Anti Conversion Bill:ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್
* ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸುನಗ ಗ್ರಾಮಕ್ಕೆ ಪ್ರಮೋದ್ ಮುತಾಲಿಕ್ ಭೇಟಿ
* ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್
* ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗೆ ಆಕ್ರೋಶ
ಬಾಗಲಕೋಟೆ, (ಡಿ.12): ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಇದ್ದರೂ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ತಪ್ಪುತ್ತಿಲ್ಲ. ಮತಾಂತರ, ಗೋಹತ್ಯೆ ವಿರುದ್ಧ ಸೂಕ್ತ ಕ್ರಮವಾಗಲೇಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಆಗ್ರಹಿಸಿದ್ದಾರೆ.
ಇಂದು (ಡಿ.12) ಬಾಗಲಕೋಟೆ(Bagalakot) ಜಿಲ್ಲೆ ಬೀಳಗಿ ತಾಲೂಕಿನ ಸುನಗ ಗ್ರಾಮಕ್ಕೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಮಂಗಳೂರಿನಲ್ಲಿ (Mangaluru) ಮೃತಪಟ್ಟ ನಾಗೇಶನ ತಂದೆ- ತಾಯಿಗೆ ಸಾಂತ್ವನ ಹೇಳಿದರು.
ಘಟನೆ ಹಿನ್ನೆಲೆ ಮೃತ ನಾಗೇಶನ ಪಾಲಕರಿಂದ ಮುತಾಲಿಕ್ ಮಾಹಿತಿ ಪಡೆದಿದ್ದಾರೆ. ಪೋಲಿಸರ ಮಾಹಿತಿಯಂತೆ ನಾಲ್ವರ ಆತ್ಮಹತ್ಯೆಗೆ ಕಾರಣ ಆದವರ ವಿರುದ್ಧ ಕೇಸ್ ದಾಖಲಿಸುವುದಾಗಿ ಮುತಾಲಿಕ್ ಹೇಳಿದರು.
Mangalore Family Suicide: ಬಲವಂತದ ಮತಾಂತರ, ಮರು ಮದುವೆ ಆಮೀಷ, ಇಡೀ ಕುಟುಂಬವೇ ಬಲಿ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸರ್ಕಾರದಲ್ಲಿ ಈ ರೀತಿಯ ಘಟನೆ ಸರಿಯಲ್ಲ. ಪೊಲೀಸರು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು. ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲಿ. ಕಾಯ್ದೆ ಜಾರಿಯಾಗದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಘಟನೆ ಹಿನ್ನೆಲೆ
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಗರದ ಮಾರ್ಗನ್ಸ್ ಸ್ಟ್ರೀಟ್‌ನಲ್ಲಿ ಇಂದು(ಬುಧವಾರ) ನಡೆದಿದೆ. ನಾಗೇಶ್ ಶೇರಿಗುಪ್ಪಿ(30), ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಹಾಗೂ ಸಮರ್ಥ್(4) ಎಂಬುವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಮೃತರೆಲ್ಲೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದವರು ಎಂದು ತಿಳಿದು ಬಂದಿದೆ. ನಾಗೇಶ್ ಶೇರಿಗುಪ್ಪಿ ಚಾಲಕ ವೃತ್ತಿ ಮಾಡಿಕೊಂಡು, ಪತ್ನಿ ವಿಜಯಲಕ್ಷ್ಮಿ ಸೆಕ್ಯುರಿಟಿ ಕೆಲಸ ಜೀವನ ಸಾಗಿಸುತ್ತಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪತ್ನಿ ಮತ್ತು ಮಕ್ಕಳಿಗೆ ವಿಷವಿಕ್ಕಿ ಪತಿ ನಾಗೇಶ್ ನೇಣಿಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಮಂಗಳೂರಿನ ಮಾರ್ಗನ್ಸ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್‌ಗೆ (Suicide) ಟ್ವಿಸ್ಟ್ ಸಿಗುತ್ತಿದೆ. ಹೆಂಡತಿ, ಮಕ್ಕಳನ್ನು ಕೊಂದು ಪತಿ ನಾಗೇಶ್ ನೇಣಿಗೆ ಶರಣಾಗಿದ್ದರು. ಬಲವಂತದ ಮತಾಂತರಕ್ಕೆ (Conversion) ಇಡೀ ಕುಟುಂಬ ಬಲಿಯಾಗಿದೆ.
ಮತಾಂತರಕ್ಕಾಗಿ ಮದುವೆ ಜಾಲ ಬೀಸಿದ್ದಳು ನೂರ್‌ಜಹಾನ್. ನೂರ್‌ಜಹಾನ್ ಬಳಿ ನಾಗೇಶ್ ಪತ್ನಿ ವಿಜಯಲಕ್ಷ್ಮೀ ಕೆಲಸಕ್ಕೆ ಹೋಗುತ್ತಿದ್ದಳು. ಆ ಸಂದರ್ಭದಲ್ಲಿ ವಿಜಯಲಕ್ಷ್ಮೀಗೆ ಮತಾಂತರದ ಮಂಕುಬೂದಿ ಎರಚಿದ್ಧಾಳೆ. ಪತಿ-ಪತ್ನಿಯರ ನಡುವಿನ ಜಗಳವನ್ನು ಬಳಸಿಕೊಂಡು, ನಾಗೇಶ್‌ಗೆ ಡಿವೋರ್ಸ್ ಕೊಡು. ಇಸ್ಲಾಂಗೆ ಮತಾಂತರವಾಗು, ಇನ್ನೊಂದು ಮದುವೆ ಮಾಡಿಸುತ್ತೇನೆ ಎಂದು ಆಮೀಷವೊಡ್ಡಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ನಾಗೇಶ್ ಪತ್ನಿ, ಮಕ್ಕಳಿಗೆ ವಿಷವಿಕ್ಕಿ, ತಾನು ನೇಣಿಗೆ ಶರಣಾಗಿದ್ದಾನೆ.