ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ, ಸವಾರರ ಪರದಾಟ ಒಂದೆಡೆಯಾದರೆ, ಅಪಾಯದ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನ ಹಲೆವೆಡೆ ಭಾರಿ ಮಳೆಯಾಗುತ್ತಿದೆ.
- Home
- News
- State
- State News Live: ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ
State News Live: ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ

ಬೆಂಗಳೂರು (ಅ.10): ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಸಂಚಲನ ಶುರುವಾಗಿದೆ. ಸಂಪುಟ ಪುನಾರಚನೆ ಸಂಭವನೀಯತೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಂತ್ರಿ ಸ್ಥಾನಕ್ಕಾಗಿ ಭರ್ಜರಿ ಲಾಬಿ ನಡೆಯುತ್ತಿದೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಸಭೆ ನಡೆಸಿ ಹಲವು ಮಂತ್ರಿಗಳು ಕಸರತ್ತು ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 10th October:ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ
Karnataka News Live 10th October:ಜಿಬಿಎ ಮೊದಲ ಸಭೆ, ಬಿಜೆಪಿ ನಾಯಕರು ಗೈರು, ವಿವಾದದ ನಡುವೆ ಬೆಂಗಳೂರಿನ ಭವಿಷ್ಯದತ್ತ ಹೆಜ್ಜೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ನಡೆಯಿತು. ಬಿಜೆಪಿ ಸದಸ್ಯರ ಗೈರುಹಾಜರಿಯ ನಡುವೆಯೂ, ನಗರ ಯೋಜನೆ, 5 ಹೊಸ ಪಾಲಿಕೆಗಳ ರಚನೆ ಹಾಗೂ ಆಡಳಿತಾತ್ಮಕ ಅಧಿಕಾರಗಳ ವರ್ಗಾವಣೆಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
Karnataka News Live 10th October:ಪಡಿತರ ಅಕ್ಕಿ ಕಳ್ಳಸಾಗಣೆಗೆ ಕಮೀಷನ್ ಕೇಳಿದ ಬಸವರಾಜ; ಲಾರಿ ಗುದ್ದಿ ಮಟಾಷ್ ಮಾಡಿದ ಅಷ್ಪಾಕ್ ಮುಲ್ಲಾ!
Karnataka News Live 10th October:ನಕ್ಷೆಗಳ ಭಾಗ ಆಗಿರದ ಪರಿವರ್ತಿತ ಜಮೀನಿನ ಸೈಟ್ ಖರೀದಿ ನಿಯಂತ್ರಿಸಿ - ಹೈಕೋರ್ಟ್
ಜಮೀನಿನಲ್ಲಿರುವ ನಿವೇಶನಗಳನ್ನು ಗ್ರಾಹಕರು ಖರೀದಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಹಿವಾಟುಗಳನ್ನುನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
Karnataka News Live 10th October:ನೊಬೆಲ್ ಗೆಲ್ಲದ ಟ್ರಂಪ್‌ಗೆ ತಾನು ಗೆದ್ದ ಪ್ರಶಸ್ತಿ ಅರ್ಪಿಸಿದ ಮಾರಿಯಾ ಕೊರಿನಾ ಮಚಾದೊ!
2025ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ, ತಮ್ಮ ಪ್ರಶಸ್ತಿಯನ್ನು ವೆನೆಜುವೆಲಾದ ಜನತೆ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸಿದ್ದಾರೆ.
Karnataka News Live 10th October:ಸಂಪುಟ ಪುನಾರಚನೆ ವಿಚಾರ ಗೊತ್ತಿಲ್ಲ ಸಲಹೆ ಕೇಳಿದರೆ ಕೊಡುತ್ತೇನೆ - ಡಿ.ಕೆ.ಶಿವಕುಮಾರ್
ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಸಿಎಂಗೆ ಬಿಟ್ಟ ವಿಚಾರ. ನನ್ನ ಜೊತೆ ಚರ್ಚಿಸಿದರೆ ನನ್ನ ಸಲಹೆ ಕೊಡುತ್ತೇನೆ ಅಷ್ಟೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
Karnataka News Live 10th October:8 ಅಡಿ ಆಳದ ಗುಂಡಿಗೆ ಬಿದ್ದ ಕಾರು; ಇದು ಎಲ್ಲಿಯದ್ದೋ ಅಲ್ಲ, ನಮ್ಮ ಬೆಂಗಳೂರಿನ ಹೆಮ್ಮೆಯ ರಸ್ತೆಗುಂಡಿ!
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಬಳಿ, ಅವೈಜ್ಞಾನಿಕ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಕಾರೊಂದು ಬಿದ್ದು ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಈ ಮಾರ್ಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.
Karnataka News Live 10th October:ಹಾಸನಾಂಬೆ ದರ್ಶನ ಇದೇ ವರ್ಷ ಕೊನೆ, ಬ್ರಹ್ಮಾಂಡ ಗುರೂಜಿ ನುಡಿದ ಸ್ಫೋಟಕ ಭವಿಷ್ಯ!
ಬ್ರಹ್ಮಾಂಡ ಗುರೂಜಿಯವರು, ಈ ವರ್ಷದ ಹಾಸನಾಂಬೆ ದರ್ಶನವೇ ಕೊನೆಯಾಗಲಿದ್ದು, ಭವಿಷ್ಯದಲ್ಲಿ ದೇವಿಯ ದರ್ಶನ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಸಿಎಂ ಸಿದ್ದರಾಮಯ್ಯನವರ ಆರೋಗ್ಯ, ಮುಂದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Karnataka News Live 10th October:ಅನುಭವ ಮಂಟಪ ಕಾಮಗಾರಿಗೆ 50 ಕೋಟಿ ಬಿಡುಗಡೆ - ಸಚಿವ ಈಶ್ವರ್ ಖಂಡ್ರೆ
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಸಂಬಂಧಿಸಿದಂತೆ 50 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
Karnataka News Live 10th October:ಹಾಸನಾಂಬೆ ಜಾತ್ರೆಗೆ ಬರೋರಿಗೆ KSRTC 10 ಟೂರ್ ಪ್ಯಾಕೇಜ್; 400 ರೂ.ನಿಂದ ಪ್ರವಾಸ ಭಾಗ್ಯ ಆರಂಭ!
Karnataka News Live 10th October:ಹಸಿರು ಕ್ರಾಂತಿಗೆ ಕೃಷಿ ತಜ್ಞರ ಕೊಡುಗೆ ಅಪಾರ - ಗೃಹ ಸಚಿವ ಪರಮೇಶ್ವರ್
ದೇಶದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಲಕ್ಷಾಂತರ ಜನರ ಹಸಿವು ತಪ್ಪಿಸಿ ಬಡತನದ ವ್ಯಾಪಕ ನಿರ್ಮೂಲನೆಯಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
Karnataka News Live 10th October:ವಿಷ್ಣುವರ್ಧನ್, ಚಿರು, ಬಾಲಯ್ಯ ಜೊತೆ ನಟಿಸಿದ್ದ ಭಾನುಪ್ರಿಯಾ, ನಾಗಾರ್ಜುನ ಜೊತೆ ಯಾಕೆ ನಟಿಸಲಿಲ್ಲ?
ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ಸೀನಿಯರ್ ನಟಿ ಭಾನುಪ್ರಿಯಾ, ಟಾಲಿವುಡ್‌ನಲ್ಲಿ ನಾಗಾರ್ಜುನ ಜೊತೆ ಮಾತ್ರ ನಟಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವೇನು? ಈ ಬಗ್ಗೆ ಭಾನುಪ್ರಿಯಾ ಹೇಳಿದ್ದೇನು?
