ಸಂಘ ಸಂಸ್ಥೆಗಳ ವಾಹನ ಚಾಲಕರ ಸಂಘ ಬೆಂಬಲ!

ಫೆ.13ರಂದು ಕರೆ ನೀಡಿರುವ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣ ಬೆಂಬಲ ನೀಡಬೇಕೋ, ಬೇಡವೇ ಎಂಬುದನ್ನು ಚರ್ಚಿಸಲು ಇಂದು(ಫೆ.10) ಸಂಜೆ ರಾಜ್ಯ ಪದಾಧಿಕಾರಿಗಳ ಸಭೆ ಕರಿದಿದೆ. ಬೆರಳೆಣಿಕೆ ಸಂಘಟನೆಗಳು ಕರೆ ನೀಡಿದರೆ ಬಂದ್ ಆಗುವುದಿಲ್ಲ. ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ:ಫೆ. 13 ಕ್ಕೆ ಕರ್ನಾಟಕ ಬಂದ್; ಏನಿರತ್ತೆ? ಏನಿರಲ್ಲ? ಇಲ್ಲಿದೆ ಡಿಟೇಲ್ಸ್

ಫೆ.13ರ ಬಂದ್ ಬಗ್ಗೆ ನಾವು ಗಮನ ಹರಿಸಿಲ್ಲ. ಬಂದ್‌ನಿಂದ ಸರೋಜಿನ ಮಹಿಷಿ ವರದಿ ಜಾರಿಯಾಗುವುದಿಲ್ಲ. ಮುಖ್ಯಮಂತ್ರಿಗಳು ವರದಿ ಜಾರಿ ಮಾಡಬೇಕಿದೆ. ಇದಕ್ಕಾಗಿ ಮುಖ್ಯಮಂತ್ರಿಗೆ ಒತ್ತಡ ತರುವ ಪ್ರಯತ್ನ ಆಗಬೇಕಿದೆ.  ವರದಿ ಜಾರಿಗೆಗೆ ಆಗ್ರಹಿಸಿ ನಾವು ಅತ್ತಿಬೆಲೆಯಿಂದ ಜಾಥ ನಡೆಸಿ ಸಿಎಂಗೆ ಮನವಿ ಮಾಡ್ತೇವೆ. ಜಾಥ ನಡೆಸುವ ಕುರಿತು ಶೀಘ್ರದಲ್ಲೇ ದಿನಾಂಕ ಪ್ರಕಟ ಮಾಡುತ್ತೇವೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಕನ್ನಡ ಪರ ಸಂಘಟನೆಗಳು ಡಾ.ಸರೋಜಿನಿ ಮಹಿಷಿ ವರದಿಗೆ ಒತ್ತಾಯಿಸುತ್ತಿರುವುದೇಕೆ? ಈ ವರದಿಯಲ್ಲೇನಿದೆ? ಇಲ್ಲಿದೆ ಹೆಚ್ಚಿನ ಮಾಹಿತಿ:

ಡಾ.ಸರೋಜಿನಿ ಮಹಿಷಿ ವರದಿ:

ಕರ್ನಾಟಕ 10ನೇ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಮುಖ್ಯತೆ ಸಿಗಬೇಕು? ಉದ್ಯೋಗ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದಲ್ಲಿ ಕನ್ನಡಿಗರಿಗೆ ಸಿಗಬೇಕಾದ ಅವಕಾಶವೆಷ್ಟು ಅನ್ನೋ ಕುರಿತು ವರದಿ ನೀಡಲು ಸಮತಿ ರಚಿಸಿತ್ತು. 1983ರಲ್ಲಿ ಕೇಂದ್ರ ಮಾಜಿ ಸಚಿವೆ ಸರೋಜಿನಿ ಮಹಿಷಿ, ಸಾಹಿತಿ ಗೋಪಾಲ್ ಕೃಷ್ಣ ಅಡಿಗ ಸೇರಿದಂತೆ ತಜ್ಞರ ಸಮಿತಿ ರಚಿಸಿದ್ದರು.

ಸರೋಜಿನಿ ಮಹಿಷಿ ನೇತೃತ್ವದ ಸಮಿತಿ 1986ರಲ್ಲಿ ವರದಿ ಸಲ್ಲಿಸಿತು. ವರದಿಯಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರ ಪರಿಸ್ಥಿತಿಯನ್ನು ವಿವರಿಸಿತ್ತು. ಇಷ್ಟೇ ಅಲ್ಲ ಹಲವು ಶಿಫಾರಸು ಮಾಡಿತ್ತು. ಈ ಶಿಫಾರಸಿನಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು.

ಹಲವು ದಿನಗಳಿಂದ ನಡಯುತ್ತಿರುವ ಪ್ರತಿಭಟನೆ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇಕಡಾ 75 ರಷ್ಟು ಮೀಸಲಾತಿಗೆ ಚಿಂತನೆ ನಡೆಸಿತ್ತು. ಪ್ರತಿಭಟನೆ ಇದೀಗ 100ನೇ ದಿನಕ್ಕೆ ಕಾಲಿಟ್ಟ ಕಾರಣ ಕರ್ನಾಟಕ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದೆ.