ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯನ್ನು ಟೀಕಿಸಿದ್ದಾರೆ. ಧರ್ಮದ ಆಧಾರದ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಮದರಾಸ, ಉರ್ದು ಶಾಲೆಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದಾರೆ.
ಮೈಸೂರು (ಮಾ.11): ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯನ್ನು ಟೀಕೆ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಸರ್ಕಾರ ಧರ್ಮದ ಆಧಾರ ಮೇಲೆ ತೆರಿಗೆ ಸಂಗ್ರಹದ ವರದಿ ಸಿದ್ದ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂಗಳು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ಮುಸ್ಲಿಂಮರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ? ಕ್ರಿಶ್ಚಿಯನ್ ರು ಎಷ್ಟು ತೆರಿಗೆ ಕಟ್ಟುತ್ತಿದ್ದಾರೆ ? ಅದರ ವರದಿ ತಯಾರಿಸಿ ಬಿಡುಗಡೆ ಮಾಡಿ.ರಾಜ್ಯ ಬಜೆಟ್ ಗೆ ಸಾಬಾರ ಕೊಡುಗೆ ಎಷ್ಟು ಎಂಬುದು ಜನರಿಗೆ ಗೊತ್ತಾಗಲಿ ಮಸೀದಿಯಿಂದ, ಚರ್ಚ್ ನಿಂದ ಸರಕಾರಕ್ಕೆ ಐದು ರೂಪಾಯಿ ಆದರೂ ತೆರಿಗೆ ಬರುತ್ತಿದೆಯಾ? ಇದು ಹಲಾಲ್ ಬಜೆಟ್ ಅನ್ನೋದರಲ್ಲಿ ಯಾವುದೇ ತಪ್ಪಿಲ್ಲ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣ, ಮಡಿವಾಳರ ಹೀಗೆ ನಾನಾ ಜಾತಿಯ ಅಭಿವೃದ್ಧಿ ನಿಗಮಕ್ಕೆ ಎಷ್ಟು ಹಣ ಕೊಟ್ಟಿದ್ದಿರಾ? ಇವತ್ತು ಇಲ್ಲಿನ ಕೆಲ ಮುಸ್ಲಿಂರಿಗೆ ಪಾಕಿಸ್ತಾನ ನಿಷ್ಠೆ ಇದೆ. ರಾಜ್ಯದಲ್ಲಿ ಮದರಾಸ, ಉರ್ದು ಶಾಲೆ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಡಿಸಿಎಂ ನಟು ಬೋಲ್ಟ್ ಹೇಳಿಕೆ ವಿಚಾರವಾಗಿಯೂ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಸಿಎಂ ತಾಲಿಬಾನ್ ಸರಕಾರ ನಡೆಸುತ್ತಿದ್ದಾರೆ. ಡಿಸಿಎಂ ಗೂಂಡಾ ಸರಕಾರ ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರೇ ಕರ್ನಾಟಕ ಏನೂ ನಿಮ್ಮ ರಿಯಲ್ ಎಸ್ಟೇಟ್ ಆಫೀಸ್ ಆಗಿದ್ಯಾ? ಮೇಕೆದಾಟು ಪಾದಯಾತ್ರೆ ಅದು ಕಾಂಗ್ರೆಸ್ ಜಾತ್ರೆ, ರಾಜಕೀಯಕ್ಕೆ ನೀವು ನಡೆಸಿದ ಯಾತ್ರೆ. ಕಾಂಗ್ರೆಸ್ ಜಾತ್ರೆಗೆ ಬರಲು, ಕಾಂಗ್ರೆಸ್ ನಾಯಕರ ಫೋಟೋ ಇರುವ ಯಾತ್ರೆಯಲ್ಲಿ ಭಾಗವಹಿಸಲು ಸುದೀಪ್, ಶಿವಣ್ಣ, ಯಶ್ ಏನೂ ನಿಮ್ಮ ಪಾರ್ಟಿ ಸದಸ್ಯರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ನೀವು ಮೇಕೆದಾಟು ಯಾತ್ರೆ ಮಾಡಿ ನಾನು ಹೋರಾಟಕ್ಕೆ ಬರುತ್ತೇನೆ. ನಮ್ಮ ಕಾರ್ಯಕರ್ತರು ಬರುತ್ತಾರೆ. ಕಾಂಗ್ರೆಸ್ ಧ್ವಜ ಇಲ್ಲದೆ ಯಾತ್ರೆ ಮಾಡಿ ನಾವೆಲ್ಲರೂ ಬರುತ್ತೇವೆ. ಡಿಕೆಶಿ ಅವರೇ ನಟು ಬೋಲ್ಟ್ ನಿಮ್ಮ ಬ್ರದರ್ಸ್ ಮಾತಾಡುವ ಭಾಷೆ. ಅದೇ ಭಾಷೆ ನೀವು ಪ್ರಯೋಗ ಮಾಡಿದ್ದಿರಿ. ಡಿಕೆಶಿ ಅವರೇ ಹುಲಿ ಏರಿದ್ದೀರಿ. ಜನ ಮರ್ಯಾದೆ ಕೊಡುತ್ತಿರುವುದು ಹುಲಿಗೆ ಹೊರತು ನಿಮಗಲ್ಲ. ದರ್ಪ ಬಿಟ್ಟುಬಿಡಿ. ಇಳಿದ ಮೇಲೆ ಅದೇ ಹುಲಿಯೆ ನಿಮ್ಮನ್ನು ತಿಂದು ಬಿಡುತ್ತದೆ ಎಚ್ಚರ ಇರಲಿ ಎಂದಿದ್ದಾರೆ.
ಶಾರುಖ್‌ಗೆ 3, ಸೈಫ್‌ಗೆ 4.. ಮುಸ್ಲಿಂ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸ್ತಿದ್ದಾರೆ ಎಂದ ಪ್ರತಾಪ್ ಸಿಂಹ!
ಕನ್ನಡ ಸಿನಿಮಾ ನಟರ ಬಗ್ಗೆ ಮಾತಾಡಬೇಡಿ. ನಟರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಯಶ್, ಶಿವಣ್ಣ, ಡಾಲಿ ಎಲ್ಲರೂ ಬೇರೆ ಕಡೆ ಹೋಗಿಯೂ ಕನ್ನಡದ ಹಿರಿಮೆ ಹೆಚ್ಚಿಸಿದ್ದಾರೆ. ಶಾಶ್ವತವಾಗಿ ನೀವೆನೂ ಅಧಿಕಾರದಲ್ಲಿ ಇರುತ್ತೀರಾ? ನಾವೂ ಕೂಡ ಮುಡಾ ಕ್ಲೀನ್‌ಗಾಗಿ ಮೈಸೂರು ಪಾದಯಾತ್ರೆ ಮಾಡಿದೆವು. ಅದಕ್ಕೆ ಸಿನಿಮಾ ನಟರು ಬರಲಿಲ್ಲ ಅಂತ ಕೇಳಿದ್ದೇವೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕೆಚ್ಚಲು ಕೊಯ್ಯುವ ಚಿತ್ರವೇ ಕಾಂಗ್ರೆಸ್ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ: ಪ್ರತಾಪ್ ಸಿಂಹ ಗೇಲಿ
ಸಿಎಂ ಮುಂದೆ ಸಚಿವರ ಕಚ್ಚಾಟ ವಿಚಾರವಾಗಿ ಮಾತನಾಡಿದ ಅವರು, ಬೀದಿ ನಾಟಕ ನಡೆಯುತ್ತಿದೆ, ಎಷ್ಟು ದಿನ ನಡೆಯುತ್ತದೆ ನಡೆಯಲಿ. ಸಚಿವ ಬೋಸರಾಜು,ಶರಣಪ್ರಕಾಶ್ ಸಿಎಂ ಮುಂದೆ ವಾಗ್ವಾದ ನಡೆಸಿದ್ದರು. ಐದು ವರ್ಷ ಅವರಿಗೆ ಅಧಿಕಾರ ಕೊಟ್ಟಾಗಿದೆ, ಏನೇನು ಮಾಡುತ್ತಾರೋ ಮಾಡಲಿ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.