ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ ತಮ್ಮ ವಿರುದ್ಧ ದಾಖಲಾದ FIR ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾಗಿ ಅವರು ಸಮರ್ಥಿಸಿಕೊಂಡಿದ್ದಾರೆ, ಸಿದ್ದರಾಮಯ್ಯ ಸರ್ಕಾರವು ತಮ್ಮ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.

ಮೈಸೂರು (ಫೆ.24): ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್‌ ಸಿಂಹ ತಮ್ಮ ವಿರುದ್ಧ ದಾಕಲು ಮಾಡಲಾಗಿರುವ ಎಫ್‌ಐಆರ್‌ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು. ಘಟನೆ ಬೆನ್ನಲೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆವು. ಪೊಲೀಸರ ಬಗ್ಗೆ ಮೆಚ್ವುಗೆ ಮಾತನಾಡಿದ್ದೆವು. ಧೈರ್ಯದಿಂದ ಇರಿ ಎಂದು ಹೇಳಿದ್ದೆವು. ಇದು ಪ್ರಚೋದನಕಾರಿ ವಿಚಾರವಾಗುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನನ್ನ ಮೇಲೆ ಹಲವು ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಈಗ ಉದಯಗಿರಿಯಲ್ಲಿ ಎಫ್‌ಐಆರ್‌ ಮಾಡಿದ್ದಾರೆ. ಈ ರೀತಿ ಸಾಲು ಎಫ್.ಐ.ಆರ್ ಹಾಕಿ ಆತ್ಮಸ್ಥೈರ್ಯ ಕುಗ್ಗಿಸಬೇಕು, ಮನೆಯಿಂದ ಹೊರಬರಬಾರದು ಅನ್ನೋ ಉದ್ದೇಶದಿಂದ ಈ ಕೆಲಸವಾಗುತ್ತಿದೆ ಎಂಧು ಪ್ರತಾಪ್‌ ಸಿಂಹ ದೂರಿದ್ದಾರೆ.

ನಾನು ಪೊಲೀಸರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪ್ರಚೋದನೆ ಮಾಡಿಲ್ಲ. ಒಬ್ಬ ಮುಲ್ಲ ಪ್ರಚೋದನೆ ಮಾಡಿದ್ದರೂ ಯಾಕೆ ಅರೆಸ್ಟ್ ಮಾಡಿಲ್ಲ ಅಂತ ಕೇಳಿದ್ದೇನೆ ಇದು ಪ್ರಚೋದನಕಾರಿಯೇ? ಮುಸ್ಲಿಮರು ಪುರುಸೊತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಾರೆ ಎಂದಿದ್ದೇನೆ ಇದು ಪ್ರಚೋದನಕಾರಿಯೇ? ನಿಮ್ಮ‌ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ. ನಿಮ್ಮ ಮನೆಯಲ್ಲಿ ಒಂದು ಎರಡು ಮಕ್ಕಳಿರೋ ಎಷ್ಟು ಜನ ಇದ್ದಾರೆ ಹೇಳಿ. ನಾನು ಸತ್ಯ ಹೇಳಿದ್ದೇನೆ ಎಂದು ಪ್ರತಾಪ್‌ ಸಿಂಹ ಹರಿಹಾಯ್ದಿದ್ದಾರೆ.

ಶಾರುಖ್ ಖಾನ್ ಗೆ ಮೂರು‌ ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್ ಗೆ 4 ಮಕ್ಕಳಿದ್ದಾರೆ. ನಿಮ್ಮ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಜನೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದು ಹೇಳಿದ್ದೇನೆ. ಮುಸ್ಲಿಮರು ಮಕ್ಕಳನ್ನ ದೇವರ ಕೊಟ್ಟ ಅಂತ ಹೇಳುತ್ತೀರಿ. ನಿಮ್ಮ ಮಕ್ಕಳನ್ನ ದೇವರೆ ನೋಡಿಕೊಳ್ಳಲಿ. ಸರ್ಕಾರ ಯಾಕೆ ನೋಡಿಕೊಳ್ಳಬೇಕು? ಸರ್ಕಾರ ಯಾಕೆ ಪುಕ್ಕಟೆ ನೋಡಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.

ಉದಯಗಿರಿ ಪೊಲೀಸ್‌ ಠಾಣೆಗೆ ಕಲ್ಲೆಸದವರು ಅಮಾಯಕರು, ಬೇಲ್‌ ಕೊಡಿಸಲು ಹೋದ ಅಬ್ದುಲ್‌ ರಜಾಕ್‌!

ಅತಿಹೆಚ್ವು ತೆರಿಗೆ ಕಟ್ಟುವವರು ಹಿಂದೂಗಳು. ಆದರೆ ಸೌಲಭ್ಯ ಮುಸ್ಲಿಮರಿಗೆ ಸಿಗುತ್ತಿದೆ. ಸಂಖ್ಯೆ ಬಲ ಹೆಚ್ಚು ಮಾಡಿ ತೊಂದರೆ ಕೊಡುತ್ತಿದ್ದೀರಿ. ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದೀರಿ ಅಂತ ಹೇಳಿದ್ದೇನೆ. ಸ್ವಾತಂತ್ರ್ಯ ಬಂದಾಗ ಎಷ್ಟು ಜನ ಇದ್ರಿ, ಈಗ ಎಷ್ಟಿದ್ದೀರಿ ಅನ್ನೋದನ್ನ ನೋಡಿಕೊಳ್ಳಿ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳು ಜನಸಂಖ್ಯೆ ಕಡಿಮೆಯಾಗಿದೆ. ಸತ್ಯ ಹೇಳಿರೋದು ಪ್ರಚೋದನೆ ಹೇಗಾಗುತ್ತೆ. ನಿಯಂತ್ರಣದಿಂದ ಮಕ್ಕಳು ಹುಟ್ಟಿಸಿ, ಅವರಿಗೆ ವಿದ್ಯಾಭ್ಯಾಸ ಕೊಡಿ ಅಂತ ಕಿವಿ ಮಾತು ಹೇಳಿದ್ದೇನೆ. ನಿಮ್ಮ ಶಕ್ತಿಯನುಸಾರವಾಗಿ ಮಕ್ಕಳನ್ನು ಹುಟ್ಟಿಸಿ ಅಂತ ಹೇಳಿದ್ದೇನೆ. ಇದು ಪ್ರಚೋದನಕಾರಿ ಹೇಳಿಕೆಯಲ್ಲ. ನಾನು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತೇನೆ. ನನ್ನ ಧ್ವನಿ ಅಡಗಿಸಬೇಕು ಎಂದು ವ್ಯವಸ್ಥಿತ ಪ್ರಯತ್ನ ಕಳೆದ 10 ವರ್ಷದಿಂದಲೂ ನಡೆದಿದೆ.ಈಗಲೂ ನಡೆಯುತ್ತಿದೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಮುಡಾ ಹಗರಣ ₹300 ಕೋಟಿ ಆಸ್ತಿ ಇ.ಡಿ ವಶಕ್ಕೆ: ತನಿಖೆ ಬಳಿಕ ರಾಜೀನಾಮೆ ಎಂದ ಸಿದ್ದರಾಮಯ್ಯ ಈಗಲಾದ್ರೂ ಕೊಡ್ತಾರಾ? - ಯದುವೀರ್ ಒಡೆಯರ್