Asianet Suvarna News Asianet Suvarna News

ರಾಜ್ಯಕ್ಕೆ ಎದುರಾಗಿದೆ ಅಸಲಿ ಸವಾಲ್: ವ್ಯಾಕ್ಸಿನ್ ಹಂಚಿಕೆ ಸುಲಭವಿಲ್ಲ

ವ್ಯಾಕ್ಸಿನ್ ಸ್ಟೋರೇಜ್, ಸಾಗಣಿಕೆಗೆ ಪಕ್ಕಾ ಪ್ಲಾನ್ ಆಗಿದ್ದರೂ ಕಾಡಿದೆ ಸಮಸ್ಯೆ | ವ್ಯಾಕ್ಸಿನ್ ಹಂಚಿಕೆಗೆ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ ಟೆನ್ಶನ್ ಶುರು

Health department facing problem in storage and transport of covid19 vaccine dpl
Author
Bangalore, First Published Jan 4, 2021, 12:35 PM IST

ಬೆಂಗಳೂರು(ಜ.04): ವ್ಯಾಕ್ಸಿನ್ ಹಂಚಿಕೆಗೆ ಟಫ್ ಚಾಲೆಂಜ್ ಶುರುವಾಗಲಿದೆ. ವ್ಯಾಕ್ಸಿನ್ ಸ್ಟೋರೇಜ್, ಸಾಗಣಿಕೆಗೆ ಪಕ್ಕಾ ಪ್ಲಾನ್ ಆಗಿದ್ದರೂ ಸಮಸ್ಯೆ ಎದುರಾಗಿದೆ. ರಾಜ್ಯಕ್ಕೀಗ ಪಿಹೆಚ್‌ಸಿ ಸೆಂಟರ್‌ಗಳಗದ್ದೇ ದೊಡ್ಡ ತಲೆನೋವಾಗಿ ಕಾಡಿದೆ. ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಲಸಿಕೆ ಹಂಚಿಕೆ ಇನ್ನೊಂದು ಕಷ್ಟದ ಕೆಲಸವಾಗಿದೆ

ಡ್ರೈ ರನ್ ವೇಳೆ ಈ ಸಮಸ್ಯೆ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಸುಮಾರು 2195 ಪಿಹೆಚ್ ಸಿ ಸೆಂಟರ್ ಗಳಿವೆ. ಅದರಲ್ಲಿ ವ್ಯಾಕ್ಸಿನ್ ಹಂಚಿಕೆಗೆ ಬೇಕಾದಷ್ಟು ಜಾಗಕ್ಕೆ ಎಲ್ಲಾ ಕಡೆ ಸೌಲಭ್ಯವಿಲ್ಲ ಎನ್ನಲಾಗಿದೆ.

ಅಮೆರಿಕ ಮತ್ತೆ ಕೊರೋನಾ ಹಾಟ್‌ಸ್ಪಾಟ್‌: ತುಂಬಿ ತುಳುಕುತ್ತಿವೆ ಶವಾಗಾರಗಳು!

ವ್ಯಾಕ್ಸಿನ್ ಹಂಚಿಕೆಗೆ ಕನಿಷ್ಟ ಮೂರು ಕೊಠಡಿಗಳ ಅವಶ್ಯಕತೆ ಇದೆ. ಬಹುತೇಕ ಪಿಹೆಚ್ ಸಿಗಳಲ್ಲಿ ಮೂರು ಕೊಠಡಿಗಳ ಸೌಲಭ್ಯ ಸಿಗೋದಿಲ್ಲ. ಒಂದು ವೇಳೆ ಮೂರು ಕೊಠಡಿಗಳ ಸೆಂಟರ್ ನ್ನ ಬಳಸಿಕೊಂಡರು ಬೇರೆ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗುತ್ತದೆ ಎನ್ನಲಾಗಿದೆ.

ಇದೀಗ ಇದೇ ವಿಷಯ ಆರೋಗ್ಯ ಇಲಾಖೆಯ ಟೆನ್ಶನ್ ಹೆಚ್ಚಿಸಿದೆ. ಪಿಹೆಚ್ ಸಿ ಬದಲಿಗೆ ಬೇರೆ ಯಾವ ಜಾಗಗಳನ್ನ ಬಳಸಿಕೊಳ್ಳಬೇಕು ಎಂದು ಚಿಂತನೆ ನಡೆದಿದೆ. ವ್ಯಾಕ್ಸಿನ್ ಹಂಚಿಕೆಗೆ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ ಟೆನ್ಶನ್ ಕೂಡ ಹೆಚ್ಚಾಗಿದೆ.

2 ಸ್ವದೇಶಿ ಲಸಿಕೆಗೆ ಡಿಸಿಜಿಐ ಒಕೆ, ಕೊರೊನಾ ಮುಕ್ತದೆಡೆಗೆ ಭಾರತದ ಹೆಜ್ಜೆ

ಆರೋಗ್ಯ ಇಲಾಖೆ ಸೂಕ್ತವಾದ ಬೇರೆ ಜಾಗಗಳ ಹುಡುಕಾಟದಲ್ಲಿದೆ. ವ್ಯಾಕ್ಸಿನ್ ಹಂಚಿಕೆಗೆ ಡೀಪ್ ಫ್ರೀಜರ್ 3495, ಐಸ್ ಲೈನ್ಸ್ ರೆಫ್ರಿಜರೇಟರ್ಸ್ 3776, ವಾಕ್ ಇನ್ ಕೂಲರ್ಸ್ 09, ವಾಕ್ ಇನ್ ಫ್ರೀಜರ್ 05, ಕೋಲ್ಡ್ ಚೈನ್ ಪಾಯಿಂಟ್ಸ್ 2870 ಹೊಂದಿದೆ. ಆದ್ರೆ ಇವುಗಳನ್ನ ಪಿಹೆಚ್ ಸಿ ಸೆಂಟರ್ ಗಳಿಗೆ ತಂದು ಹಂಚಿಕೆ ಮಾಡುವುದೇ ಸವಾಲಿನ ಕೆಲಸವಾಗಿದೆ.

Follow Us:
Download App:
  • android
  • ios