Asianet Suvarna News Asianet Suvarna News

ದೇವೇಗೌಡರಿಗೆ ಅವಮಾನ ಕೇಸ್, ಪ್ರಶಾಂತ್ ಸಂಬರ್ಗಿಗೆ ಪೊಲೀಸರ ಎಚ್ಚರಿಕೆ

ಮಾಜಿ ಪ್ರಧಾನಿ ದೇವೆಗೌಡರಿಗೆ ಅಪಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು  ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಪೊಲೀಸ್ ಠಾಣೆಗೆ ತೆರಳಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

prashanth sambargi visit police station about his social media post against HD Deve Gowda gow
Author
First Published Apr 5, 2023, 6:48 PM IST

ಬೆಂಗಳೂರು (ಮಾ.25): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಕರಣವನ್ನು ಟೀಕೆ ಮಾಡುವ ಭರದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅವರು ಮಾಜಿ ಪ್ರಧಾನಿ ದೇವೆಗೌಡರಿಗೆ ಅಪಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೆಗೌಡರ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಶ್ರೀರಾಮ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಹಿನ್ನೆಲೆಯಲ್ಲಿ ಏ.5ರಂದು ಪ್ರಶಾಂತ್ ಸಂಬರ್ಗಿ ಅವರನ್ನು ವಿಚಾರಣೆಗೆ ಕರೆದಿದ್ದ ಪೊಲೀಸರು ವಿಚಾರಣೆ ನಡೆಸಿ ಪ್ರಶಾಂತ್ ಸಂಬರ್ಗಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಜೊತೆಗೆ ಒಂದು ಲಕ್ಷ ರೂ. ಬಾಂಡ್ ಬರೆಸಿಕೊಂಡು ಕಳುಹಿಸಿದ್ದಾರೆ.

ಬಿಜೆಪಿ ಮುಖಂಡ Yogesh Gowda ಹತ್ಯೆ ಪ್ರಕರಣ, ಬಿರಾದಾರ್‌ ಮಾಫಿ ಸಾಕ್ಷಿಗೆ ಹೈಕೋರ್ಟ್ ಒಪ್ಪಿಗೆ

ಏನಿದು ಪ್ರಕರಣ?
ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಪದೇ ಪದೆ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದ Prashanth Sambargi  ವಿರುದ್ಧ, ಚುನಾವಣಾ ಆಯುಕ್ತರ ಮೂಲಕ ಸೈಬರ್ ಕ್ರೈಂ ಡಿಸಿಪಿ ಅವರಿಗೆ ಸಂಬರ್ಗಿಯ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಂಬರ್ಗಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿತ್ತು. ಜೆಡಿಎಸ್ ಲೀಗಲ್ ಸೆಲ್‌ನಿಂದ ದೂರು ದಾಖಲಾಗಿತ್ತು. ಡಿಸಿಪಿ ಶ್ರೀನಿವಾಸ‌ಗೌಡ ಅವರಿಗೆ ಈ ಸಂಬಂಧ ಜೆಡಿಎಸ್  ನಿಯೋಗ ದೂರು ಸಲ್ಲಿಸಿತ್ತು.

ಮೋದಿ ಸರ್‌ನೇಮ್‌ ಕೇಸ್‌: 'ಗೌಡ್ರ' ಜೇನುಗೂಡಿಗೆ ಕಲ್ಲು ಹೊಡೆದ ಪ್ರಶಾಂತ್ ಸಂಬರ್ಗಿ!

ಸಂಬರ್ಗಿ ಪೋಸ್ಟ್‌ನಲ್ಲಿ ಏನಿತ್ತು?
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದು ಬಗ್ಗೆ ಬರೆದುಕೊಂಡಿದ್ದ ಪ್ರಶಾಂತ್ ಸಂಬರ್ಗಿ,  ದೇವೆಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೇ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದ್ದಕ್ಕೆ ದೇವೆಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೋ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ವ್ಯಾಪಕ ಟೀಕೆ ಬೆನ್ನಲ್ಲೇ ಕ್ಷಮೆ ಕೇಳಿದ್ದರು.

Follow Us:
Download App:
  • android
  • ios