Asianet Suvarna News Asianet Suvarna News

ದಂಡ ಹಾಕೋದಷ್ಟೇ ಅಲ್ಲ, ಗುಂಡಿ ಮುಚ್ಚೋ ಕೆಲಸವೂ ಟ್ರಾಫಿಕ್ ಪೊಲೀಸರಿಗೆ

ಟ್ರಾಫಿಕ್ ಪೊಲೀಸರ ಹೆಗಲಿಗೆ ಹೊಸ ಜವಾಬ್ದಾರಿ | ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು ಹೊಸ ಪ್ಲಾನ್ ಮಾಡಿದ್ದು ಪೊಲೀಸ್ ಇಲಾಖೆಗೆ ಇನ್ನೊಂದು ಡ್ಯೂಟಿ

Police department to join hands with bbmp to fills Pothole in Bengaluru dpl
Author
Bangalore, First Published Jan 4, 2021, 2:03 PM IST

ಬೆಂಗಳೂರು(ಜ.04): ಟ್ರಾಫಿಕ್ ಪೊಲೀಸರಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಮುಂದೆ ದಂಡ ಹಾಕೋದರ ಜೊತೆಗೆ ಗುಂಡಿ ಮುಚ್ಚೋ ಕೆಲಸವನ್ನೂ ಪೊಲೀಸರು ಮಾಡಬೇಕಿದೆ.

"

ಮಾಸ್ಕ್ ಧರಿಸದವರಿಗೆ ದಂಡ ಹಾಕೋ ಮೂಲಕ ಬಿಬಿಎಂಪಿ ಗೆ ಸಹಾಯಕವಾಗಿದ್ದ ಟ್ರಾಫಿಕ್ ಪೊಲೀಸರು ಇದೀಗ ಮತ್ತೊಮ್ಮೆ ಪಾಲಿಕೆಗೆ ನೆರವಾಗಲಿದ್ದಾರೆ. 
ಟ್ರಾಫಿಕ್ ಪೊಲೀಸರನ್ನು ಪಾಲಿಕೆ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಟ್ರಾಫಿಕ್ ಕಂಟ್ರೋಲ್ ಮಾಡುವುದರ ಜೊತೆಜೊತೆಗೆ ರೂಲ್ಸ್ ಬ್ರೇಕ್‌ಮಾಡೋರಿಗೆ ದಂಡ ಹಾಕೋದರ ಜೊತೆಗೆ ಹೊಸ ಕೆಲಸ ಸೇರಿಸಲಾಗಿದೆ.

KRS ರೈಲ್ವೆ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ರೈಲು..! ಇಲ್ನೋಡಿ ಫೋಟೋಸ್

ಪಾಲಿಕೆ ಗುಂಡಿ ಹುಡುಕೋ ಜವಬ್ದಾರಿ ಟ್ರಾಫಿಕ್ ಪೊಲೀಸರ ಹೆಗಲಿಗೆ ಬಂದಿದೆ. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು ಹೊಸ ಪ್ಲಾನ್ ಮಾಡಿದ್ದು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಸ್ತೆ ಗುಂಡಿ‌ಮುಚ್ಚಲು ಹೊಸ ಪ್ಲಾನ್ ರೂಪಿಸಲಾಗಿದೆ.

ರಸ್ತೆ ಗುಂಡಿಗಳನ್ನ ಪತ್ತೆ ಹಚ್ಚಲು ಟ್ರಾಫಿಕ್ ಪೊಲೀಸರ ಸಹಾಯ ಪಡೆಯಲು ಪಾಲಿಕೆ ಯೋಜನೆ ಮಾಡಿದೆ. ಅಬ್ ಸ್ಟಾಕ್ಟ್  ಆಪ್ ಮೂಲಕ ಬಿಬಿಎಂಪಿ ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ಮುಂದಾಗಿದೆ.

ರಾಜ್ಯಕ್ಕೆ ಎದುರಾಗಿದೆ ಅಸಲಿ ಸವಾಲ್: ವ್ಯಾಕ್ಸಿನ್ ಹಂಚಿಕೆ ಸುಲಭವಿಲ್ಲ

ಟ್ರಾಫಿಕ್ ಇಲಾಖೆ ಹಾಗೂ ಬಿಬಿಎಂಪಿ ಇಂದ ಜಂಟಿ ಕಾರ್ಯಾಚರಣೆ ನಡೆಯಲಿದ್ದು, ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಮನ್ವಯ ಮೂಲಕ ಗುಂಡಿ ಮುಚ್ಚಿಸಲು ಸಿದ್ಧತೆ ನಡೆದಿದೆ.

ದಿನ ಬೆಳಗಾದ್ರೆ ರಸ್ತೆಗಳಲ್ಲೇ ಕೆಲಸ ನಿರ್ವಹಿಸೋ ಪೊಲೀಸರಿಂದ ಗುಂಡಿಗಳ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ.  ಫೋಟೋ ತೆಗೆದು ಲೋಕೇಶನ್ ಸೇರಿಸಿ ಆ್ಯಪ್ ಗೆ ಅಪ್ ಲೋಡ್ ಮಾಡೋ ಕೆಲಸ ಪೊಲೀಸರ ಹೆಗಲಿಗೆ ಬಂದಿದೆ.

ಅಮೆರಿಕ ಮತ್ತೆ ಕೊರೋನಾ ಹಾಟ್‌ಸ್ಪಾಟ್‌: ತುಂಬಿ ತುಳುಕುತ್ತಿವೆ ಶವಾಗಾರಗಳು!

ತಕ್ಷಣವೆ  ಸಂಬಂಧಿಸಿದ  ಅಧಿಕಾರಿಗಳು ಗುಂಡಿಯನ್ನ ಮುಚ್ಚುಬೇಕು.  ಜೊತೆಗೆ ಗುಂಡಿ ಇದ್ದ ಹಾಗೂ ಮುಚ್ಚಿದ ಫೋಟೋ ಎರಡನ್ನು ಅಪ್ ಲೋಡ್ ಮಾಡಬೇಕು.  ಇಲಾಖೆಗಳ ನಡುವೆ ನಡೆಯುವ ಸಮನ್ವತೆ ಮೀಟಿಂಗ್ ನಲ್ಲಿ ಮೇಲಾಧಿಕಾರಿಗಳು‌ ಈ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ.

Follow Us:
Download App:
  • android
  • ios