ಹೊಸ ಗೆಟಪ್‌ನಲ್ಲಿ ರಾಜವೀರ ಮದಕರಿ ನಾಯಕ: ಕಿಚ್ಚ ಸುದೀಪ್‌ರಿಂದ ಭಾವಚಿತ್ರ ಅನಾವರಣ
ನಾಡ ದೊರೆ ರಾಜವೀರ ಮದಕರಿನಾಯಕಗೆ ಈಗ ಹೊಸ ಗೆಟಪ್ ಬಂದಿದೆ. ಇದುವರೆಗೂ ಕುದುರೆ ಮೇಲೆ ಕುಳಿತ, ಆನೆಯನ್ನು ಪಳಗಿಸುತ್ತಿರುವ ದೃಶ್ಯದಲ್ಲಿ ಮಾತ್ರ ಕಾಣಸಿಗುತ್ತಿದ್ದ ಮದಕರಿನಾಯಕ ಇನ್ನು ಮೇಲೆ ಕೈಯಲ್ಲಿ ಗುರಾಣಿ ಹಿಡಿದ ಭಾವದೊಂದಿಗೆ ರಾರಾಜಿಸಲಿದ್ದಾನೆ.
ಚಿತ್ರದುರ್ಗ (ಅ.09): ನಾಡ ದೊರೆ ರಾಜವೀರ ಮದಕರಿನಾಯಕಗೆ ಈಗ ಹೊಸ ಗೆಟಪ್ ಬಂದಿದೆ. ಇದುವರೆಗೂ ಕುದುರೆ ಮೇಲೆ ಕುಳಿತ, ಆನೆಯನ್ನು ಪಳಗಿಸುತ್ತಿರುವ ದೃಶ್ಯದಲ್ಲಿ ಮಾತ್ರ ಕಾಣಸಿಗುತ್ತಿದ್ದ ಮದಕರಿನಾಯಕ ಇನ್ನು ಮೇಲೆ ಕೈಯಲ್ಲಿ ಗುರಾಣಿ ಹಿಡಿದ ಭಾವದೊಂದಿಗೆ ರಾರಾಜಿಸಲಿದ್ದಾನೆ. ಚಿತ್ರದುರ್ಗದ ಕಲಾವಿದ ಟಿ.ಎಂ.ವೀರೇಶ್ ತೈಲವರ್ಣದಲ್ಲಿ ಮದಕರಿನಾಯಕ ಭಾವಚಿತ್ರ ರಚಿಸಿದ್ದು ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಚಿತ್ರನಟ ಕಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಮದಕರಿನಾಯಕ ತಾರುಣ್ಯದಲ್ಲಿ ಇದ್ದ ಭಾವಚಿತ್ರ ಇದಾಗಿದ್ದು ಅನಾವರಣ ಮಾಡಿ ಚಿತ್ರ ವೀಕ್ಷಿಸಿದ ಕಿಚ್ಚ ಸುದೀಪ್ ಬೆರಗಾಗಿದ್ದಾರೆ.
ಇದೊಂದು ಅದ್ಭುತ ಭಾವಚಿತ್ರ. ತುಂಬಾ ಸಂತೋಷವಾಯಿತು. ಚಿತ್ರದುರ್ಗದಲ್ಲಿ ನಡೆಯಲಿರುವ ಮದಕರಿನಾಯಕ ಜಯಂತಿ ಸಂಭ್ರಮದಿಂದ ನೆರವೇರಲಿ ಎಂದು ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಬಿ.ಕಾಂತರಾಜ್, ನಾಯಕ ಸಮಾಜದವರೇ ಆದ ಚಿತ್ರನಟ ಸುದೀಪ್ ನೂತನ ಮದಕರಿನಾಯಕ ಭಾವಚಿತ್ರ ಬಿಡುಗಡೆಗೊಳಿಸಿರುವುದು ನಮಗೆಲ್ಲ ಹರ್ಷ ತಂದಿದೆ.ಶ್ರೀ ರಾಜವೀರ ಮದಕರಿನಾಯಕನ ಜಯಂತಿ ಅಂಗವಾಗಿ ಈ ಬಾರಿ ನೂತನವಾದ ಭಾವಚಿತ್ರ ಹೊರ ತರಬೇಕು ಎಂಬ ಉದ್ದೇಶದಿಂದ ಸಮಾಜದ ಅನೇಕ ಮುಖಂಡರ ಜೊತೆ ಚರ್ಚಿಸಲಾಗಿತ್ತು.
BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್: ಸ್ಫರ್ಧಿಗಳಿಗೆ ಶಾಕ್!
ನಂತರ ಇತಿಹಾಸಕಾರರು, ಸಾಹಿತಿಗಳು, ಕಲಾವಿದರು, ಸಂಶೋಧಕರಾದ ಬಿ.ಎಲ್.ವೇಣು, ಲಕ್ಷ್ಮಣ ತೆಲಗಾವಿ, ಕಿರಣ್ ಕುಮಾರ್ ಅವರನ್ನು ಸಂಪರ್ಕಿಸಿದ ನಂತರ ಮದಕರಿನಾಯಕರ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡಲು ತೀರ್ಮಾನಿಸಲಾಯಿತೆಂದರು. ಮದಕರಿನಾಯಕ ವೀರ ಮರಣದ ಸಂದರ್ಭದಲ್ಲಿ ಆತನ ವಯಸ್ಸು ಎಷ್ಟಿತ್ತು, ಏನೆಲ್ಲ ಆಭರಣ, ಉಡುಪು ತೊಡುತ್ತಿದ್ದ, ದೇಹದ ಚಿತ್ರ ಹೇಗಿತ್ತು ಎಂಬ ಬಗ್ಗೆಮಾಹಿತಿ ಪಡೆಯಲಾಯಿತು.ನಂತರ ಚಿತ್ರದುರ್ಗ ನಗರದ ಹೆಸರಾಂತ ಕಲಾವಿದ ಕ್ರಿಯೇಟಿವ್ ವೀರೇಶ್ ಅವರ ಬಳಿ ತೈಲವರ್ಣದ ಚಿತ್ರ ಬರೆದುಕೊಡುವಂತೆ ವಿನಂತಿಸಿದಾಗ ಒಪ್ಪಿಕೊಂಡರು.
Masala Dosa ತಿನ್ನೋ ಬದಲು Idly ತಿಂತಿದ್ದೀನಿ: ದಯವಿಟ್ಟು ಬೈಬೇಡಿ ಅಂದಿದ್ಯಾಕೆ ರುಕ್ಮಿಣಿ ವಸಂತ್!
ಸತತ 20 ದಿನಗಳ ಸಮಯದಲ್ಲಿ ರಾಜವೀರ ಮದಕರಿನಾಯಕ ಭಾವಚಿತ್ರವನ್ನು ಅದ್ಭುತವಾಗಿ ಚಿತ್ರಿಸಿಕೊಟ್ಟಿದ್ದಾರೆ. ಚಿತ್ರ ಬರೆದ ಕ್ರಿಯೇಟಿವ್ ವೀರೇಶ್ ಅವರಿಗೆ ನಮ್ಮ ಸಮಾಜದ ಪರವಾಗಿ ಧನ್ಯವಾದಗಳು ಅರ್ಪಿಸುತ್ತನೆ ಎಂದು ತಿಳಿಸಿದರು. ಭಾವಚಿತ್ರ ಬಿಡುಗಡೆ ವೇಳೆ ಚಿತ್ರದುರ್ಗ ನಗರಸಭೆ ಸದಸ್ಯ ದೀಪಕ್ , ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ ಕೃಷ್ಣಮೂರ್ತಿ,ಮುಖಂಡರಾದ ಅಂಜಿನಪ್ಪ, ಲಿಂಗನಾಯಕನಹಳ್ಳಿ ತಿಪ್ಪೇಸ್ವಾಮಿ, ಗೋಪಾಲ ಸ್ವಾಮಿ ನಾಯಕ, ತಿಪ್ಪೇಸ್ವಾಮಿ, ಅಹೋಬಲ ಟಿವಿಸ್ ಮಾಲೀಕ ಅರುಣ್ ಕುಮಾರ್, ದರ್ಶನ್ ಇಂಗಳದಾಳ್, ಬ್ಯಾಂಕ್ ಕಿರಣ್ ಕುಮಾರ್, ಗೀರೀಶ್,ಗುರುನಾಥ್ ಇದ್ದರು.