Karnataka News Live 10th October:ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್
Bigg Boss Season 8 Contestant: ಬಿಗ್‌ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಗಾಜಿನ ಗ್ಲಾಸ್ ಒಡೆದಿದ್ದರು. ಈ ತಪ್ಪಿಗೆ ಬಿಗ್‌ಬಾಸ್ ತುಂಬಾನೇ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುದ್ದರು. ಈ ಪ್ರೀತಿಯ ತುಂಟಾಟದ ಶಿಕ್ಷೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
Karnataka News Live 10th October:ನಟ ದರ್ಶನ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ ಸೆಷನ್ಸ್ ಕೋರ್ಟ್, ಮುಂದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ದೈಹಿಕ ಹಿಂಸೆಯ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ಸೆಷನ್ಸ್ ಕೋರ್ಟ್, ಜೈಲಿನ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ.
Karnataka News Live 10th October:ರಾಜ್ಯದಲ್ಲಿ ಕೆರೆ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು - ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಕೆರೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಆ ಜಾಗ ಬಿಟ್ಟುಕೊಟ್ಟರೆ ಒಳಿತು. ತಪ್ಪಿದರೆ ಅಧಿಕಾರಿಗಳು ಮುಲಾಜಿಲ್ಲದೆ ಅಂಥ ಒತ್ತುವರಿ ತೆರವು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Karnataka News Live 10th October:ಕಿದ್ವಾಯಿ ಆಸ್ಪತ್ರೆಯಲ್ಲಿ 450 ಹಾಸಿಗೆಯ ಹೊಸ ಬ್ಲಾಕ್ - ಸಚಿವ ಶರಣ ಪ್ರಕಾಶ್ ಪಾಟೀಲ್
ರಾಜಧಾನಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
Karnataka News Live 10th October:ಹಡಗಲಿ ತಾ. ಹೊಳಲು ಉದ್ಯಮಿ ಕಿಡ್ನಾಪ್ - ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು! ಆಡಿಯೋ ವೈರಲ್
ವಿಜಯನಗರ ಜಿಲ್ಲೆಯ ಹೊಳಲು ಗ್ರಾಮದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಉದ್ಯಮಿ ಮಂಜುನಾಥ ಶೇಜವಾಡ್ಕರ್ ಅವರನ್ನು ಅಪಹರಿಸಲಾಗಿದೆ. ಅಪಹರಣಕಾರರು 5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.
Karnataka News Live 10th October:ಉದ್ದಿಮೆಗಳ ಮೇಲ್ದರ್ಜೆಗೇರಿಸಿ ಹೆಚ್ಚು ನೌಕರಿ ಸೃಷ್ಟಿಸಿ - ಸಚಿವ ಚಲುವರಾಯಸ್ವಾಮಿ
ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧನೆಗೆ ಒಳಪಡಿಸುವ ಮೂಲಕ ಉದ್ದಿಮೆಗಳನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಯತ್ನಿಸಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
Karnataka News Live 10th October:ಡಿಕೆಶಿ ಸಿಎಂ ಆಗಬೇಕು ಅನ್ನೋದು ನನ್ನ ಅಭಿಲಾಷೆ - ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚಾರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದ್ದು, ಆಗುತ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.
Karnataka News Live 10th October:ಬೆಂಗಳೂರಿನ ಟ್ರಾಫಿಕ್ ನಮ್ಮ ಯಶಸ್ಸಿನ ಪ್ರತಿಬಿಂಬ, ಸವಾಲಿನ ಸಂಕೇತ; ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ಬೆಂಗಳೂರಿನ ಟ್ರಾಫಿಕ್ ನಗರದ ಯಶಸ್ಸಿನ ಸಂಕೇತವಾದರೂ, ಅದು ಗಂಭೀರ ಸವಾಲುಗಳನ್ನು ಒಡ್ಡುತ್ತಿದೆ. 1.2 ಕೋಟಿಗೂ ಅಧಿಕ ವಾಹನಗಳಿಂದ ಮೂಲಸೌಕರ್ಯದ ಮೇಲೆ ಉಂಟಾಗಿರುವ ಒತ್ತಡವನ್ನು ನಿವಾರಿಸಲು ಸರ್ಕಾರವು ತಂತ್ರಜ್ಞಾನ ಆಧಾರಿತ ಪರಿಹಾರಗಳತ್ತ ಗಮನ ಹರಿಸಿದೆ ಎಂದರು.