ಬೆಂಗಳೂರು(ನ.02): ಕಳಪೆ ಕಾಮಗಾರಿಯ ಪರಿಣಾಮವಾಗಿ ನಗರದ ಸುಮನ ಹಳ್ಳಿ ಮೇಲ್ಸೇತುವೆ ಮಧ್ಯಭಾಗದಲ್ಲಿ ಗುಂಡಿಯೊಂದು ಕಾಣಿಸಿಕೊಂಡು, ಆತಂಕ ಸೃಷ್ಟಿಯಾಗಿತ್ತು. 2010ರಲ್ಲಿ ಬಿಡಿಎ ನಿರ್ಮಾಣ ಮಾಡಿದ್ದ ಈ ಮೇಲ್ಸೆತುವೆಯ ಕಾಂಕ್ರಿಂಟ್ ಕಿತ್ತುಹೋಗಿದ್ದು, ತಳ ಭಾಗ ಕಾಣುವಂತಹ ಗುಂಡಿ ನಿರ್ಮಾಣವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿತ್ತು.

ಶುಕ್ರವಾರ ಸಂಜೆ ವೇಳೆಗೆ ಅಪಾಯಕಾರಿಯಾಗಿ ಗುಂಡಿ ನಿರ್ಮಾಣವಾಗಿರವುದನ್ನು ಗಮನಿಸಿದ ವಾಹನ ಸವಾರರು ಈ ಬಗ್ಗೆ ಮಾಹಿತಿಯನ್ನು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಡಿ ಬಳಿ ಬ್ಯಾರಿಕೇಡ್ ಅಡ್ಡವಾಗಿಟ್ಟರು. ಇದರಿಂದ ವಾಹನ ದಟ್ಟಣೆ ನಿರ್ಮಾಣವಾಗಿತ್ತು.

ಫುಡ್ ಡೆಲಿವರಿ ಗರ್ಲ್ ಈಗ ಮಂಗಳೂರು ಪಾಲಿಕೆ ಅಭ್ಯರ್ಥಿ

ಸಂಚಾರ ಸಂಪೂರ್ಣ ಬಂದ್: ವಿಪರೀತ ವಾಹನ ದಟ್ಟಣೆ ನಿರ್ಮಾಣವಾಗಿದ್ದರಿಂದ ಹದಗೆಟ್ಟ ರಸ್ತೆಯಲ್ಲೇ, ಗುಂಡಿಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡ ಲಾಗಿತ್ತು. ಇದರಿಂದ ಮೇಲ್ಸೆತುವೆಯ ಗುಂಡಿಯಿದ್ದ ಭಾಗದಲ್ಲಿ ಕುಸಿತದ ಅಪಾಯ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ವಾಹನ ದಟ್ಟಣೆ ತುಸು ಕಡಿಮೆಯಾಗುತ್ತಿದ್ದಂತೆಯೇ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ರಾತ್ರಿ 10ರ ನಂತರ ಸಂಪೂರ್ಣವಾಗಿ ನಿಷೇಧಿಸಿದರು. ಮೇಲ್ಸೇತುವೆ ಮಾರ್ಗ ರದ್ದಾದ ಹಿನ್ನೆಲೆಯಲ್ಲಿ ಆ ಸೇತುವೆಯ ಕೆಳಭಾಗದಿಂದಲೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ರಾತ್ರೋ ರಾತ್ರಿ ಕಳ್ಳನಂತೆ ಕೃಷಿ ಭೂಮಿಯಲ್ಲಿ ಕಸ ಎಸೆದು ಬರ್ತಿದೆ BBMP ಲಾರಿ..!

ಬಿಡಿಎ 2010 ನಿರ್ಮಿಸಿರುವ ಈ ಮೇಲ್ಸುತುವೆಯ ಈ ಸ್ಥಿತಿಗೆ ಕಳಪೆ ಕಾಮಗಾರಿಯೇ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಮಾಹಿತಿಗಾಗಿ ಬಿಡಿಎ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕಳೆದ 2 ವರ್ಷಗಳ ಹಿಂದೆಯೇ ಸುಮನಹಳ್ಳಿ ರಿಂಗ್ ರಸ್ತೆಯ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಲಾಗಿದೆ. ಅದರ ಮೇಲ್ವಿಚಾರಣೆಯನ್ನು ಅವರೇ ನೋಡಿಕೊಳ್ಳುತ್ತಾರೆ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ, ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ.