ಮೋದಿ ಸರ್‌ನೇಮ್ ಕೇಸ್: 'ಗೌಡ್ರ' ಜೇನುಗೂಡಿಗೆ ಕಲ್ಲು ಹೊಡೆದ ಪ್ರಶಾಂತ್ ಸಂಬರ್ಗಿ!
ಬೆಂಗಳೂರು (ಮಾ.25): ರಾಹುಲ್ ಗಾಂಧಿ ಪ್ರಕರಣ ಟೀಕೆ ಮಾಡುವ ಭರದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅವರು ಮಾಜಿ ಪ್ರದಾನಿ ದೇವೆಗೌಡರಿಗೆ ಅಪಮಾನ ಮಾಡಿದ್ದು, ಸಂಬರ್ಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗೆ ದೇವೆಗೌಡರ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ದ ಜೆಡಿಎಸ್ ಲೀಗಲ್ ಸೆಲ್‌ನಿಂದ ದೂರು ದಾಖಲಾಗಿದೆ. ಡಿಸಿಪಿ ಶ್ರೀನಿವಾಸಗೌಡ ಅವರಿಗೆ ಈ ಸಂಬಂಧ ಜೆಡಿಎಸ್ ನಿಯೋಗ ದೂರು ಸಲ್ಲಿಸಿದೆ.
ದೇವೇಗೌಡರು ಮತ್ತು ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಪದೇ ಪದೆ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದ Prashanth Sambargi ವಿರುದ್ಧ, ಚುನಾವಣಾ ಆಯುಕ್ತರ ಮೂಲಕ ಸೈಬರ್ ಕ್ರೈಂ ಡಿಸಿಪಿ ಅವರಿಗೆ ಸಂಬರ್ಗಿ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಂಬರ್ಗಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ.
ಸಂಬರ್ಗಿ ಪೋಸ್ಟ್‌ನಲ್ಲಿ ಏನಿದೆ?
ದೇವೆಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದ್ದಕ್ಕೆ ದೇವೆಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೋ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಬರ್ಗಿ.
Prashanth Sambargi
ಈ ಸಮಯದಲ್ಲಿ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ಪಿ ರಂಗನಾಥ್ ಮತ್ತು ಜೆಡಿಎಸ್ ವಕ್ತಾರರಾದ ಗಂಗಾಧರ ಮೂರ್ತಿ ಸೇರಿದಂತೆ ಹಲವಾರು ವಕೀಲರು ಹಾಜರಿದ್ದರು.
ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದು ಬಗ್ಗೆ ಬರೆದುಕೊಂಡಿರುವ ಸಂಬರ್ಗಿ ಕಾಂಗ್ರೆಸ್ ಯೋಜನೆಯ ಪ್ರಥಮ ಫಲಾನುಭವಿ ರಾಹುಲ್ ಗಾಂಧಿ ಎಂದು ಕೂಡ ಹೇಳಿದ್ದಾರೆ. ಸಂಬರ್ಗಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿದ್ದಾರೆ. "ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಪೋಸ್ಟ್ ಅನ್ನು ಅಳಿಸುತ್ತೇನೆ. ನಮ್ಮ ಒಕ್ಕಲಿಗ ಸಮುದಾಯ ಮತ್ತು ಮುಖಂಡರ ಬಗ್ಗೆ ನನಗೆ ಅಪಾರ ಗೌರವವಿದೆ" ಎಂದು ಬರೆದುಕೊಂಡಿದ್ದಾರೆ.