Masala Dosa ತಿನ್ನೋ ಬದಲು Idly ತಿಂತಿದ್ದೀನಿ: ದಯವಿಟ್ಟು ಬೈಬೇಡಿ ಅಂದಿದ್ಯಾಕೆ ರುಕ್ಮಿಣಿ ವಸಂತ್!
ಸಪ್ತಸಾಗರದಾಚೆ ಎಲ್ಲೋ ಚಿತ್ರದಿಂದ ಕನ್ನಡಿಗರ ಹೃದಯ ಗೆದ್ದ ಪುಟ್ಟಿ ಅಲಿಯಾಸ್ ರುಕ್ಮಿಣಿ ವಸಂತ್ ಸದ್ಯ ಬ್ಯಾಕ್‌ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ ಚಿತ್ರ ನಟಿ ರುಕ್ಮಿಣಿ ವಸಂತ್ ಅವರು ಸದ್ಯ ಟ್ರೆಂಡ್‌ನಲ್ಲಿರುವ ನಾಯಕಿ. ರಕ್ಷಿತ್ ಶೆಟ್ಟಿ ಜೊತೆ ಡ್ಯುಯೇಟ್ ಹಾಡಿದ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆ, ಮುದ್ದಾದ ನಗುವಿಗೆ ಫ್ಯಾನ್ಸ್ ಮನಸೋತಿದ್ದಾರೆ.
ಇದೀಗ ರುಕ್ಮಿಣಿ ವಸಂತ್ ಸಾಮಾಜಿಕ ಜಾಲತಾಣದಲ್ಲಿ ಹೊಟೇಲ್‌ನಲ್ಲಿ ಇಡ್ಲಿ ಸವಿಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, 'ಇದು ನನ್ನ ಸಂತೋಷದ ಸ್ಥಳ, ಮಸಾಲ ದೋಸೆ ತಿನ್ನೋ ಬದಲು ಇಡ್ಲಿ ತಿಂತಿದ್ದೀನಿ ಅಂತಾ ದಯವಿಟ್ಟು ಬೈಬೇಡಿ, ನನಗೆ ಇಡ್ಲಿ ಇಷ್ಟ ಎಂದು ಬರೆದುಕೊಂಡಿದ್ದಾರೆ.
ಈ ಮುಖಾಂತರ ರುಕ್ಮಿಣಿ ವಸಂತ್‌ಗೆ ಫೇವರೇಟ್ ಫುಡ್ ಇಡ್ಲಿ ಎಂಬುದು ಗೊತ್ತಾಗುತ್ತದೆ. ಈ ಪೋಟೋಗೆ ನೆಟ್ಟಿಗರು ಸಹ ನಮಗೂ ನಿಮ್ಮ ಹಾಗೆ ಇಡ್ಲಿ ಅಂದ್ರೆನೆ ಇಷ್ಟ ಪುಟ್ಟಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮುದ್ದು ಮುಖದ ಚೆಲುವೆ ರುಕ್ಮಿಣಿ ರಾಘವನ್ ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆಯ ನಟಿಯಾಗಿದ್ದು, ತನ್ನ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಬೀರ್‌ಬಲ್ ಚಿತ್ರದ ಮೂಲಕವೇ ರುಕ್ಮಿಣಿ ವಸಂತ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.
ಶ್ರೀಮುರಳಿ ಅಭಿನಯದ ಬಘೀರ ಚಿತ್ರದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾಗೆ ಸಂಬಂಧಿಸಿದ ಬೇರೆ ವಿಚಾರ ಇನ್ನೂ ಎಲ್ಲೂ ಏನೂ ರಿವೀಲ್ ಆಗಿಲ್ಲ. ಆದರೆ ಚಿತ್ರದ ಒಂದೇ ಒಂದು ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.